ಬೆಳಗಾವಿ ರೋಗಿಗಳು ಪಡೆಯಲಿದ್ದಾರೆ ದೇಶದ ಮೊಟ್ಟ ಮೊದಲ ಕರೊನಾ ಲಸಿಕೆ; ಕ್ಲಿನಿಕಲ್​ ಟ್ರಯಲ್​ಗೆ 12 ಸಂಸ್ಥೆಗಳ ಆಯ್ಕೆ

coronavirus-vaccine
Published on

ಬೆಂಗಳೂರು: ಭಾರತದಲ್ಲೇ ತಯಾರಿಸಲಾಗಿರುವ ಕರೊನಾ ನಿಯಂತ್ರಣ ಲಸಿಕೆಯನ್ನು ಬೆಳಗಾವಿಯ ಕೋವಿಡ್​ ಆಸ್ಪತ್ರೆ ಸೇರಿ 12 ವೈದ್ಯಕೀಯ ಸಂಸ್ಥೆಗಳ ಮೇಲೆ ಪ್ರಯೋಗಿಸಲಾಗುತ್ತಿದೆ.

ಹೈದರಾಬಾದ್​ನ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್​) ಸಹಯೋಗದಲ್ಲಿ ಉತ್ಪಾದಿಸಿರುವ ಈ ಲಸಿಕೆಯನ್ನು ಆಗಸ್ಟ್​ 15ರ ವೇಳೆಗೆ ರೋಗಿಗಳ ಬಳಕೆಗೆ ಬಿಡುಗಡೆಗೊಳಿಸುವ ಉದ್ದೇಶ ಹೊಂದಲಾಗಿದೆ.

ದೇಶದ ಮೊದಲ ಕರೊನಾ ಲಸಿಕೆ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲಿರುವ ಈ ಔಷಧದ ಕ್ಲಿನಿಕಲ್​ ಟ್ರಯಲ್​ ಒಡಿಶಾದ ಭುವನೇಶ್ವರದಲ್ಲಿರುವ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಹಾಗೂ ಎಸ್​ಯುಎಂ ಆಸ್ಪತ್ರೆಯಲ್ಲಿಯೂ ನಡೆಯಲಿದೆ.

ಇದಲ್ಲದೇ, ಆಂಧ್ರದ ವಿಶಾಖಪಟ್ಟಣಂ, ಹರಿಯಾಣದ ರೋಹ್ಟಕ್​, ನವದೆಹಲಿ, ಬಿಹಾರದ ಪಟನಾ, ಮಹಾರಾಷ್ಟ್ರದ ನಾಗಪುರ, ಉತ್ತರಪ್ರದೇಶದ ಗೋರಖ್​ಪುರ, ಆರ್ಯನಗರ, ಕಾನ್ಪುರ್​, ತಮಿಳುನಾಡಿನ ಕಟ್ಟಾಂಕುಲತ್ತೂರ್​, ಹೈದರಾಬಾದ್​ ಹಾಗೂ ಗೋವಾದಲ್ಲಿ ಕ್ಲಿನಿಕಲ್​ ಟ್ರಯಲ್​ ನಡೆಯಲಿದೆ.

ಕ್ಲಿನಿಕಲ್​ ಟ್ರಯಲ್​ ಪ್ರಕ್ರಿಯೆಯನ್ನು ಅತ್ಯಂತ ತ್ವರಿತವಾಗಿ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಅನುಮತಿ ಪ್ರಕ್ರಿಯೆಗಳನ್ನು ವೇಗವಾಗಿ ಪೂರ್ಣಗೊಳಿಸುವಂತೆ ಆಯಾ ರಾಜ್ಯ ಹಾಗೂ ಇಲಾಖೆಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಐಸಿಎಂಆರ್​ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net