More

    ಸೀರೆ ನಾರಿಯರ ಗಮನಕ್ಕೆ; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್​​​..!

    ಬೆಂಗಳೂರು: ಸೀರೆ ಹೆಂಗಸರು ತೊಟ್ಟುಕೊಳ್ಳುವ, ಹೊಲಿಗೆ ಮಾಡದ, ಒಂದು ವಿಧವಾದ ಉದ್ದನೆಯ ಬಟ್ಟೆ. ಸೀರೆ ಭಾರತೀಯ ಮಹಿಳೆಯರ ಸಂಕೇತ. ವಿಶ್ವದಾದ್ಯಂತ ತನ್ನದೇ ಛಾಪು ಮೂಡಿಸಿರುವ ಸೀರೆಯ ಅಂದಕ್ಕೆ ಮಾರು ಹೋಗದವರಿಲ್ಲ.   ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವ ಈ ಸೀರೆಯಿಂದ ಭೀಕರ ಖಾಯಿಲೆ ಉಂಟಾಗುತ್ತದೆ ಎಂದರೆ ನಂಬಲು ಅಸಾಧ್ಯವಾದ್ರೂ ಇದು ಸತ್ಯ.

    ಮಹಿಳೆಯರಲ್ಲಿ ಆತಂಕ ಸೃಷ್ಟಿಸುತ್ತಿದೆ ಸೀರೆ ಕ್ಯಾನ್ಸರ್​. ಮುಂಬೈನ ಆರ್ ಎನ್ ಕೂಪರ್ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ 68 ವರ್ಷದ ಮಹಿಳೆಯೊಬ್ಬರಿಗೆ ಸೀರೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

    ಸೀರೆ ನಾರಿಯರ ಗಮನಕ್ಕೆ; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್​​​..!

    ಏನಿದು ಸೀರೆ ಕ್ಯಾನ್ಸರ್​​? ಸೀರೆ ಉಟ್ಟುಕೊಳ್ಳುವುದರಿಂದ ಕ್ಯಾನ್ಸರ್​​​ ಬರುತ್ತದೆಯೇ? ಸೀರೆಗೂ ಕ್ಯಾನ್ಸರ್​​ಗೂ ಏನು ಸಂಬಂಧ? ಈರೀತಿಯ ಸಾಕಷ್ಟು ಗೊಂದಲದ ಪ್ರಶ್ನೆ ಬಂದಿದೆ.

    ಸೀರೆ ಸಾಧಾರಣವಾಗಿ ೪ ಅಥಾವಾ ೯ ಮೀಟರ್ ಉದ್ದವಿರುತ್ತದೆ. ಈ ವಸ್ತ್ರ ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್, ಬರ್ಮಾ ಮತ್ತು ಮಲೇಶಿಯಾ ದೇಶಗಳಲ್ಲಿ ಜನಪ್ರಿಯವಾಗಿದೆ. ಇದನ್ನು ಸಾಧಾರಾಣವಾಗಿ ಸೊಂಟಕ್ಕೆ ಸುತ್ತಿಕೊಂಡು, ಒಂದು ತುದಿಯನ್ನು ಹೆಗಲ ಮೇಲೆ ಬರುವಂತೆ ಹೊದೆಯಲಾಗುತ್ತದೆ. ಆದರೂ , ಇದನ್ನು ಉಡುವ ರೀತಿಗಳಲ್ಲಿ ವಿವಿಧ ದೇಶಗಳಲ್ಲಿ , ಪ್ರದೇಶಗಳಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ.

    ಕ್ಯಾನ್ಸರ್​​ ಕೇವಲ ಸೀರೆ ಉಡುವವರಲ್ಲಿ ಮಾತ್ರವಲ್ಲದೇ ಬಿಗಿಯಾಗಿ ಬಟ್ಟೆ ಧರಿಸುವವರಲ್ಲಿ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಸೀರೆ ಉಡುವಾಗ ಒಳಗೆ ಲಂಗವನ್ನು ಧರಿಸುತ್ತಾರೆ. ಈವೇಳೆ ದೀರ್ಘಕಾಲದ ವರೆಗೆ ಸೊಂಟದ ಸುತ್ತಲೂ ಲಂಗವನ್ನು ಬಿಗಿಯಾಗಿ ಕಟ್ಟಿಕೊಳ್ಳುವುದರಿಂದ ಅಪರೂಪದ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಸೀರೆ ಕ್ಯಾನ್ಸರ್ ಎನ್ನುವುದು ಸೀರೆಯನ್ನು ಉಡುವ ಮಹಿಳೆಯರಲ್ಲಿ ಸೊಂಟದ ರೇಖೆಯ ಉದ್ದಕ್ಕೂ ಸಂಭವಿಸುವ ಅತ್ಯಂತ ಅಪರೂಪದ ಚರ್ಮದ ಕ್ಯಾನ್ಸರ್ ಆಗಿದೆ  ಎಂದು ತಜ್ಞರು ಎಚ್ಚರಿಸಿದ್ದಾರೆ.

    ಸೀರೆ ನಾರಿಯರ ಗಮನಕ್ಕೆ; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್​​​..!
    ಸಾಂದರ್ಭಿಕ ಚಿತ್ರ

    ದೆಹಲಿಯ ಪಿಎಸ್‌ಆರ್‌ಐ ಆಸ್ಪತ್ರೆಯ ಕ್ಯಾನ್ಸರ್‌ ವಿಭಾಗದ ವೈದ್ಯರಾದ ಡಾ. ವಿವೇಕ್‌ ಗುಪ್ತಾ ಅವರು ಹೇಳಿರುವಂತೆ “ಭಾರತದಲ್ಲಿ ವರ್ಷಗಳಿಂದ ಸೀರೆ ಉಡುವ ಮಹಿಳೆಯರಲ್ಲಿ ಕ್ಯಾನ್ಸರ್​​ ಬರುವ ಸಾಧ್ಯತೆ ಹೆಚ್ಚು. ಏಕೆಂದರೆ ಬಿಗಿಯಾಗಿ ಲಂಗವನ್ನು ಧರಿಸಿರುವಂತಹ ಸೊಂಟದ ಭಾಗದಲ್ಲಿ ಪ್ರಾರಂಭದಲ್ಲಿ ತುರಿಕೆ ಆರಂಭವಾಗಿ, ದಿನಕಳೆದಂತೆ ಸೊಂಟದ ಸುತ್ತಲೂಚರ್ಮದ ಸಿಪ್ಪೆ ಏಳಲು ಆರಂಭವಾಗುತ್ತದೆ. ಈ ರೀತಿಯ ಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷ್ಯಿಸುತ್ತಾ ಹೋದರೆ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು ಎಂದು ಅವರು ಎಚ್ಚರಿಸಿದ್ದಾರೆ.

    ಸಂಶೋಧನೆಯ ಪ್ರಕಾರ, ಜೀನ್ಸ್ ಪುರುಷರಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ತಾಪಮಾನವನ್ನು ಹೆಚ್ಚಿಸುತ್ತದೆ, ಇದು ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ವೃಷಣ ಕ್ಯಾನ್ಸರ್ (ಅಂಡಾಶಯದ ಕ್ಯಾನ್ಸರ್) ಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.

    ಸೀರೆ ನಾರಿಯರ ಗಮನಕ್ಕೆ; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್​​​..!
    ಸಾಂದರ್ಭಿಕ ಚಿತ್ರ

    ಸೀರೆ, ಬಟ್ಟೆಗಳಿಂದ ಕ್ಯಾನ್ಸರ್‌ ಹರಡಲು ಮುಖ್ಯ ಕಾರಣ ಬಿಗಿಯಾಗಿ ಧರಿಸುವುದು. ಬಿಗಿಯಾದ ಬಟ್ಟೆಗಳು ದೇಹದಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದು.

    ಮಹಿಳೆಯರು ಒಳಉಡುಪುಗಳ ಬಗ್ಗೆ ಗಮನ ನೀಡಬೇಕು. ಅತಿಯಾಗಿ ಬಿಗಿದಂತಿರುವ ಒಳಉಡುಪುಗಳನ್ನು ಧರಿಸುವುದು ಅಪಾಯ. ಫ್ಯಾಷನ್‌ ಹೆಸರಿನಲ್ಲಿ ಆರೋಗ್ಯ ನಿರ್ಲಕ್ಷ್ಯ ಮಾಡುವುದು ಒಳಿತಲ್ಲ.

    ಸೀರೆ ನಾರಿಯರ ಗಮನಕ್ಕೆ; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್​​​..!
    ಸಾಂದರ್ಭಿಕ ಚಿತ್ರ

    ಜಿಮ್‌ನಲ್ಲಿ ಧರಿಸುವ ಬಿಗಿಯಾದ ಬಟ್ಟೆಗಳ ಕೂಡ ತೊಂದರೆ ಉಂಟು ಮಾಡಬಹುದು.  ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಇಂತಹ ಸಮಸ್ಯೆಗಳಿಂದ ದೂರ ಇರಬಹುದು.

    ‘ಕದಂಬ’ ನಟಿ ಭಾನುಪ್ರಿಯಾ ಜತೆ 2ನೇ ಮದುವೆಗೆ ರೆಡಿ ಆದ ಇಬ್ಬರು ಮಕ್ಕಳ ತಂದೆ; ನಂತ್ರ ತೆರೆಮರೆಯಲ್ಲಿ ನಡೆದಿದ್ದೇ ಬೇರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts