More

    ಇಂದು ದೆಹಲಿಯಲ್ಲಿ ಲಂಕಾ-ಬಾಂಗ್ಲಾದೇಶ ಮುಖಾಮುಖಿ: ಶಕೀಬ್ ಅಲ್ ಹಸನ್ ಪಡೆಗೆ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಕಳೆದುಕೊಳ್ಳುವ ಭೀತಿ!

    ನವದೆಹಲಿ: ಟೂರ್ನಿಯಲ್ಲಿ ನೀರಸ ನಿರ್ವಹಣೆಯೊಂದಿಗೆ ಉಪಾಂತ್ಯದ ರೇಸ್‌ನಲ್ಲಿ ಉಳಿಯಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಮಾಜಿ ಚಾಂಪಿಯನ್ ಶ್ರೀಲಂಕಾ ಹಾಗೂ ಈಗಾಗಲೆ ಸೆಮೀಸ್ ಆಸೆ ಕೈಚೆಲ್ಲಿರುವ ಬಾಂಗ್ಲಾದೇಶ ತಂಡಗಳು ಸೋಮವಾರ ರಾಷ್ಟ್ರ ರಾಜಧಾನಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಶಕೀಬ್ ಅಲ್ ಹಸನ್ ಪಡೆಗೆ ಈ ಪಂದ್ಯ ಮಹತ್ವದ್ದಾಗಿದೆ.
    ಶ್ರೀಲಂಕಾಕ್ಕೆ ಟೂರ್ನಿಯ ಆರಂಭದಿಂದಲೂ ಪ್ರಮುಖ ಆಟಗಾರರ ಅನುಪಸ್ಥಿತಿ ನಡುವೆ ಆಟಗಾರರ ಅಸ್ಥಿರ ಪ್ರದರ್ಶನ ಪ್ರಮುಖ ಹಿನ್ನಡೆಯಾಗಿದೆ. ಆಡಿರುವ 7 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 5ರಲ್ಲಿ ಸೋತಿರುವ ಲಂಕಾ 4 ಅಂಕದೊಂದಿಗೆ ಏಳನೇ ಸ್ಥಾನದಲ್ಲಿದೆ. ಇತ್ತ ಬಾಂಗ್ಲಾದೇಶ ಇಷ್ಟೇ ಪಂದ್ಯಗಳಲ್ಲಿ 5ರಲ್ಲಿ ಸೋತು, 1 ಪಂದ್ಯ ಗೆದ್ದು 2 ಅಂಕದೊಂದಿಗೆ 9ನೇ ಸ್ಥಾನದಲ್ಲಿದ್ದು, ಚಾಂಪಿಯನ್ಸ್ ಟ್ರೋಫಿ ಅರ್ಹತೆ ಕಳೆದುಕೊಳ್ಳುವ ಭೀತಿಯಲ್ಲಿದೆ. ಆರಂಭಿಕ ಮೂರು ಪಂದ್ಯಗಳ ಸೋಲಿನ ನಂತರ ಗೆಲುವಿನ ಲಯಕ್ಕೆ ಮರಳಿದ ಲಂಕಾ ಹಿಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರು ಹೀನಾಯ ಸೋಲು ಅನುಭವಿಸಿದೆ. ಭಾರತೀಯ ಪಿಚ್‌ನಲ್ಲಿ ಪರಿಣಾಮಕಾರಿಯಾಗಬಲ್ಲ ಸ್ಪಿನ್ನರ್‌ಗಳ ಕೊರತೆ ತಂಡಕ್ಕಿದೆ. ದಿಲ್ಶಾನ್ ಮಧುಶಂಕ ಪರಿಣಾಮಕಾರಿ ಎನಿಸಿದ್ದಾರೆ. ಬ್ಯಾಟರ್‌ಗಳ ವೈಲ್ಯ ಶ್ರೀಲಂಕಾ ತಂಡವನ್ನು ಶೋಚನೀಯ ಸ್ಥಿತಿಗೆ ತಲುಪುವಂತೆ ಮಾಡಿದೆ. ಬಾಕಿಯಿರುವ 2 ಪಂದ್ಯಗಳಲ್ಲಿ ಗೆದ್ದರೂ ಇತರ ಪಂದ್ಯಗಳ ಲಿತಾಂಶ ವರದಾನವಾಗಬೇಕು. ಟೂರ್ನಿಯಲ್ಲಿ ಬಾಂಗ್ಲಾಗೆ ಇದು ಔಪಾಚಾರಿಕ ಪಂದ್ಯ ಎನಿಸಿದ್ದು, ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆಯಲು ಪೈಪೋಟಿ ನಡೆಸಲಿದೆ. ಎರಡೂ ತಂಡದ ಬ್ಯಾಟರ್‌ಗಳು ವೇಗಿಗಳ ಎದುರು ರನ್‌ಗಳಿಸಲು ಪರದಾಡಿದ್ದಾರೆ.

    ವಿಶ್ವಕಪ್ ಮುಖಾಮುಖಿ- 4
    ಶ್ರೀಲಂಕಾ-3
    ಬಾಂಗ್ಲಾದೇಶ-0
    ರದ್ದು-1

    ಏಕದಿನ ಮುಖಾಮುಖಿ-53
    ಶ್ರೀಲಂಕಾ- 42
    ಬಾಂಗ್ಲಾದೇಶ-9
    ರದ್ದು-2

    ಆರಂಭ: ಮಧ್ಯಾಹ್ನ 2
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts