More

    ಪಶ್ಚಿಮ ಬಂಗಾಳದಲ್ಲಿ ರಾಮ ನವಮಿ ಮೆರವಣಿಗೆ ಮೇಲೆ ಬಾಂಬ್​ ದಾಳಿ: ಮೂವರ ಸ್ಥಿತಿ ಗಂಭೀರ!

    ಮುರ್ಷಿದಾಬಾದ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ವಿವಿಧೆಡೆ ರಾಮನವಮಿ ಆಚರಣೆಗೆ ದುಷ್ಕರ್ಮಿಗಳು ಅಡ್ಡಿಪಡಿಸಿದ್ದು, ಮುಸ್ಲಿಂರು ಪ್ರಾಬಲ್ಯವಿರುವ ಮುರ್ಷಿದಾಬಾದ್‌ನಲ್ಲಿ ಕಲ್ಲು ತೂರಾಟದಿಂದ ಬಾಂಬ್ ದಾಳಿಯವರೆಗೆ ಹಿಂಸಾಚಾರಗಳು ನಡೆದವು. ರಾಮನವಮಿ ಆಚರಿಸುತ್ತಿದ್ದ ಜನರಲ್ಲಿ ಮಹಿಳೆ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ.. ಕೋಳಿಗಳನ್ನು ಕೊಲ್ಲಲು ಸರ್ಕಾರ ಆದೇಶ!

    ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಂತಿರುವ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ರಾಮನವಮಿ ಆಚರಿಸುವುದನ್ನೇ ಗುರಿಯಾಗಿಸಿ ದಾಳಿಗಳನ್ನು ನಡೆಸಲಾಗಿದೆ. ಬರ್ಹಾಂಪೋರ್​ ನಲ್ಲಿ ಬಾಂಬ್​ ದಾಳಿಯಲ್ಲಿ ಗಾಯಗೊಂಡು ಮೂವರು ಆಸ್ಪತ್ರೆಗೆ ದಾಖಲಾಗಿರುವ ಮೂವರ ಸ್ಥಿತಿ ಚಿಂತಾಜನಕವಾಗಿದೆ.

    ಮುರ್ಷಿದಾಬಾದ್‌ನ ಶಕ್ತಿಪುರದಲ್ಲಿ ಬಾಂಬ್​ ದಾಳಿಯಲ್ಲಿ ಸುಮಾರು 20 ಜನರು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆತರಲಾಯಿತು. ಉಳಿದವರನ್ನು ಸ್ಥಳೀಯ ಕರ್ಣಸುಬರ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ ಅಲ್ಲದೆ, ಮಾಣಿಕ್ಯಹಾರ್ ಪ್ರದೇಶದಲ್ಲಿ ಹಲವು ಅಂಗಡಿಗಳನ್ನು ಲೂಟಿ ಮಾಡಲಾಗಿದೆ. ಶಕ್ತಿಪುರದ ಮನೆಯೊಂದರ ಮೇಲ್ಛಾವಣಿಯಿಂದ ಮೆರವಣಿಗೆಯ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸ್ಥಳದಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂದಿದೆಯಾದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ‘ಪ್ರಚೋದನಕಾರಿ ಭಾಷಣಗಳು’ ಉದ್ವಿಗ್ನತೆಗೆ ಕಾರಣವಾಗಿದೆ. ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸುತ್ತಿದ್ದಾಗ ಪೊಲೀಸರು ಸುಮ್ಮನಾದರು ಎಂದು ಬಿಜೆಪಿ ಆರೋಪಿಸಿದೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇವೆ” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಚಟ್ಟೋಪಾಧ್ಯಾಯ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಬಿಜೆಪಿಯು ಚುನಾವಣೆಗೆ ಮುನ್ನ ಗಲಭೆಗಳನ್ನು ರೂಪಿಸಲು ಪ್ರಯತ್ನಿಸುತ್ತಿದೆ. ಇಂತಹ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ, ಇದು ಬಿಜೆಪಿಯ ಕೈವಾಡ” ಎಂದು ಟಿಎಂಸಿ ನಾಯಕ ಶಾಂತನು ಸೇನ್ ಹೇಳಿದ್ದಾರೆ.

    ಹಿಂದೂ ಜಾಗರಣ ಮಂಚ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ರಾಜ್ಯಾದ್ಯಂತ 5,000 ಕ್ಕೂ ಹೆಚ್ಚು ರಾಮನವಮಿ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. “ಹಿಂದೂ ಐಕ್ಯತೆಯು ರಾಜಕೀಯವನ್ನು ಮೀರಿದೆ, ಇದು ಭಗವಾನ್ ರಾಮನಲ್ಲಿನ ನಂಬಿಕೆಗೆ ಸಂಬಂಧಿಸಿದೆ” ಎಂದು ವಿಎಚ್‌ಪಿಯ ರಾಷ್ಟ್ರೀಯ ಸಹಾಯಕ ಕಾರ್ಯದರ್ಶಿ ಸಚೀಂದ್ರನಾಥ ಸಿಂಘಾ ಹೇಳಿದ್ದಾರೆ.

    ಮೇ 4 ರಂದು ಮುರ್ಷಿದಾಬಾದ್ ನಲ್ಲಿ ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಎಂದು ಬಿಜೆಪಿ ಆರೋಪಿಸಿದೆ.

    ‘ಎಲ್ಲರ ಆತಂಕ ನಿವಾರಿಸಿ, ಪವಿತ್ರ್ಯತೆ ಇರಬೇಕು’, ವಿವಿಪ್ಯಾಟ್​ ಪ್ರಕರಣದಲ್ಲಿ ಇಸಿಗೆ ಸುಪ್ರೀಂಕೋರ್ಟ್​ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts