ಬಡ್​ವೈಸರ್​ ಉದ್ಯೋಗಿ 12 ವರ್ಷಗಳಿಂದ ಬಿಯರ್​ ಟ್ಯಾಂಕ್​ನಲ್ಲಿ ಈ ಕೆಲಸ ಮಾಡ್ತಾ ಇದ್ನಾ...? ಇಲ್ಲಿದೆ ಫ್ಯಾಕ್ಟ್​ಚೆಕ್​

Malka Beer
Published on

ನವದೆಹಲಿ: ಬಡ್​ವೈಸರ್​ ಉದ್ಯೋಗಿ ಬಿಯರ್​ ಟ್ಯಾಂಕ್​ ಮೂತ್ರ ವಿಸರ್ಜನೆ ಮಾಡ್ತಾ ಇದ್ದ ವಿಡಿಯೋ ಹಾಗೂ ಸುದ್ದಿ ಎಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಕಳೆದೆರಡು ದಿನಗಳಿಂದ ಭಾರಿ ಟ್ರೆಂಡಿಗ್​ನಲ್ಲಿದೆ.

ಈಗ ಮತ್ತೊಂದು ಸುದ್ದಿ ಅದನ್ನೂ ಮೀರಿಸಿ ಟ್ರೆಂಡ್​ ಆಗ್ತಾಯಿದೆ. ಆ ಸುದ್ದಿ ಹೀಗಿದೆ... ಸಿಕ್ಕಿ ಬಿದ್ದಿರುವ ಬಡ್​ವೈಸರ್​ ಉದ್ಯೋಗಿ ವಾಲ್ಟರ್​ ಕಳೆದ 12 ವರ್ಷಗಳಿಂದ ಬಿಯರ್​ ಟ್ಯಾಂಕ್​ನಲ್ಲಿ ಮೂತ್ರ ವಿಸರ್ಜಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನುವುದು ಸುದ್ದಿಯ ತಿರುಳು.

ಕೆಲಸದ ಪ್ರದೇಶದಲ್ಲಿ ಶೌಚಗೃಹ ದೂರವಿದ್ದ ಕಾರಣ ಅಲ್ಲಿಯವರೆಗೆ ನಡೆದಕೊಮಡು ಹೋಗಲು ನನಗೆ ಸೋಮಾರಿತನ ಕಾಡುತ್ತಿತ್ತು. ಹೀಗಾಗಿ ಮೂತ್ರ ವಿಸರ್ಜಿಸಬೇಕು ಎಂದಾಗಲೆಲ್ಲ ಬಿಯರ್ ಟ್ಯಾಂಕ್​ ಬಳಸಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾಗಿ ಆ ವರದಿಯಲ್ಲಿದೆ.

ಆತ ಬಡ್​ವೈಸರ್​ನ ಪೋರ್ಟ್​ ಕಾಲಿನ್ಸ್​ ಘಟಕದಲ್ಲಿ ಕಳೆದೆರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಉಳಿದೆಲ್ಲ ಬಿಯರ್​ಗಳಲ್ಲಿ ಮೂತ್ರ ಸೇರಿಲ್ಲ ಎಂದು ವ್ಯಂಗ್ಯವಾಡಲಾಗಿತ್ತು.

ಈ ಸುದ್ದಿ ವೆಬ್​ಸೈಟ್​ವೊಂದರಲ್ಲಿ ಪ್ರಸಾರವಾಗುತ್ತಿದ್ದಂತೆ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿತ್ತು. ಅಬ್ಬಾ ಆ ಬಿಯರ್​ ಸಹವಾಸವೇ ಬೇಡಪ್ಪ ಎಂದು ಟೀಕಿಸುತ್ತಿರುವುದು, ಪ್ರತಿಕ್ರಿಯಿಸುತ್ತಿರುವುದು ಕಂಡಬರುತ್ತಿದೆ.

ಹೀಗಿದ್ದರೂ ಕಂಪನಿ ಕಡೆಯಿಂದ ಯಾವುದೇ ಸ್ಪಷ್ಟನೆ ಏಕೆ ಬರುತ್ತಿಲ್ಲ ಎಂಬುದನ್ನು ಪರಿಶೀಲಿಸಿದಾಗ ಗೊತ್ತಾದ ವಿಚಾರವಿದು. ಅಷ್ಟಕ್ಕೂ ಆ ಸುದ್ದಿ ಪ್ರಕಟವಾದ ವೆಬ್​ಸೈಟ್​ನ ಹೆಸರು foolishhumour.com ಎಂದು. ಸುದ್ದಿಯ ಕೊನೆಯಲ್ಲಿ ಸೂಚನೆಯೊಂದನ್ನು ಅವರು ಕೊಟ್ಟಿದ್ದಾರೆ. ಇಲ್ಲಿ ಪ್ರಕಟವಾಗುವ ವರದಿಗಳೆಲ್ಲ ತಮಾಷೆ ಹಾಗೂ ವ್ಯಂಗ್ಯ ಹಾಗೂ ಕಲ್ಪನೆಯಿಂದ ಕೂಡಿವೆ. ಇದನ್ನು ಅರಿತ ಕಂಪನಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net