ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ತೆರಳಿ ಮಲಗಿದ್ದ ಹಲಸೂರು ಗೇಟ್ ಠಾಣೆಯ ಎಎಸ್​ಐ ಸಾವು

ASI Anand Kumar
Published on

ಬೆಂಗಳೂರು: ಕೆಲಸ ಮುಗಿಸಿ ಮನೆಗೆ ಹೋಗಿ ಮಲಗಿದ ಹಲಸೂರು ಗೇಟ್​ ಸಂಚಾರಿ ಪೊಲೀಸ್ ಠಾಣೆಯ ಎಎಸ್​ಐ ಮಲಗಿದ್ದ ರೀತಿಯಲ್ಲೇ ಮೃತಪಟ್ಟಿದ್ದಾರೆ.

ಆನಂದ್ ಕುಮಾರ್ ಮೃತ ಎಎಸ್ಐ. ರಾತ್ರಿ ಪಾಳಿ ಕೆಲಸ ಮಾಡಿ ಮನೆಗೆ ತೆರಳಿ ಮಲಗಿದ್ದರು. ಅವರನ್ನು ಮನೆಯವರು ಏಳಿಸಲು ಮನೆಯವರು ಪ್ರಯತ್ನ ಮಾಡಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮಲಗಿದ್ದಾಗಲೇ ಆನಂದ್​ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಆನಂದ್​ ಅವರು ನಾಗರಭಾವಿ ಬಳಿಯ ಮನೆಯಲ್ಲಿ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net