ಆಥಿರ್ಕ ದಿವಾಳಿಯತ್ತ ಗದಗ ನಗರಸಭೆ! ಗುತ್ತಿಗೆದಾರರಿಗೆ ಗೊಂದಲ, ತೆರಿಗೆದಾರರಿಗೆ ಸಂಕಟ

13455
Published on

ಶಿವಾನಂದ ಹಿರೇಮಠ ಗದಗ
ಗದಗ ನಗರಸಭೆ ಖಾಲಿ ಡಬ್ಬದಂತೆ ಮತ್ತೇ ಸದ್ದು ಮಾಡುತ್ತಿದೆ. ಸಮಪರ್ಕ ಆಯ ವ್ಯಯ ಇಲ್ಲದಿದ್ದರೂ, ನಿಯಮ ಬಾಹಿರವಾಗಿ ಸಾಮಾನ್ಯ ನಿಧಿಯಿಂದ ಹತ್ತಾರು ಕೋಟಿ ಮೊತ್ತದ ಹಲವು ಕಾಮಗಾರಿಗಳಿಗೆ ನಗರಸಭೆ ಮಂಜೂರಾತಿ ನೀಡಿ, ಅಯವ್ಯಯ ನಿಯಮ ಉಲ್ಲಂಘಿಸಿದೆ. ಪ್ರತಿ ತಿಂಗಳು ಅಂದಾಜು 47 ಲಕ್ಷ ರೂ. ಬಜೆಟ್​ ಕೊರತೆ ಇದ್ದು, ಈಗಾಗಲೇ 3 ಕೋಟಿ ನಷ್ಟದಲ್ಲಿ ಇರುವ ಸಾಮಾನ್ಯ ನಿಧಿಯಿಂದಲೇ ವೆಚ್ಚ ಭರಿಸುವಂತೆ ಅಂದಾಜು 35 ಕೋಟಿ ವೆಚ್ಚದ 200 ಕ್ಕೂ ಕಾಮಗಾರಿಗಳಿಗೆ ಸಾಮಾನ್ಯ ಸಭೆಯಲ್ಲಿ ಮಂಜೂರಾತಿ ನೀಡಲಾಗಿದ್ದು, ಗದಗ ನಗರಸಭೆ ಆಥಿರ್ಕ ದಿವಾಳಿಯತ್ತ ಸಾಗುತ್ತಿದೆ.
ನಗರಸಭೆ ಸಾಮಾನ್ಯ ನಿಧಿಗೆ ಆಥಿರ್ಕ ಸಂಪನ್ಮೂಲ ಒಳ ಹರಿವಿನ ತೀವ್ರ ಕೊರತೆ ಇದ್ದರೂ ಕೋಟ್ಯಂತರ ರೂ. ಕಾಮಗಾರಿಗಳಿಗೆ ಸಾಮಾನ್ಯ ಸಭೆಯಲ್ಲಿ ಮಂಜೂರಾತಿ ಠರಾವು ಪಾಸು ಮಾಡಿದ್ದರ ಒಳಮರ್ಮದ ಗುಟ್ಟೇನು ಎಂಬುದು ಸಾರ್ವಜನಿಕರಲ್ಲಿ ಅನುಮಾನ ಮೂಡುತ್ತಿದೆ. ಆಥಿರ್ಕ ಸಂಪನ್ಮೂಲದ ಒಳ ಮತ್ತು ಹೊರ ಹರಿವಿನ ವೆಚ್ಚಕ್ಕೆ ಸರಿದೂಗಿಸುವಂತೆ ಅಭಿವೃದ್ಧಿ ಕಾಮಗಾಗಳನ್ನು ಕೈಗೆತ್ತಿಕೊಳ್ಳುವ "ಆಯವ್ಯಯ ನಿಯಮ'ವನ್ನು ನಗರಸಭೆ ಉಲ್ಲಂಘಿಸಲಾಗಿದೆ. ಸದ್ಯ ನಗರಸಭೆಯ ದೈನಂದಿನ ವೆಚ್ಚಕ್ಕಿಂತಲೂ ಆದಾಯ ಸಂಗ್ರಹ ಕಡಿಮೆ ಇದೆ.
ಹಲವು ಬಾಬ್ತುಗಳ ಪಾವತಿ ಬಾಕಿ ಇರುವ ನಗರಸಭೆ ಸಾಮಾನ್ಯ ನಿಧಿಯಲ್ಲಿ ಈಗಲೇ 3 ಕೋಟಿ ರೂ. ಆಥಿರ್ಕ ಸಂಪನ್ಮೂಲದ ಕೊರತೆ ಇದೆ. ಹೀಗಿದ್ದರೂ ನ.30 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅಂದಾಜು 12 ಕೋಟಿ ರೂಪಾಯಿಗೂ ಅಧಿಕ ಮೊತ್ತದ 124 ಕಾಮಗಾರಿಗಳಿಗೆ ಮಂಜೂರಾತಿ ನೀಡಿದ್ದು ವಿಪರ್ಯಾಸ. ಇದಕ್ಕೂ ಮೊದಲು ಸದ್ದಿಲ್ಲದೇ ಅಂದಾಜು 25 ಕೋಟಿ ಮೊತ್ತದ ಹಲವು ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಠರಾವಿಲ್ಲದೇ ಹಲವು ಕಾಮಗಾರಿಗಳು ಜಾರಿಯಲ್ಲಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಭಿವೃದ್ಧಿ ಮುಖವಾಡ ಹೊತ್ತ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಲವು ಕಾಮಗಾರಿಗಳಿಗೆ ಅನಮೋದನೆ ನೀಡಿ ಗುತ್ತಿಗೆದಾರರಿಗೆ ವಿಶ್ವಾಸಕ್ಕೆ ಧಕ್ಕೆ ತರುತ್ತಿದ್ದಾರೆ.

70 ಲಕ್ಷ ರೂ. ಆದಾಯ, 1.06 ಕೋಟಿ ವೆಚ್ಚ?
ಆಸ್ತಿ ತೆರಿಗೆ, ವಾಣಿಜ್ಯ ಬಾಡಿಗೆ, ಮಳಿಗೆ ಲೈಸೆನ್ಸ್​, ಖಾತಾ ವರ್ಗಾವಣೆ ಸೇರಿದಂತೆ ಹಲವು ಮೂಲಗಳಿಂದ ಪ್ರತಿ ತಿಂಗಳು ನಗರಸಭೆಗೆ 70 ಲಕ್ಷ ರೂ. ಸಾಮಾನ್ಯ ನಿಧಿ ಆದಾಯವಿದೆ. ಪೌರ ಕಾಮಿರ್ಕ ವೇತನ. ನತಾಜ್ಯ ನಿರ್ವಹಣೆ, ನೀರು ಸರಬರಾಜು ನಿರ್ವಹಣೆ, ವಿದ್ಯುತ್​ ದೀಪ ನಿರ್ವಹಣೆ, ವಾಹನಗಳಿಗೆ ಇಂಧನ, ಹೊರಗುತ್ತಿಗೆ ನೌಕರ ಸಂಬಳ ಮತ್ತು ಕಚೇರಿ ನಿರ್ವಹಣೆ ಸೇರಿ 1.06 ಕೋಟಿ ರೂ. ಪ್ರತಿ ತಿಂಗಳು ವೆಚ್ಚ ಭರಿಸಬೇಕಿದೆ. ಹಾಗಾಗಿ ಪ್ರತಿ ತಿಂಗಳು 30 ಲಕ್ಷ ಆದಾಯ ಸಂಗ್ರಹ ಕೊರತೆ ಇದೆ. ಹೀಗಾಗಿ, ಸಾಮಾನ್ಯ ನಿಧಿಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ವಿನಿಯೋಗ ಅಸಾಧ್ಯವಾದರೂ, ಹುಚ್ಚನ ಮದುವೆಯಲ್ಲಿ ಉಂಡವನೆ ಜಾಣ ಎಂಬಂತೆ ನಗರಸಭೆಯಲ್ಲಿ ವ್ಯವಹಾರ ನಡೆಯುತ್ತಿದೆ.

ಮಧ್ಯಂತರ ಪರಿಹಾರ:
ಪ್ರತಿ ತಿಂಗಳು 30 ಲಕ್ಷ ಕೊರತೆ ಬಜೆಟ್​ ಇರುವ ಸಾಮಾನ್ಯ ನಿಧಿಯಿಂದಲೇ ಪ್ರತಿ ತಿಂಗಳು ನಗರಸಭೆ ನೌಕರರಿಗೆ ಹೆಚ್ಚುವರಿ ಶೇ.17 ರಷ್ಟು ಮಧ್ಯಂತರ ಪರಿಹಾರವಾಗಿ ವೇತನ ಪಾವತಿಸಬೇಕಿದೆ. 16 ಹಣಕಾಸು ಆಯೋಗ ಅನುಮೋದನೆ ನಂತರ ನಗರಸಭೆಯ 298 ನೌಕರರಿಗೆ ಶೇ.17 ರಷ್ಟು ವೇತನ ಸಾಮಾನ್ಯ ನಿಧಿಯಿಂದಲೇ ಪಾವತಿಸಬೇಕು. ಹಾಗಾಗಿ 30 ಲಕ್ಷದ ಕೊರತೆ ಜತೆಗೆ ಹೆಚ್ಚುವರಿ 17 ಲಕ್ಷ ರೂ. ಕೊರತೆ ಬಜೆಟ್​ ಹೊಂದಿಸುವುದು ಕಷ್ಟವಾಗಿದೆ.

ಗುತ್ತಿಗೆದಾರರು ಎಚ್ಚರ?
ನಗರಸಭೆ ಸಾಮಾನ್ಯ ನಿಧಿಯಿಂದ ವಿವಿಧ ಕಾಮಗಾರಿಗಳಿಗೆ ಗುತ್ತಿಗೆ ಪಡೆಯಲು ಆಸಕ್ತಿ ಹೊಂದಿರುವ ಗುತ್ತಿಗೆದಾರರು ಎಚ್ಚರ ವಹಿಸಬೇಕಿದೆ. ಗುತ್ತಿಗೆ ಪಡೆದರೂ ಬಿಲ್​ ಪಾವತಿ ಆಗುವ ಗ್ಯಾರಂಟಿ ಇಲ್ಲ. ಹಾಗಾಗಿ ಆತುರದಲ್ಲಿ ವರ್ಕ್​ ಆರ್ಡರ್​ ಪಡೆಯುವ ಮುನ್ನ ಯೋಚಿಸಬೇಕಿದೆ. ಆಥಿರ್ಕ ಕೊರತೆಯಿಂದ ಬಿಲ್​ ಪಾವತಿ ಅಸಂಭವ ಮತ್ತು ಬಿಲ್​ ಪಾವತಿ ವಿಳಂಬವಾದರೂ ಬಡ್ಡಿ ಸಮೇತನ ನಗರಸಬೆ ಬಿಲ್​ ಪಾವತಿ ಮಾಡಬೇಕಾದ್ದರಿಂದ ಮತ್ತಷ್ಟು ಆಥಿರ್ಕ ಹೊರೆ ನಗರಸಭೆ ಮೇಲೆ ಬೀಳಲಿದೆ.

ನಾವಿನ್ಯತೆ ಇಲ್ಲ:
ನಗರಸಭೆ ಅಧಿಕಾರಿಗಳಲ್ಲಿ, ಅಧ್ಯಕ್ಷರಲ್ಲಿ ಮತ್ತು ಸದಸ್ಯರಲ್ಲಿ ನಾವಿನ್ಯತೆ ಇಲ್ಲ. ಕೊರತೆ ಇರುವ ಬಜೆಟ್​ ಸರಿದೂಗಿದಲು ಹೊಸ ಅವಿಷ್ಕಾರಗಳ ಚರ್ಚೆ ಇಲ್ಲದೇ ನಗರಸಭೆ ಆಡಳಿತ ವೈಖರಿ ಸೊರಗಿದೆ. ಹೊಸ ಹೊಸ ಠರಾವು ಮೂಲಕ ತೆರಿಗೆ, ಕಂದಾಯ ವಸೂಲಿ, ಆಥಿರ್ಕ ಸಂಪನ್ಮೂಲ ಕ್ರೂಢಿಕರಣಗಳ ಬಗ್ಗೆ ಚರ್ಚೆ ಇಲ್ಲದೇ ಕೇವಲ ಕಾಮಗಾರಿ ಮಂಜೂರು ನೀಡುವುದರಲ್ಲೇ ಸಮಯ ಕಳಿಯುತ್ತಿದ್ದಾರೆ.

ಕೋಟ್​:
ನಗರಸಭೆಯಲ್ಲಿ ಬಜೆಟ್​ ಕೊರತೆ ಇರುವುದು ಸತ್ಯ. ಬಜೆಟ್​ ಇಲ್ಲದೇ ಕಾಮಗಾರಿಗಳಿಗೆ ಮಂಜೂರು ನೀಡಬಾರದೆಂದು ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ಅಧ್ಯಕ್ಷರಿಂದ ಪ್ರತಿಕ್ರಿಯೆ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬಜೆಟ್​ ಕೊರತೆ ಮತ್ತು ಕಾಮಗಾರಿಗಳ ಮಂಜೂರಾತಿ ಬಗ್ಗೆ ತಿಳಿಸಲಾಗುವುದು.
- ಗಂಗಪ್ಪ, ನಗರಸಭೆ ಆಯುಕ್ತರು, ಗದಗ

ಕೋಟ್​:
ನಗರಸಭೆ ಆಯುಕ್ತರು ಇನ್ನೂ ಪತ್ರ ಬರೆದಿಲ್ಲ. "ಕರ್ನಾಟಕ' ನಾಮಕರಣ ಸಂಭ್ರಮ ಕಾರ್ಯಕ್ರಮ ನಂತರ ಈ ವಿಷಯದ ಬಗ್ಗೆ ಚಚಿರ್ಸುತ್ತೇನೆ
- ವೈಶಾಲಿ ಎಂ.ಎಲ್​, ಜಿಲ್ಲಾಧಿಕಾರಿ ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net