ಹಾವೇರಿ ಹೋರಿ ನೋಡಲು ಹೋಗಿ ಗೋರಿ ಸೇರಿದ!

Chandru Eerappa Edited
Published on

ಹಾವೇರಿ: ಮನರಂಜನೆ ಒಮ್ಮೆಮ್ಮೆ ಮಾರಣಾಂತಿಕವೂ ಆಗಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ. ಖುಷಿಗೆ ನೋಡೋಣ ಎಂದು ಹೋದವನಿಗೆ ಖುಷಿ ಜತೆ ನೋವೂ ಸಿಕ್ಕಿದ್ದಲ್ಲದೆ ಪ್ರಾಣವನ್ನೂ ಕಳೆದುಕೊಳ್ಳುವಂತಾಗಿದೆ.

ಅಷ್ಟಕ್ಕೂ ಇಷ್ಟೆಲ್ಲ ನಡೆದದ್ದು ಹಾವೇರಿ ತಾಲೂಕಿನಲ್ಲಿ. ಇಲ್ಲಿನ ಕೆರಿಮತ್ತಹಳ್ಳಿಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ. ಇದರಲ್ಲಿ ಆಟೋಚಾಲಕ ರಾಣೆಬೆನ್ನೂರ ತಾಲೂಕಿನ ಅಸುಂಡಿ ಗ್ರಾಮದ ಚಂದ್ರು ಈರಪ್ಪನವರ (20) ಮೃತಪಟ್ಟಿದ್ದಾರೆ.

ರಾಣೆಬೆನ್ನೂರ ನಗರದಲ್ಲಿ ಆಟೋ ಓಡಿಸಿಕೊಂಡಿದ್ದ ಈತ ವಿವಿಧ ಸಂಘಟನೆಗಳು ಸೇರಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಆಗಮಿಸಿದ್ದ. ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡುತ್ತ ಖುಷಿಯಲ್ಲಿ ಮೈಮರೆತಿದ್ದ ಈತನಿಗೆ ಹೋರಿ ತಿವಿದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಾವೇರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net