More

    ರಾಮನವಮಿ ದಿನ kmf ಮೊಸರು ದಾಖಲೆ ಮಾರಾಟ

    ಬೆಂಗಳೂರು:
    ರಾಮನವಮಿ ದಿನ ಕೆಎಂಎ್ ನಂದಿನಿ ಬ್ರಾಂಡ್‌ನ ಮೊಸರು 16.50 ಲಕ್ಷ ಕೆಜಿ ಮಾರಾಟವಾಗಿದ್ದು, ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ.
    ಪ್ರತಿ ದಿನ ಸರಾಸರಿಯಾಗಿ 9 ರಿಂದ 10 ಲಕ್ಷ ಕೆಜಿ ಮಾರಾಟವಾಗುತ್ತಿದ್ದ ಮೊಸರು ಬೇಸಿಗೆ ಪ್ರಾರಂಭವಾದ ಮೇಲೆ 12 ಲಕ್ಷ ಕೆಜಿಗೆ ಜಿಗಿದಿದೆ.ರಾಮನವಮಿಯ ಒಂದೇ ದಿನ 5 ಲಕ್ಷ ಜೆಜಿ ಹೆಚ್ಚುವರಿಯಾಗಿ ಮೊಸರಿನ ಬೇಡಿಕೆ ಬಂದಿರುವುದು ವಿಶೇಷ.

    80ಲಕ್ಷ ಲೀಟರ್ ಹಾಲು
    ಬೇಸಿಗೆಯಲ್ಲಿ ಹಾಲು ಉತ್ಪಾದನೆ ಕುಂಠಿತವಾಗುವುದು ವಾಡಿಕೆ. ಆದರೆ, ಈ ಬಾರಿ ಕೆಎಂಎ್ಗೆ ಪ್ರತಿ ನಿತ್ಯ 80 ಲಕ್ಷ ಲೀಟರ್ ಹಾಲು ಬರುತ್ತಿರುವುದು ವಿಶೇಷ. ಕಳೆದ ವರ್ಷ ಬೇಸಿಗೆಯಲ್ಲಿ 75 ಲಕ್ಷ ಲೀಟರ್ ಹಾಲು ಮಾತ್ರ ಬರುತ್ತಿತ್ತು. ಈ ವರ್ಷ 51 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿರುವುದು ಕೂಡ ದಾಖಲೆಯಾಗಿದೆ.

    ಹಾಲಿನ ಪೌಡರ್‌ಗೆ ಬೇಡಿಕೆ
    ಹೆಚ್ಚುವರಿಯಾಗಿ ಹಾಲು ಬಂದ ಸಂದರ್ಭದಲ್ಲಿ ಅದನ್ನು ಪೌಡರ್ ಮಾಡಿ ಸಂಗ್ರಹ ಮಾಡಿ ಇಟ್ಟುಕೊಳ್ಳಬೇಕಿತ್ತು. ಆದರೆ, ಈಗ ಪೌಡರ್‌ಗೆ ಕಳುಹಿಸುವ ಹಾಲಿನ ಪ್ರಮಾಣ ಗಣನೀಯವಾಗಿ ಇಳಿದುಹೋಗಿದೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಹಾಲಿನ ಪೌಡರ್ ಬೇಡಿಕೆ ಪ್ರಮಾಣ ಹೆಚ್ಚಾಗಿದ್ದು, ಕೆಜಿ. ಪೌಡರ್‌ಗೆ 200 ರೂ ಇದ್ದ ಬೆಲೆ 240 ರೂಗೆ ಜಿಗಿದಿದೆ.

    ಮಜ್ಜಿಗೆ, ಐಸ್ ಕ್ರೀಗೆ ಡಿಮ್ಯಾಂಡ್
    ಬೇಸಿಗೆ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಕೆಎಂಎ್ ಮಜ್ಜಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಹಾಗೆಯೇ ಐಸ್ ಕ್ರೀಂ ಸವಿಯುವ ಗ್ರಾಹಕರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಬೇಡಿಕೆ ಹೆಚ್ಚಳ ಹಿನ್ನೆಲೆಯಲ್ಲಿ ನಾನಾ ಪ್ಲೇವರ್‌ಗಳಲ್ಲಿ ಐಸ್ ಕ್ರೀಂ ಉತ್ಪಾದನೆಗೆ ಕೆಎಂಎ್ ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts