

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಓಪನ್ ಆಫರ್ ಕೊಟ್ಟಿದ್ದು, ಡಿಕೆಶಿ ನಾಳೆ ಸಿಎಂ ಆಗೋದಾದ್ರೆ ಜೆಡಿಎಸ್ನ 19 ಶಾಸಕರ ಬೆಂಬಲವಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಡಿಕೆಶಿ ನಾಳೆ ಸಿಎಂ ಆಗೋದಾದ್ರೆ ಜೆಡಿಎಸ್ ಶಾಸಕರ ಬೆಂಬಲವಿದೆ ಎಂದ ಕುಮಾರಸ್ವಾಮಿ, "ಜೆಡಿಎಸ್ನ 19 ಶಾಸಕರು ಬೆಂಬಲ ಕೊಡುತ್ತಾರೆ. ಈ ಸರ್ಕಾರಕ್ಕೆ ನಾನೊಂದು ಹೆಸರಿಡಬಹುದಾ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಸರ್ಕಾರಕ್ಕೆ ಟಿಸಿಎಂ, ಡಿಸಿಎಂ ಎಂದು ಹೆಸರಿಟ್ಟ ಎಚ್ಡಿಕೆ, ಟೆಂಪರೆರಿ ಚೀಫ್ ಮಿನಿಸ್ಟರ್, ಡುಪ್ಲಿಕೇಟ್ ಚೀಫ್ ಮಿನಿಸ್ಟರ್" ಎಂದು ಲೇವಡಿ ಮಾಡಿದರು.
"ಈಗ ಪರಿಹಾರ ವಿಷಯದಲ್ಲೂ ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುತ್ತಿಲ್ಲ ನಾವೇನು ಗುಲಾಮರಲ್ಲ ಎನ್ನುತಾರೆ. ಇಲ್ಲಿ ಯಾರು ಗುಲಾಮರಲ್ಲ. ಈ ರಾಜ್ಯ ಅಥವಾ ದೇಶ ಆಳುವಂತವರೇ ಆಗಲಿ, ಜನಪ್ರತಿನಿಧಿಗಳಾಗಲಿ ನಾವು ಈ ನಾಡಿನ ಜನತೆಯ ಗುಲಾಮರು ಇದು ನನ್ನ ಅಭಿಪ್ರಾಯದಲ್ಲಿ" ಎಂದರು.
"ಗದಗ, ಹೊಸಪೇಟೆ ಈ ಭಾಗಗಳಿಗೆ ತೆರಳಿದ ನಮ್ಮ ಮುಖ್ಯಮಂತ್ರಿಗಳು ಡ್ಯಾನ್ಸ್ ಮಾಡಿದರು, ಸಂಭ್ರಮಾಚರಣೆ ಮಾಡಿಕೊಂಡು ಬಂದ್ರಲ್ಲಾ, ಗದಗ ಜಿಲ್ಲೆಯಲ್ಲಿ ಪರಿಸ್ಥಿತಿ ಏನಾಗಿದೆ ಎಂಬುದು ತಿಳಿದಿದೆಯಾ? ಆ ರೈತರ ಬದುಕಿಗೆ ಏನಾದರೂ ಸಂದೇಶ ಕೊಟ್ಟು ಬಂದಿದ್ದೀರಾ ಎಂಬುದನ್ನು ಕೇಳಲು ಬಯಸುತ್ತೇನೆ" ಎಂದು ಎಚ್ಡಿಕೆ ಹೇಳಿದರು.