More

    ಟೀ ಜತೆ ಬಿಸ್ಕತ್ತು ಸೇವಿಸ್ತೀರಾ? ಹೌದು ಎಂದಾದ್ರೆ ನಿಮಗೆ ಗೊತ್ತಿಲ್ಲದೆ ಈ ರೋಗ ಬರಬಹುದು ಎಚ್ಚರ!

    ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್​ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ದಿನಕ್ಕೊಂದು ಟೀ ಕುಡಿಯದಿದ್ದರೂ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.

    ಇನ್ನು ಟೀ ಜತೆ ಬಿಸ್ಕತ್ತು​ ಸೇವನೆ ಸಾಮಾನ್ಯವಾಗಿದೆ. ಆದರೆ, ಈ ಕಾಂಬಿನೇಷನ್​ ಹಿಂದಿರುವ ಅಪಾಯ ಮಾತ್ರ ಯಾರಿಗೂ ತಿಳಿದಿಲ್ಲ. ಕೆಲವರು ಇದನ್ನು ಅಭ್ಯಾಸವಾಗಿ ಮಾಡುತ್ತಿದ್ದಾರೆ. ಆದರೆ ಪ್ರತಿದಿನ ಚಹಾದೊಂದಿಗೆ ಬಿಸ್ಕತ್ತುಗಳನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

    ಚಹಾ ಮತ್ತು ಬಿಸ್ಕತ್ತುಗಳಲ್ಲಿ ಸಕ್ಕರೆ ಇರುತ್ತದೆ. ಹಾಗಾಗಿ ಅವುಗಳನ್ನು ತಿಂದಾಗ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ. ಸಕ್ಕರೆ ಹೆಚ್ಚಿರುವ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ. ಅಧಿಕ ರಕ್ತದ ಗ್ಲೂಕೋಸ್ ಮಧುಮೇಹಕ್ಕೆ ಕಾರಣವಾಗಬಹುದು.

    ಪ್ರತಿನಿತ್ಯ ಸಕ್ಕರೆ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ದೇಹವು ಹೆಚ್ಚು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಕಾಲಾನಂತರದಲ್ಲಿ ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗಬಹುದು.

    ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ತ್ವರಿತ ಏರಿಕೆಯಲ್ಲಿ ಬಿಸ್ಕತ್ತುಗಳು ಪ್ರಮುಖ ಪಾತ್ರವಹಿಸುತ್ತವೆ. ಇದನ್ನು ತಪ್ಪಿಸಲು, ಧಾನ್ಯಗಳೊಂದಿಗೆ ಸಕ್ಕರೆ ಮುಕ್ತ ಬಿಸ್ಕತ್ತುಗಳನ್ನು ತಿನ್ನಿರಿ ಮತ್ತು ನೀವು ಹಸಿದಿರುವಾಗ ಬಿಸ್ಕತ್ ಬದಲಿಗೆ ಪ್ರೋಟೀನ್​ ಭರಿತ ತಿಂಡಿಯನ್ನು ತಿನ್ನಿರಿ. (ಏಜೆನ್ಸೀಸ್​)

    ಸಾಕು ನಿಲ್ಲಿಸ್ರಯ್ಯ ನಿಮ್ಮ ಕೈಮುಗಿತೀನಿ! ಕೊನೆಗೂ ಮಧ್ಯಪ್ರವೇಶ ಮಾಡಿದ ರೋಹಿತ್​ ಶರ್ಮ

    20 ಕೋಟಿ ರೂ. ಬಹುಮಾನಕ್ಕೆ 200 ಕೋಟಿ ಖರ್ಚು! ತಂಡದ ಮಾಲೀಕರು IPLನಲ್ಲಿ ಹೇಗೆ ಆದಾಯ ಗಳಿಸ್ತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts