

ಮುಂಬೈ: ಸೂಪರ್ ಹೀರೋ ತೇಜ ಸಜ್ಜ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ಕಾಂಬಿನೇಷನ್ನಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ ‘ಹನು-ಮ್ಯಾನ್’ ರಿಲೀಸ್ ಆದ ಮೊದಲ ದಿನದಿಂದಲೂ ಸಿನಿಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆಯುವುದರ ಜತೆಗೆ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಭರ್ಜರಿ ದಾಖಲೆ ನಿರ್ಮಿಸಿದೆ. ಆಕರ್ಷಕ ವಿಎಫ್ಎಕ್ಸ್ ಕೆಲಸಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಈ ಚಿತ್ರ ಕೇವಲ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಉತ್ತಮ ವಿಮರ್ಶೆ ಹಾಗೂ ಗಳಿಕೆಯನ್ನು ಸ್ವೀಕರಿಸಿದೆ.
ಸದ್ಯ ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿ, ಉತ್ತಮ ಪ್ರದರ್ಶನಗಳನ್ನು ಕಾಣುತ್ತಿರುವ 'ಹನು-ಮ್ಯಾನ್', ಇದೀಗ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕಾ ಬಾಕ್ಸ್ ಆಫೀಸ್ನಲ್ಲಿ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
ಸೂಪರ್ ಹೀರೋ ನಟ ತೇಜ ಸಜ್ಜ ಮತ್ತು ನಟಿ ಅಮೃತಾ ಅಯ್ಯರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ 'ಹನು-ಮ್ಯಾನ್' ಇದೀಗ ಜಾಗತಿಕವಾಗಿ 300 ಕೋಟಿ ಕ್ಲಬ್ ಸೇರಿದ್ದು, ಚಿತ್ರತಂಡಕ್ಕೆ ಭಾರೀ ಯಶಸ್ಸನ್ನು ತಂದೊಡ್ಡಿದೆ. ಬ್ಲಾಕ್‌ಬಸ್ಟರ್ ಚಿತ್ರದ ಒಟ್ಟು 25 ದಿನಗಳ ಸಂಪೂರ್ಣ ಗಳಿಕೆಯ ವಿವರ ಹೀಗಿದೆ.
ದಿನ 1 - 21.35 ಕೋಟಿ ರೂ.
ದಿನ 2 - 29.72 ಕೋಟಿ ರೂ.
ದಿನ 3 - 24.16 ಕೋಟಿ ರೂ.
ದಿನ 4 - 25.63 ಕೋಟಿ ರೂ.
ದಿನ 5 - 19.57 ಕೋಟಿ ರೂ.
ದಿನ 6 - 15.40 ಕೋಟಿ ರೂ.
ದಿನ 7 - 14.75 ಕೋಟಿ ರೂ.
ದಿನ 8 - 14.20 ಕೋಟಿ ರೂ.
ದಿನ 9 - 20.37 ಕೋಟಿ ರೂ.
ದಿನ 10 - 23.91 ಕೋಟಿ ರೂ.
ದಿನ 11 - 9.36 ಕೋಟಿ ರೂ.
ದಿನ 12 - 7.20 ಕೋಟಿ ರೂ.
ದಿನ 13 - 5.65 ಕೋಟಿ ರೂ.
ದಿನ 14 - 4.95 ಕೋಟಿ ರೂ.
ದಿನ 15 - 11.34 ಕೋಟಿ ರೂ.
ದಿನ 16 - 9.27 ಕೋಟಿ ರೂ.
ದಿನ 17 - 12.89 ಕೋಟಿ ರೂ.
ದಿನ 18 - 3.06 ಕೋಟಿ ರೂ.
ದಿನ 19 - 2.87 ಕೋಟಿ ರೂ.
ದಿನ 20 - 2.71 ಕೋಟಿ ರೂ.
ದಿನ 21 - 2.52 ಕೋಟಿ ರೂ.
ದಿನ 22 - 2.34 ಕೋಟಿ ರೂ.
ದಿನ 23 - 6.83 ಕೋಟಿ ರೂ.
ದಿನ 24 - 7.21 ಕೋಟಿ ರೂ.
ದಿನ 25 - 2.97 ಕೋಟಿ ರೂ.
ಒಟ್ಟು - 300.23 ಕೋಟಿ ರೂ.,(ಏಜೆನ್ಸೀಸ್).