More

    kmf ನಿಂದ ಈ ಬಾರಿ ದಾಖಲೆಯ ಸಿಹಿ ಮಾರಾಟ

    ಬೆಂಗಳೂರು:
    ದಸರಾ ಹಬ್ಬದ ಸಂದರ್ಭವನ್ನು ಬಳಸಿಕೊಂಡು ಈ ಬಾರಿ ಕೆಎಂಎ್ ಅತಿ ಹೆಚ್ಚು ಸಿಹಿ ಮಾರಾಟ ಮಾಡಿ ಹೊಸ ದಾಖಲೆ ಸೃಷ್ಟಿಸಿದೆ.
    ಮೈಸೂರು ಪಾಕ, ಪೇಡ ಸೇರಿದಂತೆ ನಾನಾ ಬಗೆಯ ಸಿಹಿಯನ್ನು ಪ್ರತಿ ವರ್ಷ 180 ರಿಂದ 200 ಮೆಟ್ರಿಕ್ ಟನ್ ಮಾರಾಟ ಮಾಡುತ್ತಿದ್ದ ಕೆಎಂಎ್ ಈ ಬಾರಿ 400 ಮೆಟ್ರಿಕ್ ಟನ್ ಬಿಡುಗಡೆ ಮಾಡಿರುವುದು ವಿಶೇಷ.
    ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಈ ಬಾರಿ ಮೊದಲೇ ಯೋಜನೆ ರೂಪಿಸಿದ್ದ ಕೆಎಂಎ್, ಎಲ್ಲವೂ ಯೋಜನಾ ಬದ್ದವಾಗಿ ಕಾರ್ಯಗತ ಆಗುವಂತೆ ನೋಡಿಕೊಂಡಿದ್ದರಿಂದ ಇದೆಲ್ಲವೂ ಸಾಧ್ಯವಾಗಿದೆ.

    ಬೇಸಿಗೆಗೂ ಪ್ಲಾನ್
    ಈ ಬಾರಿ ಬೇಸಿಗೆಯನ್ನ ನಿಭಾಯಿಸಲು ಕೆಎಂಎ್ ಯೋಜನೆ ರೂಪಿಸಿದೆ. ಈಗಿನಿಂದಲೇ ಬೇಸಿಗೆ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ನಂದಿನಿ ಉತ್ಪನ್ನಗಳನ್ನು ದಾಸ್ತಾನು ಮಾಡಲು ಯೋಜಿಸಿದೆ. ಬೇಸಿಗೆಯಲ್ಲಿ ಹಾಲು ಉತ್ಪಾದನೆ ತಗ್ಗುವುದರಿಂದ ಆಗ ಹೆಚ್ಚಿನ ಪ್ರಮಾಣದಲ್ಲಿ ನಂದಿನಿ ಉತ್ಪನ್ನಗಳನ್ನು ಮಾಡಲು ಹಾಲಿನ ಕೊರತೆಯಾಗಲಿದೆ. ಅದನ್ನು ಈಗಲೇ ಅಂದಾಜಿಸಿ ಮುಂದಾಲೋಚನಾ ಕ್ರಮ ತೆಗೆದುಕೊಳ್ಳಲಾಗಿದೆ.

    85 ಲಕ್ಷ ಲೀಟರ್ ಹಾಲು
    ಮಳೆಗಾಲದಲ್ಲಿ ಹಾಲಿನ ಬೇಡಿಕೆ ಪ್ರಮಾಣ ಏರುಗತಿಯಲ್ಲಿರುತಿತ್ತು. ಆದರೆ, ಬರ ಎದುರಾದ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಹಾಲು ಉತ್ಪಾದನೆ ಕಡಿಮೆಯಾಗಿತ್ತು. ಈಗ ಮತ್ತೆ ಕೆಎಂಎ್ಗೆ ಬರುತ್ತಿರುವ ಹಾಲಿನ ಪ್ರಮಾಣ ಹೆಚ್ಚಳವಾಗಿದ್ದು, 85 ಲಕ್ಷ ಲೀಟರ್ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 83 ಲಕ್ಷ ಲೀಟರ್ ಇತ್ತು.

    4 ತಿಂಗಳ ಸಹಾಯಧನ ಬಾಕಿ
    ಹೈನೋದ್ಯಮ ಪ್ರೋತ್ಸಾಹಿಸಲು ಸಕಾರ ಪ್ರತಿ ಲೀಟರ್‌ಗೆ 5 ರೂ ಸಹಾಯಧನ ನೀಡುತ್ತಿದ್ದು, ಕಳೆದ 4 ತಿಂಗಳಿಂದ ಬಾಕಿ ಬಿಡುಗಡೆ ಆಗಿಲ್ಲ. ಮೊದಲ ಕ್ವಾಟರ್ ಅಂದರೆ ಜೂನ್ ತನಕ ಸಹಾಯಧನ ಬಿಡುಗಡೆ ಆಗಿದೆ. ಜುಲೈ ತಿಂಗಳಿಂದ ಅಕ್ಟೋಬರ್ ತಿಂಗಳ ತನಕ ಬಾಕಿ ಇದೆ. ಪ್ರತಿ ತಿಂಗಳೂ ತಪ್ಪದೆ ತಮ್ಮ ಅಕೌಂಟ್‌ಗೆ ಸಹಾಯಧನ ಬಿಡುಗಡೆ ಮಾಡುವಂತೆ ಹಾಲು ಉತ್ಪಾದಕರು ಒತ್ತಾಯಿಸಿದ್ದಾರೆ. ಹಾಲು ಉತ್ಪಾದಕರ ಅಹವಾಲನ್ನು ಕೆಎಂಎ್ ಸರ್ಕಾರದ ಗಮನಕ್ಕೂ ತಂದಿದೆ. ನಾಲ್ಕು ತಿಂಗಳ ಬಾಕಿಯನ್ನು ಬಿಡುಗಡೆ ಮಾಡಿಸಲು ಸೂಕ್ತ ಕ್ರಮ ಕೈಗೊಂಡಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.

    ಮೆಕ್ಕೆಜೋಳ ಖರೀದಿ
    ಕೆಎಂಎ್ನಿಂದಲೇ ಪಶು ಆಹಾರ ಘಟಕಗಳಿಗೆ ನೇರವಾಗಿ ರೈತರಿಂದಲೇ ಮೆಕ್ಕೆ ಜೋಳ ಖರೀದಿ ಮಾಡಲಾಗುತ್ತಿದೆ. ಪ್ರತಿ ಕ್ವಿಂಟಾಲ್‌ಗೆ 2250 ರೂ ದರದಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೆಎಂಎ್ ತಿಳಿಸಿದೆ.

    *ದಸರಾ ಸಂದರ್ಭದಲ್ಲಿ ಈ ಬಾರಿ ದುಪ್ಪಟ್ಟು ಅಂದರೆ 400 ಮೆಟ್ರಿಕ್ ಟನ್ ಸಿಹಿ ಮಾರಾಟ ಮಾಡಿರುವುದು ಕೆಎಂಎ್ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಗಿದೆ. ವ್ಯವಸ್ಥಿತ ಯೋಜನೆ ಮತ್ತು ಗ್ರಾಹಕರ ಸ್ಪಂದನೆಯಿಂದ ಇದೆಲ್ಲವೂ ಸಾಧ್ಯವಾಗಿದೆ.
    ಜಗದೀಶ್, ಎಂಡಿ, ಕೆಎಂಎ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts