More

    ಗ್ರೀನ್​ ಟೀ, ಬ್ಲ್ಯಾಕ್ ಟೀ ಕುಡಿಯುವುದರಿಂದಲೂ ದೂರವಿಡಬಹುದು ಕರೊನಾ; ದೆಹಲಿ ಐಐಟಿ ತಂಡದಿಂದ ಸಂಶೋಧನೆ

    ನವದೆಹಲಿ: ಕರೊನಾಗಾ ಆಯುರ್ವೇದದಲ್ಲಿಯೇ ಉಪಶಮನವಿದೆ ಎಂದು ಪಂಡಿತರು ವಾದಿಸುತ್ತಲೇ ಬಂದಿದ್ದಾರೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಕರೊನಾವನ್ನು ದೂರವಿಡಬಹುದು ಎನ್ನುವುದು ಗೊತ್ತಿರುವ ಸಂಗತಿ. ಇದೇ ಅಂಶಗಳನ್ನು ಮುಂದಿಟ್ಟುಕೊಂಡು ಚಿಕಿತ್ಸಾ ಕ್ರಮಗಳನ್ನು ರೂಪಿಸಲಾಗುತ್ತಿದೆ.

    ಅಂತೆಯೇ, ದೆಹಲಿಯ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಜಿಯ ತಜ್ಞರು ಗ್ರೀನ್​ ಟೀ ಹಾಗೂ ಬ್ಲ್ಯಾಕ್​ ಟೀ ಹಾಗೂ ಆಯುರ್ವೇದದ ತ್ರಿಫಲದಲ್ಲಿ ಕರೊನಾವನ್ನು ದೂರವಿಡುವ ಶಕ್ತಿ ಇದೆ ಎಂದು ಕಂಡು ಹಿಡಿದಿದ್ದಾರೆ.

    ಇದನ್ನೂ ಓದಿ; ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….! 

    ಐಐಟಿಯ ಕುಸುಮಾ ಸ್ಕೂಲ್​ ಆಫ್​ ಬಯಾಲಾಜಿಕಲ್​ ಸೈನ್ಸ್​ನ (ಕೆಎಸ್​ಬಿಎಸ್​) ಈ ಸಂಶೋಧನೆ ನಡೆಸಿದೆ. ಕರೊನಾ ವೈರಸ್​ನಲ್ಲಿರುವ ಪ್ರೋಟೀನ್​ಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಪರೀಕ್ಷೆಯಲ್ಲಿ ಈ ಫಲಿತಾಂಶ ಕಂಡು ಬಂದಿದೆ ಎಂದು ಸಂಸ್ಥೆ ತಿಳಿಸಿದೆ.

    ಪ್ರೊ. ಅಶೋಕ್​ಕುಮಾರ್​ ಪಟೇಲ್​ ನೇತೃತ್ವದ ತಂಡ ಈ ಪ್ರಯೋಗ ನಡೆಸಿತ್ತು. ಒಟ್ಟು 51 ಔಷಧೀಯ ಸಸ್ಯಗಳನ್ನು ಈ ಪ್ರಯೋಗಕ್ಕೆ ಬಳಸಿಕೊಳ್ಳಲಾಗಿತ್ತು. ಚಹಾ ಹಹಾಗೂ ತ್ರಿಫಲದ ಜಲೀಯ ಸಾರದಿಂದ ನಿಗದಿತ ಪ್ರೋಟೀನ್​ ಗುರಿಯಾಗಿಸಿಕೊಂಡರೆ ವೈರಸ್​ ಬೆಳವಣಿಗೆಯನ್ನು ಸ್ಥಗಿಸಗೊಳಿಸಬಹುದು. ವೈರಸ್​ ನಿಯಂತ್ರಕ ಚಟುವಟಿಕೆಯನ್ನು ಉತ್ತೇಜಿಸಲಿದೆ ಎಂಬುದನ್ನು ಕಂಡುಕೊಂಡಿದೆ.

    ಇದನ್ನೂ ಓದಿ; ರೋಗ ಪ್ರತಿರೋಧಕ ಶಕ್ತಿ ಕುಂದಿದವರಿಗೂ ಆಕ್ಸ್​ಫರ್ಡ್​ ಕರೊನಾ ಲಸಿಕೆ ಸುರಕ್ಷಿತ; ಫಲಿತಾಂಶ ಪ್ರಕಟಿಸಿದ ತಜ್ಞರು

    ನಿಯಮಿತವಾಗಿ ಬ್ಲ್ಯಾಕ್​ ಟೀ ಹಾಗೂ ಗ್ರೀನ್​ ಟೀ ಹಾಗೂ ತ್ರಿಫಲದ ಕಷಾಯ ಕುಡಿಯುತ್ತಿದ್ದರೆ ರೋಗ ಬಾಧೆ ದೂರವಾಗಲಿದೆ. ಈ ಸಂಶೋಧನೆಯ ವರದಿಯನ್ನು ಉನ್ನತಮಟ್ಟದ ಪರಾಮರ್ಶೆಗೆ ಸಲ್ಲಿಸಲಾಗಿದೆ ಎಂದು ಐಐಟಿ ತಂಡ ತಿಳಿಸಿದೆ.

    ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts