More

    ಕ್ಯಾನ್ಸರ್​​​​​​ನಿಂದ ಬಳಲುತ್ತಿದ್ದಾರೆ ಬ್ರಿಟನ್ ರಾಜ 3ನೇ ಚಾರ್ಲ್ಸ್: ಸಾರ್ವಜನಿಕ ಕಾರ್ಯಕ್ರಮಗಳು ರದ್ದು

    ನವದೆಹಲಿ: ಬ್ರಿಟನ್ ದೊರೆ 3ನೇ ಚಾರ್ಲ್ಸ್ ಕ್ಯಾನ್ಸರ್​​​​ನಿಂದ ಬಳಲುತ್ತಿದ್ದಾರೆ. ಬಕ್ಕಿಂಗ್ ಹ್ಯಾಮ್ ಅರಮನೆಯು ಇದನ್ನು ದೃಢಪಡಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಅವರಿಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಕ್ಯಾನ್ಸರ್ ದೃಢಪಟ್ಟ ನಂತರ ಅವರ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಬೈಡೆನ್ ಮತ್ತು ಸುನಕ್ ಅವರು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

    ಬ್ರಿಟನ್ ರಾಜ ಚಾರ್ಲ್ಸ್ III ಅವರಿಗೆ 75 ವರ್ಷ. ಕಳೆದ ತಿಂಗಳು, ಅವರು ಪ್ರಾಸ್ಟೇಟ್ ಹಿಗ್ಗುವಿಕೆಯಿಂದ ಆಸ್ಪತ್ರೆಗೆ ದಾಖಲಾಗಿ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇದೆ ಎಂದು ಅರಮನೆ ಖಚಿತಪಡಿಸಿಲ್ಲ. ಇದೀಗ ಅವರಿಗೆ ಕ್ಯಾನ್ಸರ್ ಇರುವಿಕೆಯ ಬಗ್ಗೆ ತಿಳಿದು ಬಂದಿದೆ. ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಿಂಗ್ ಚಾರ್ಲ್ಸ್ III ರ ಕ್ಯಾನ್ಸರ್ ಬಗ್ಗೆ ಬಕ್ಕಿಂಗ್ ಹ್ಯಾಮ್ ಅರಮನೆ “ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಹೇಳಿದೆ. ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಮತ್ತು ತಮ್ಮ ಹಳೆಯ ಜೀವನಕ್ಕೆ ಮರಳಲಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಸದ್ಯ ಅವರು ಕೆಲವು ದಿನಗಳ ಕಾಲ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ತಮ್ಮ ಅರಮನೆಯ ಉಸ್ತುವಾರಿಯನ್ನು ಮುಂದುವರಿಸಲಿದ್ದಾರೆ.

    ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಟ್ವಿಟರ್‌ನಲ್ಲಿ ಪೂರ್ಣ ಮತ್ತು ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುವುದಾಗಿ ಪೋಸ್ಟ್ ಮಾಡಿದ್ದಾರೆ. “ಅವರು ಚೇತರಿಸಿಕೊಂಡು ಕಮ್ ಬ್ಯಾಕ್ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಅವರು ಚೇತರಿಸಿಕೊಳ್ಳಲೆಂದುದು ಇಡೀ ದೇಶ ಹಾರೈಸುತ್ತಿದೆ” ಎಂದು ತಿಳಿಸಿದ್ದಾರೆ.

    ಯುಎಸ್ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ರಾಜ ಚಾರ್ಲ್ಸ್ III ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಇನ್​​​​ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಯುನೈಟೆಡ್ ಕಿಂಗ್‌ಡಂನ ಜನರೊಂದಿಗೆ ರಾಜರ ಪೂರ್ಣ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.

    ಬ್ರಿಟನ್‌ಗೆ ಮರಳಲಿದ್ದಾರೆ ಪ್ರಿನ್ಸ್ ಹ್ಯಾರಿ
    ಅಮೆರಿಕದಲ್ಲಿ ನೆಲೆಸಿರುವ ಪ್ರಿನ್ಸ್ ಹ್ಯಾರಿ ಅವರು ತಮ್ಮ ಪತ್ನಿ ಮೇಘನ್ ಮಾರ್ಕೆಲ್ ಅವರೊಂದಿಗೆ ಶೀಘ್ರದಲ್ಲೇ ಬ್ರಿಟನ್‌ಗೆ ಮರಳಲಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ತಿಳಿಸಿದೆ. ರಾಜರ ಕ್ಯಾನ್ಸರ್ ಸುದ್ದಿ ತಿಳಿದ ನಂತರ ಅವರು ಬ್ರಿಟನ್‌ಗೆ ಹೋಗಲು ಯೋಜಿಸಿದ್ದಾರೆ. 2022 ರಲ್ಲಿ ರಾಣಿ ಎಲಿಜಬೆತ್ ಅವರ ಮರಣದ ನಂತರ, ಕಿಂಗ್ ಚಾರ್ಲ್ಸ್ III ಬ್ರಿಟನ್‌ನ ರಾಜನಾದರು. ಕಳೆದ ವರ್ಷ ಮೇ 6ರಂದು ಇವರ ಪಟ್ಟಾಭಿಷೇಕ ನಡೆದಿತ್ತು. ಇದಾಗಿ 18 ತಿಂಗಳ ನಂತರ ಅವರು ಕ್ಯಾನ್ಸರ್​​​ನಿಂದ ಬಳಲುತ್ತಿದ್ದಾರೆ.

    ಪ್ರಕೃತಿ ಅಸ್ತಿತ್ವದ ವೈಶಿಷ್ಟ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts