More

  20 ಕೋಟಿ ರೂ. ಬಹುಮಾನಕ್ಕೆ 200 ಕೋಟಿ ಖರ್ಚು! ತಂಡದ ಮಾಲೀಕರು IPLನಲ್ಲಿ ಹೇಗೆ ಆದಾಯ ಗಳಿಸ್ತಾರೆ?

  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್​​) ಕಳೆದ 16 ವರ್ಷಗಳಿಂದ ಕ್ರಿಕೆಟ್ ಲೋಕದ ಅತ್ಯಂತ ಜನಪ್ರಿಯ ಲೀಗ್ ಎನಿಸಿಕೊಂಡಿದೆ. ಬಿಸಿಸಿಐ ನಡೆಸುತ್ತಿರುವ ಈ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಪಂಚದಾದ್ಯಂತ ತನ್ನದೇಯಾದ ಅಭಿಮಾನಿ ಬಳಗವನ್ನು ಹೊಂದಿದೆ. 2 ತಿಂಗಳ ಕಾಲ ನಡೆಯುವ ಈ ಸೀಸಸ್​ಗಾಗಿ ಕ್ರಿಕೆಟ್ ಪ್ರೇಮಿಗಳು ವರ್ಷವಿಡೀ ಕಾಯುತ್ತಾರೆ. ಪ್ರತಿ ಪಂದ್ಯಕ್ಕೂ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದರೆ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೂ ಇಷ್ಟೊಂದು ಕ್ರೇಜ್​ ಇಲ್ಲ ಎಂಬ ಭಾವನೆ ಮೂಡುತ್ತದೆ.

  ಈ ಲೀಗ್‌ನಲ್ಲಿ ಆಡಲು ವಿಶ್ವದಾದ್ಯಂತ ಕ್ರಿಕೆಟ್ ಆಟಗಾರರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಕೆಲವರಿಗೆ ಅವಕಾಶ ಸಿಗುವುದಿಲ್ಲ. ಇದೇ ಲೀಗ್​ನಿಂದಾಗಿ ದೇಶಿಯ ಯುವ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. ಈಗಾಗಲೇ ಸ್ಟಾರ್​ ಬ್ಯಾಟರ್​ಗಳು ಇದೇ ಲೀಗ್​ನಿಂದ ಟೀಂ ಇಂಡಿಯಾಕ್ಕೂ ಸೇರ್ಪಡೆಯಾಗಿದ್ದಾರೆ. ಈ ಲೀಗ್‌ನಲ್ಲಿ ಪ್ರತಿಯೊಂದು ತಂಡಗಳನ್ನು ನಿರ್ವಹಿಸುವುದು ತುಂಬಾ ದುಬಾರಿಯಾದ ಕೆಲಸ. ಸುಮಾರು 200 ಕೋಟಿ ರೂ. ಖರ್ಚಾಗುತ್ತದೆ ಎನ್ನಲಾಗುತ್ತಿದೆ. ಅಂದಹಾಗೆ 20 ಕೋಟಿ ರೂಪಾಯಿ ಬಹುಮಾನದ ಹಣಕ್ಕೆ 200 ಕೋಟಿ ರೂಪಾಯಿಯನ್ನು ಯಾಕೆ ಖರ್ಚು ಮಾಡುತ್ತಿದ್ದಾರೆ? ನಿಜವಾದ ಆದಾಯವನ್ನು ಹೇಗೆ ಪಡೆಯುತ್ತಾರೆ? ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

  ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಂಡವನ್ನು ಪಡೆಯುವುದು ಮತ್ತು ಅದನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಪ್ರತಿ ಸೀಸನ್​ಗೆ 200 ಕೋಟಿ ರೂ. ಖರ್ಚಾಗುತ್ತದೆ. ಐಪಿಎಲ್​ನಲ್ಲಿ ಸಿಗುವ ಬಹುಮಾನದ ಮೊತ್ತವನ್ನು ನೋಡಿದರೆ, ವಿಜೇತ ತಂಡಕ್ಕೆ 20 ಕೋಟಿಮ ರೂ. ರನ್ನರ್ ಅಪ್​ಗೆ 13 ಕೋಟಿ, ಕ್ವಾಲಿಫೈಯರ್ 2ರಲ್ಲಿ ವಿಜೇತ ತಂಡಕ್ಕೆ 7 ಕೋಟಿ ಮತ್ತು ಎಲಿಮಿನೇಟರ್​ನಲ್ಲಿ ಸೋತ ತಂಡಕ್ಕೆ 6.5 ಕೋಟಿ ನೀಡಲಾಗುತ್ತದೆ. ಐಪಿಎಲ್ ಪ್ರಶಸ್ತಿ ಮೊತ್ತವನ್ನು ನೋಡಿದರೆ ಈ ವರ್ಷದ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಬಿಕರಿಯಾಗಿದ್ದು ಬರೋಬ್ಬರಿ 24.75 ಕೋಟಿ ರೂಪಾಯಿಗೆ. ಇಷ್ಟು ಹಣವನ್ನು ಕೂಡ ಐಪಿಎಲ್​ ಬಹುಮಾನ ಮುಟ್ಟಿಲ್ಲ. ಹಾಗಾದರೆ, 200 ಕೋಟಿ ರೂಪಾಯಿ ಖರ್ಚು ಮಾಡಿ ಇಂಥಾ ಸಣ್ಣ ಬಹುಮಾನಕ್ಕೆ ಪ್ರತಿ ತಂಡಗಳು ಏಕೆ ಆಡುತ್ತಿವೆ? ಇದರಲ್ಲಿ ಇಂದು ಮ್ಯಾಜಿಕ್ ಅಡಗಿದೆ. ಐಪಿಎಲ್ ಬಹುಮಾನದ ಹಣ ಚಿಕ್ಕ ಚಾಕೊಲೇಟ್ ಇದ್ದಂತೆ. ಆದರೆ, ತಂಡದ ಮಾಲೀಕರಿಗೆ ಐಪಿಎಲ್​ನಿಂದ ಸಾಕಷ್ಟು ಆದಾಯವಿದೆ. ಐಪಿಎಲ್ ತಂಡಗಳನ್ನು ಹೊಂದಿರುವ ಶಾರುಖ್ ಖಾನ್, ಪ್ರೀತಿ ಝಿಂಟಾ, ನೀತಾ ಅಂಬಾನಿ, ಕಾವ್ಯಾ ಮಾರನ್ ಅವರಂತಹ ಮಾಲೀಕರು ಹೇಗೆ ಆದಾಯ ಪಡೆಯುತ್ತಾರೆ ಎಂಬುದನ್ನು ನಾವೀಗ ನೋಡೋಣ.

  ಟೈಟಲ್​ ಪ್ರಾಯೋಜಕ್ವ
  ಐಪಿಎಲ್ ತಂಡಗಳು ಅನೇಕ ಆದಾಯದ ಮೂಲಗಳನ್ನು ಹೊಂದಿವೆ. ಅವುಗಳಲ್ಲಿ ಈ ಶೀರ್ಷಿಕೆ ಪ್ರಾಯೋಜಕತ್ವವೂ ಒಂದು. ಐಪಿಎಲ್ ಲೋಗೋದ ಪಕ್ಕದಲ್ಲಿ ನೀವು ಟಾಟಾ ಐಪಿಎಲ್ ಅನ್ನು ನೋಡುತ್ತೀರಿ. ಅದನ್ನು ಶೀರ್ಷಿಕೆ ಪ್ರಾಯೋಜಕತ್ವ ಎಂದು ಕರೆಯಲಾಗುತ್ತದೆ. ಟಾಟಾ ಕಂಪನಿಯು ಈ ವರ್ಷದ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ 330 ಕೋಟಿ ರೂ.ಗಳವರೆಗೆ ಪಾವತಿಸಿದೆ. ಇದರಲ್ಲಿ 50ರಷ್ಟು ಭಾಗವನ್ನು ಬಿಸಿಸಿಐ ಉಳಿಸಿಕೊಳ್ಳಲಿದೆ. ಉಳಿದ 50 ಪ್ರತಿಶತವನ್ನು ತಂಡದ ಮಾಲೀಕರಿಗೆ ವಿತರಿಸಲಾಗುತ್ತದೆ. ಹೀಗಾಗಿ ಟೈಟಲ್ ಪ್ರಾಯೋಜಕರ ರೂಪದಲ್ಲಿ ಆದಾಯ ಬರುತ್ತದೆ.

  ಪಂದ್ಯದ ಪ್ರಾಯೋಜಕತ್ವ
  ಐಪಿಎಲ್ ಪಂದ್ಯದಲ್ಲಿ ವಿವಿಧ ರೀತಿಯ ಪ್ರಾಯೋಜಕತ್ವಗಳಿವೆ. ಉದಾಹರಣೆಗೆ ಕ್ರೆಡ್ ಪವರ್ ಪ್ಲೇ, ಸೀಟ್ ಟೈರ್ ಸ್ಟ್ರಾಟೆಜಿಕ್ ಟೈಮ್ ಔಟ್, ಟಾಟಾ ನ್ಯೂ. ಇದ ಮೂಲಕ ಪ್ರಾಯೋಜಕರ ರೂಪದಲ್ಲಿ ಕೋಟಿಗಟ್ಟಲೆ ಆದಾಯ ಬರುತ್ತದೆ. ಪ್ರತಿಯೊಬ್ಬ ಪ್ರಾಯೋಜಕರು ಕನಿಷ್ಠ 25 ಕೋಟಿ ರೂ. ನೀಡಬೇಕು. ಒಂದು ಋತುವಿನಲ್ಲಿ ಗಳಿಸಿದ ಆದಾಯದ 50 ಪ್ರತಿಶತವನ್ನು ಬಿಸಿಸಿಐ ಇಟ್ಟುಕೊಳ್ಳುತ್ತದೆ. ಉಳಿದ 50 ಪ್ರತಿಶತವನ್ನು ತಂಡದ ಮಾಲೀಕರಿಗೆ ನೀಡಲಾಗುತ್ತದೆ.

  ಪ್ರಸಾರ ಹಕ್ಕುಗಳು
  ಐಪಿಎಲ್ ಪಂದ್ಯವನ್ನು ಯಾವುದಾದರೂ ಟಿವಿ ವಾಹಿನಿಯಲ್ಲಿ ಪ್ರಸಾರ ಮಾಡಬೇಕು. ಈ ಪಂದ್ಯಗಳನ್ನು ಪ್ರಸಾರ ಮಾಡಲು ಹಲವು ಚಾನೆಲ್‌ಗಳು ಕೋಟಿಗಟ್ಟಲೆ ಹಣ ನೀಡಲು ಸಿದ್ಧವಾಗಿವೆ. ಹೆಚ್ಚು ನೀಡುವವರಿಗೆ ಈ ಹಕ್ಕುಗಳನ್ನು ನೀಡಲಾಗುತ್ತದೆ. ಉದಾಹರಣೆಗೆ, 2008 ರಿಂದ 2017 ರವರೆಗೆ ಸೋನಿ ನೆಟ್‌ವರ್ಕ್ ವರ್ಷಕ್ಕೆ 820 ಕೋಟಿ ವೆಚ್ಚದಲ್ಲಿ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡಿತು. 2018 ರಿಂದ 2022 ರವರೆಗೆ ಸ್ಟಾರ್ ಸ್ಪೋರ್ಟ್ಸ್ ಆ ಹಕ್ಕುಗಳನ್ನು 16, 400 ಕೋಟಿ ನೀಡಿ ಖರೀದಿಸಿತು. 2024ರಲ್ಲಿ ಜಿಯೋ ಸಿನಿಮಾ + ಡಿಸ್ನಿ ಕಂಪನಿಗಳು ಒಟ್ಟಾಗಿ 24 ಸಾವಿರ ಕೋಟಿ ಹೂಡಿಕೆ ಮಾಡಿ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡವು. ಬಿಸಿಸಿಐ ಮತ್ತು ತಂಡದ ಮಾಲೀಕರು ಈ ಆದಾಯವನ್ನು 50-50 ಅನುಪಾತದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಇಷ್ಟು ಹಣ ಕೊಟ್ಟು ವಾಹಿನಿಗಳು ಖರೀದಿಸಿದರೆ ಏನು ಲಾಭ ಎಂಬ ಪ್ರಶ್ನೆ ಬರಬಹುದು. ಅವರು ಜಾಹೀರಾತುಗಳ ಮೂಲಕ ಹೂಡಿಕೆ ಮಾಡಿದ ಮೊತ್ತಕ್ಕಿಂತ ಹೆಚ್ಚು ಗಳಿಸುತ್ತಾರೆ. ಪಂದ್ಯಗಳ ಸಮಯದಲ್ಲಿ ಜಾಹೀರಾತುಗಳಿಗೆ ಹೆಚ್ಚಿನ ಬೇಡಿಕೆಯಿದೆ. 10 ಸೆಕೆಂಡ್ ಟೈಮ್ ಸ್ಲಾಟ್‌ಗೆ 15 ಲಕ್ಷದವರೆಗೆ ವೆಚ್ಚವಾಗುತ್ತದೆ. ಈ ಜಾಹೀರಾತುಗಳ ರೂಪದಲ್ಲಿ ಚಾನಲ್‌ಗಳು ಆದಾಯವನ್ನು ಪಡೆಯುತ್ತವೆ.

  ತಂಡದ ಪ್ರಾಯೋಜಕತ್ವ
  ಬಿಸಿಸಿಐ ನೀಡುವ ಆದಾಯದ ಹೊರತಾಗಿ, ತಂಡದ ಮಾಲೀಕರಿಗೆ ಹೆಚ್ಚುವರಿ ಆದಾಯ ಮಾರ್ಗಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಜರ್ಸಿ ಪ್ರಾಯೋಜಕತ್ವ. ತಂಡದ ಜರ್ಸಿಯಲ್ಲಿ ನೀವು ವಿವಿಧ ಲೋಗೋಗಳನ್ನು ಕಾಣಬಹುದು. ಅವುಗಳನ್ನು ಮುದ್ರಿಸಲು ಸಾಕಷ್ಟು ಹಣವನ್ನು ಪಾವತಿಸಬೇಕಾಗುತ್ತದೆ. ಮುಂಭಾಗದಲ್ಲಿ ಲೋಗೋ ಹಾಕಲು 30 ಕೋಟಿ ರೂಪಾಯಿಯಾದರೆ, ಹಿಂಭಾಗದಲ್ಲಿ ಗೋಚರಿಸಬೇಕಾದರೆ 15 ಕೋಟಿ ರೂ.ಗಳಷ್ಟು ತೆಗೆದುಕೊಳ್ಳುತ್ತದೆ. ಈ ಬೆಲೆ ತಂಡದ ಕ್ರೇಜ್ ಮತ್ತು ಅಭಿಮಾನಿಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ.

  ಟಿಕೆಟ್​ ಮಾರಾಟ
  ಐಪಿಎಲ್ ಪಂದ್ಯದಲ್ಲಿ ಆಯಾ ತಂಡಗಳು ತಮ್ಮ ತವರು ಮೈದಾನದಲ್ಲಿ ಪಂದ್ಯಗಳನ್ನು ಆಡುತ್ತಿವೆ. ತವರು ಮೈದಾನದಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ರೂಪದಲ್ಲಿ ಶೇ. 80ರಷ್ಟು ಆದಾಯ ತಂಡದ ಮಾಲೀಕರಿಗೆ ಸೇರಲಿದೆ. ಉಳಿದ 20 ಪ್ರತಿಶತವನ್ನು ರಾಜ್ಯ ಕ್ರಿಕೆಟ್ ಮಂಡಳಿ ತೆಗೆದುಕೊಳ್ಳುತ್ತದೆ. ಈ ಟಿಕೆಟ್ ರೂಪದಲ್ಲಿ 28 ಕೋಟಿ ರೂ.ವರೆಗೂ ಆದಾಯ ಬರಲಿದೆ. ಅವುಗಳಲ್ಲಿ 80 ಪ್ರತಿಶತವನ್ನು ತಂಡದ ಮಾಲೀಕರು ತೆಗೆದುಕೊಳ್ಳುತ್ತಾರೆ. ಈ ಮೂಲಕ ತಂಡದ ಮಾಲೀಕರಿಗೂ ಟಿಕೆಟ್ ಮಾರಾಟದ ರೂಪದಲ್ಲಿ ಆದಾಯ ಸಿಗುತ್ತದೆ.

  ಮಾರಾಟದ ಸರಕು
  ತಂಡದ ಮಾಲೀಕರು ಮರ್ಚಂಡೈಸ್ ಮಾದರಿಯ ರೂಪದಲ್ಲಿ ದೊಡ್ಡ ಆದಾಯವನ್ನು ಪಡೆಯುತ್ತಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಜೆರ್ಸಿಗಳನ್ನು ಖರೀದಿಸುತ್ತಾರೆ. ಅಲ್ಲದೆ, ತಮ್ಮ ನೆಚ್ಚಿನ ತಂಡಗಳ ಲೋಗೋಗಳೊಂದಿಗೆ ಕ್ಯಾಪ್​ಗಳು, ಕೀ ಚೈನ್​ಗಳು, ಮೊಬೈಲ್​ ವ್ಯಾಲೆಟ್​ಗಳು ಮತ್ತು ಜೆರ್ಸಿಗಳನ್ನು ಸಹ ಖರೀದಿಸುತ್ತಾರೆ. ತಂಡದ ಮಾಲೀಕರಿಗೂ ಇವುಗಳ ರೂಪದಲ್ಲಿ ಆದಾಯ ಸಿಗುತ್ತದೆ. ವಿಶೇಷವಾಗಿ ಜರ್ಸಿಗಳ ಮೇಲೆ ತಂಡದ ಮಾಲೀಕರು ಉತ್ತಮ ಆದಾಯವನ್ನು ಪಡೆಯುತ್ತಾರೆ.

  ಬಹುಮಾನದ ಮೊತ್ತ
  ತಂಡದ ಮಾಲೀಕರು ಬಹುಮಾನದ ರೂಪದಲ್ಲಿ ಆದಾಯವನ್ನೂ ಪಡೆಯುತ್ತಾರೆ. ವಿಜೇತ್ ತಂಡಕ್ಕೆ 20 ಕೋಟಿ ಹಾಗೂ ರನ್ನರ್​ ಅಪ್​ಗೆ 13 ಕೋಟಿ ರೂ. ನೀಡಲಾಗುವುದು. ಈ ಬಹುಮಾನದ ಅರ್ಧದಷ್ಟು ಮೊತ್ತವು ತಂಡದ ಮಾಲೀಕರಿಗೆ ಹೋಗುತ್ತದೆ. ಉಳಿದ ಅರ್ಧವನ್ನು ತಂಡದ ಸದಸ್ಯರು ಮತ್ತು ಆಟಗಾರರ ನಡುವೆ ಸಮಾನವಾಗಿ ವಿಂಗಡಿಸಲಾಗುತ್ತೆ. ಹೀಗೆ ನಾನಾ ರೂಪದಲ್ಲಿ ಐಪಿಎಲ್​ ತಂಡಗಳು ಆದಾಯವನ್ನು ಪಡೆಯುತ್ತವೆ. (ಏಜೆನ್ಸೀಸ್​)

  ಸಾಕು ನಿಲ್ಲಿಸ್ರಯ್ಯ ನಿಮ್ಮ ಕೈಮುಗಿತೀನಿ! ಕೊನೆಗೂ ಮಧ್ಯಪ್ರವೇಶ ಮಾಡಿದ ರೋಹಿತ್​ ಶರ್ಮ

  16ಕ್ಕೆ ಐಪಿಎಲ್ ಫ್ರಾಂಚೈಸಿ ಮಾಲೀಕರ ಜತೆಗೆ ಮಹತ್ವದ ಸಭೆ ಕರೆದ ಬಿಸಿಸಿಐ: ಕಾರಣ ಏನು ಗೊತ್ತಾ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts