More

    ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ.. ಕೋಳಿಗಳನ್ನು ಕೊಲ್ಲಲು ಸರ್ಕಾರ ಆದೇಶ!

    ತಿರುವನಂತಪುರಂ (ಕೇರಳ): ಕೇರಳದ ಆಲಪ್ಪುಳ ಜಿಲ್ಲೆಯ ವಿವಿಧೆಡೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಕೋಳಿಗಳನ್ನು ನಾಶಪಡಿಸಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

    ಇದನ್ನೂ ಓದಿ: ‘ಎಲ್ಲರ ಆತಂಕ ನಿವಾರಿಸಿ, ಪವಿತ್ರ್ಯತೆ ಇರಬೇಕು’, ವಿವಿಪ್ಯಾಟ್​ ಪ್ರಕರಣದಲ್ಲಿ ಇಸಿಗೆ ಸುಪ್ರೀಂಕೋರ್ಟ್​ ಸಲಹೆ

    ಆಲಪ್ಪುಳ ಜಿಲ್ಲೆಯ 2ಗ್ರಾಮ ಪಂಚಾಯಿತಿಗಳಲ್ಲಿ ಏವಿಯನ್ ಇನ್ಫ್ಲುಯೆನ್ಸ(ಎಚ್5ಎನ್1) ಪಾಸಿಟಿವ್ ಕಂಡುಬಂದಿದೆ. ಬಾತುಕೋಳಿಗಳ ಮಾದರಿ ಪರೀಕ್ಷಿಸಿದ ನಂತರ ಹಕ್ಕಿ ಜ್ವರ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎಡತ್ವ ಪಂಚಾಯತ್‌ನ ವಾರ್ಡ್ 1 ವಿಲಕ್ಕುಮಾರಂ ಕೋಳಿಫಾರಂ, ಮತ್ತು ಚೆರುತನ ಪಂಚಾಯಿತಿಯ ವಾರ್ಡ್ 3 ರಲ್ಲಿ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ತರಹದ ಲಕ್ಷಣಗಳು ಕಂಡುಬಂದ ನಂತರ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನ ಲ್ಯಾಬ್‌ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮಾದರಿಗಳು ಎಚ್5ಎನ್1 ಪಾಸಿಟಿವ್ ಎಂದು ಪರೀಕ್ಷಾ ವರದಿಗಳು ದೃಢಪಡಿಸಿವೆ. ಬಳಿಕ ಹಕ್ಕಿ ಜ್ವರ ಹತೋಠಿಗೆ ಸಮಗ್ರ ಕ್ರಿಯಾ ಯೋಜನೆಯನ್ನು ಸರ್ಕಾರ ರೂಪಿಸಿದೆ. ಪರಿಸ್ಥಿತಿ ಅವಲೋಕಿಸಲು ಜಿಲ್ಲಾ ಅಧಿಕಾರಿ ತುರ್ತು ಪರಿಶೀಲನಾ ಸಭೆ ಕರೆದಿದ್ದಾರೆ.

    ಪ್ರಾರಂಭದಲ್ಲಿ ರೋಗ ಕಾಣಿಸಿಕೊಂಡ 1ಕಿಮೀ ವ್ಯಾಪ್ತಿಯಲ್ಲಿ ಕೋಳಿಗಳನ್ನು ಕೊಲ್ಲುವ ಪ್ರಕ್ರಿಯೆ ಪ್ರಾರಂಭಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಪಶುಪಾಲನಾ ಇಲಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಕ್ಷಿಪ್ರ ಕ್ರಿಯಾ ಪಡೆ ರಚಿಸಲಾಗಿದೆ.

    ಇನ್ನು ರಾಜ್ಯ ಸರ್ಕಾರ ಭಯಭೀತರಾಗದಂತೆ ಜನರಲ್ಲಿ ಮನವಿ ಮಾಡಿದೆ. ಮನುಷ್ಯರಲ್ಲಿ ಹಕ್ಕಿಜ್ವರ ಪ್ರಸರಣದ ಸಾಧ್ಯತೆ ಕಡಿಮೆ ಎಂದು ಸರ್ಕಾರ ಭರವಸೆ ನೀಡಿದೆ.

    ಬರ್ಡ್ ಫ್ಲೂ ಎಂದರೇನು: ಬರ್ಡ್ ಫ್ಲೂ ಅಥವಾ ಏವಿಯನ್ ಇನ್ಫ್ಲುಯೆನ್ಸವು ಪಕ್ಷಿಗಳಲ್ಲಿ ಹೆಚ್ಚಾಗಿ ಕಂಡುಬರುವ ವೈರಸ್ ಆಗಿದೆ. ಕೆಲವು ಸಂದರ್ಭಗಳಲ್ಲಿ, ಇದು ಮನುಷ್ಯರಿಗೆ ಹರಡಬಹುದು.

    ಲಕ್ಷಣಗಳು: ಹಕ್ಕಿ ಜ್ವರದ ಲಕ್ಷಣಗಳೆಂದರೆ ಕೆಮ್ಮು, ಗಂಟಲು ಏರಿಳಿತ, ಮೂಗು ಸೋರುವುದು, ಮೈಕೈ ನೋವು, ತಲೆನೋವು ಮತ್ತು ಉಸಿರಾಟದ ತೊಂದರೆ ಇರುತ್ತದೆ. ಇದರ ಜೊತೆಗೆ ವಾಂತಿ ಮತ್ತು ಭೇದಿಯಾಗುತ್ತದೆ. ಸಾಮಾನ್ಯವಾಗಿ ರೋಗಲಕ್ಷಣಗಳು ಎರಡರಿಂದ ಎಂಟು ದಿನಗಳಲ್ಲಿ ಉಲ್ಬಣಗೊಳ್ಳುತ್ತವೆ.

    ಮುನ್ನೆಚ್ಚರಿಕೆ: ಕೋಳಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುವ ಜನರು ಕೈಗವಸುಗಳನ್ನು ಧರಿಸಲು ಮತ್ತು ಕೋಳಿಗಳನ್ನು ಇರಿಸಲಾಗುವ ಮನೆಗಳನ್ನು ತೊಳೆಯಲು ಸೂಚಿಸಲಾಗುತ್ತದೆ.

    ಪೋಸ್ಟ್ ಆಫೀಸ್ ಯೋಜನೆ: ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್.. ತಿಂಗಳಿಗೆ 20,500ರೂ. ಪಡೆಯಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts