'ನಿಮ್ಮ ಪೊಲಿಟಿಕಲ್ ಸ್ಟ್ರೋಕ್​ಗೆ ಟ್ರೀಟ್​ಮೆಂಟ್ ಕೊಟ್ಟಿದ್ದೇ ಬಿಎಸ್​ವೈ...' ವಿಶ್ವನಾಥ್​ಗೆ ಹಿಗ್ಗಾಮುಗ್ಗಾ ತರಾಟೆ

Vishwanath
Published on

ಚಾಮರಾಜನಗರ: ಸನ್​ಸ್ಟ್ರೊಕ್​ನಿಂದಾಗಿ ಜನತಾ ಪರಿವಾರ ಹಾಗೂ ಕಾಂಗ್ರೆಸ್​ ಹಾಳಾಗಿದೆ. ಇದು ಬಿಜೆಪಿಗೂ ಕಾಲಿಟ್ಟಿದೆ. ಸಿಎಂ ಬಿ.ಎಸ್​.ಯಡಿಯೂರಪ್ಪ ಕೂಡ ಸನ್​ಸ್ಟ್ರೊಕ್​ಗೆ ಒಳಗಾಗಿದ್ದು ಭ್ರಷ್ಟ, ದಲ್ಲಾಳಿ ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಎಚ್​.ವಿಶ್ವನಾಥ ಆಕ್ರೋಶ ಹೊರಹಾಕಿದ್ದಾರೆ. ಸಚಿವ ಸ್ಥಾನ ಸಿಗಲಿಲ್ಲ ಎಂದು ಅಸಮಾಧಾನಗೊಂಡಿರುವ ವಿಶ್ವನಾಥ್​, ಬಿಎಸ್​ವೈ ವಿರುದ್ಧ ಟೀಕಾಸ್ತ್ರ ಬಿಡುತ್ತಲೇ ಇದ್ದಾರೆ.

ವಿಶ್ವನಾಥ್​ರ ಈ ನಡೆಯನ್ನು ಆಕ್ಷೇಪಿಸಿರುವ ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನ್ ಕುಮಾರ್, 'ನಿಮಗಾಗಿದ್ದ ಪೊಲಿಟಿಕಲ್ ಸ್ಟ್ರೋಕ್​ಗೆ ಟ್ರೀಟ್​ಮೆಂಟ್ ಕೊಟ್ಟು ನಿಮ್ಮನ್ನು ವಿಧಾನ ಪರಿಷತ್ತಿಗೆ ಕಳಿಸಿ ಕೊಟ್ಟವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಇದನ್ನು ಇಷ್ಟು ಬೇಗ ಮರೆತುಬಿಟ್ಟಿರಾ?' ಎಂದು ಮಾತಿನಲ್ಲೇ ಕೆಣಕಿದ್ದಾರೆ.

'ಹತಾಶೆ ನಿಮ್ಮನ್ನು ಕಂಗೆಡಿಸಿದೆ. ನಾಲಿಗೆ ಹಳಿತಪ್ಪಿದೆ, ಪ್ರತಿಫಲದ ಸ್ಮರಣೆ ನೀವು ಮರೆತಂತಿದೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಕೇಂದ್ರ ಸಮಿತಿಯಿಂದ ಕಳಿಸಿದ ಸಚಿವರುಗಳ ಪಟ್ಟಿಯನ್ನು ಯಾರಾದರೂ ಸರಿ ಸ್ವೀಕರಿಸಲೇಬೇಕು. ತಾಳ್ಮೆ ಇದ್ದರೆ ಎಲ್ಲವನ್ನೂ ಜಯಿಸಬಹುದು' ಎಂದು ಸಾಮಾಜಿಕ ಜಾಲತಾಣದಲ್ಲಿ ವಿಶ್ವನಾಥ್ ವಿರುದ್ಧ ನಿರಂಜನ್ ಕುಮಾರ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net