More

    ಮನೆಯಿಂದ ಮತದಾನ ಶೇ. 96.05ರಷ್ಟು

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಧಾರವಾಡ ಲೋಕಸಭಾ ಮತೇತ್ರ ವ್ಯಾಪ್ತಿಯ ವಿಧಾನಸಭಾ ಮತೇತ್ರಗಳಲ್ಲಿ 1,141 ಜನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು 368 ಜನ ಅಂಗವಿಕಲರು ಸೇರಿ ಒಟ್ಟು 1,509 ಜನರು ಮನೆಯಿಂದ ಮತ ಚಲಾಯಿಸಿದ್ದಾರೆ. ಏ. 25, 26ರಂದು ಸೇರಿ ಶೇ.96.05 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
    ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ 1,193 ಜನ ಹಿರಿಯ ನಾಗರಿಕರು ಮತ್ತು 378 ಅಂಗವಿಕಲರು ಸೇರಿ ಒಟ್ಟು 1,571 ಜನ ಮತದಾರರು ಮನೆಯಿಂದ ಮತದಾನಕ್ಕೆ ನೋಂದಾಯಿಸಿದ್ದರು. ಈ ಪೈಕಿ 1,509 ಜನರು ಮತ ಚಲಾಯಿಸಿದ್ದಾರೆ.
    ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 148 ಹಿರಿಯ ನಾಗರಿಕರು, 82 ಅಂಗವಿಕಲರು ಸೇರಿ ಒಟ್ಟು 230 ಜನ, ಕುಂದಗೋಳದಲ್ಲಿ 67 ಹಿರಿಯ ನಾಗರಿಕರು ಮತ್ತು 31 ಅಂಗವಿಕಲರು ಸೇರಿ 98, ಧಾರವಾಡ (71)ದಲ್ಲಿ 267 ಹಿರಿಯ ನಾಗರಿಕರು, 91 ಅಂಗವಿಕಲರು ಸೇರಿ ಒಟ್ಟು 358 ಜನ ಮನೆಯಿಂದ ಮತದಾನ ಮಾಡಿದ್ದಾರೆ.
    ಹು&ಧಾ ಪೂರ್ವದಲ್ಲಿ 113 ಹಿರಿಯ ನಾಗರಿಕರು, 36 ಅಂಗವಿಕಲರು ಸೇರಿ ಒಟ್ಟು 149 ಜನ, ಹು&ಧಾ ಸೆಂಟ್ರಲ್​ನಲ್ಲಿ 188 ಹಿರಿಯ ನಾಗರಿಕರು, 30 ಅಂಗವಿಕಲರು ಸೇರಿ 218 ಜನ, ಹು&ಧಾ ಪಶ್ಚಿಮದಲ್ಲಿ 263 ಹಿರಿಯ ನಾಗರಿಕರು, 45 ಅಂಗವಿಕಲರು ಸೇರಿ 308, ಕಲಟಗಿಯಲ್ಲಿ 95 ಹಿರಿಯ ನಾಗರಿಕರು ಮತ್ತು 53 ಅಂಗವಿಕಲರು ಸೇರಿ 148 ಜನ ಮತದಾನ ಮಾಡಿದ್ದಾರೆ.
    ಮತದಾನಕ್ಕೆ ನೋಂದಾಯಿಸಿಕೊಂಡಿದ್ದರೂ ಮತದಾನ ಪೂರ್ವ ದಿನಗಳಲ್ಲಿ 16 ಜನ ಹಿರಿಯ ನಾಗರಿಕರು ಮತ್ತು ಒಬ್ಬ ಅಂಗವಿಕಲ ಸೇರಿ 17 ಜನ ಮರಣ ಹೊಂದಿದ್ದಾರೆ. ಉಳಿದಂತೆ ಸಮಯ ನಿಗದಿಗೊಳಿಸಿದ್ದ 36 ಜನ ಹಿರಿಯ ನಾಗರಿಕರು ಹಾಗೂ 9 ಅಂಗವಿಕಲರು ಸೇರಿ ಒಟ್ಟು 62 ಜನರು ಅನಾರೋಗ್ಯ, ವಲಸೆ ಹಾಗೂ ನೀಡಿದ ವಿಳಾಸ, ಸ್ಥಳದಲ್ಲಿ ಇಲ್ಲದ ಕಾರಣ ಮತದಾನದಿಂದ ಹೊರಗುಳಿದಿದ್ದಾರೆ ಎಂದು ದಿವ್ಯ ಪ್ರಭು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts