

ರಾಮನಗರ: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಬುಧವಾರದಂದು ಹೊಸ ಟ್ರ್ಯಾಕ್ಟರ್ ಒಂದನ್ನು ಖರೀದಿಸಿದ್ದಾರೆ. ಹೊಸ ಟ್ರ್ಯಾಕ್ಟರ್ಗೆ ಪೂಜೆ ಸಲ್ಲಿಸಿ ತಾವೇ ಚಲಾಯಿಸಿದ್ದಾರೆ.
ಕುಮಾರಸ್ವಾಮಿ ಅವರಿಗೆ ರಾಮನಗರ ಜಿಲ್ಲೆ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ಕೃಷಿ ಭೂಮಿ ಇದೆ. ಕರೊನಾದ ಈ ಸಮಯದಲ್ಲಿ ತಮ್ಮ ಕೃಷಿ ಭೂಮಿಯನ್ನು ಮಾದರಿ ತೋಟವನ್ನಾಗಿ ಪರಿವರ್ತಿಸಲು ಅವರು ಆಸಕ್ತಿ ತೋರಿದ್ದಾರೆ. ಕೆಲ ದಿನಗಳ ಹಿಂದೆ ಹಸುವನ್ನು ಖರೀದಿ ಮಾಡಿ ಸಾಕಲಾರಂಭಿಸಿದ್ದರು. ಇದೀಗ ಟ್ರ್ಯಾಕ್ಟರ್ ಖರೀದಿ ಮಾಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಗಾಡಿಗೆ ಪೂಹೆ ಸಲ್ಲಿಸಲಾಗಿದೆ.
ಟ್ರ್ಯಾಕ್ಟರ್ ವಿಶೇಷತೆ:
ಜಾನ್ ಡಿರ್ 5210 ಗೇರ್ ಪ್ರೊ ಟ್ರ್ಯಾಕ್ಟರ್ ಹಾಗೂ 42 ಬ್ಲೇಡ್ ಇರುವ ರೋಟವೇಟರ್. ಟ್ರ್ಯಾಕ್ಟರ್ 50hp ಪವರ್ ಹೊಂದಿದ್ದು ಸರ್ವ ಕೃಷಿ ಕಾಮಗಾರಿಗಳನ್ನು ಮಾಡುತ್ತದೆ. ತಾಂತ್ರಿಕತೆಯಲ್ಲಿ ದಕ್ಷತೆಯುಳ್ಳ ಗೇರ್ ಬಾಕ್ಸ್ ಮತ್ತು 4 ವೀಲ್ ಡ್ರೈವ್ ಗಾಡಿಯಾಗಿರುತ್ತದೆ. ಜಾನ್ ಡಿಯರ್ ಭಾರತದಲ್ಲಿ 22 ವರ್ಷಗಳಿಂದ ರೈತರ ಸೇವೆಗೆ ಟ್ರ್ಯಾಕ್ಟರ್ ಮತ್ತು ಯಂತ್ರೋಪಕರಣಗಳು ಮಾರಾಟ ಮಾಡುತ್ತಿದೆ.