

ಬೆಂಗಳೂರು: ಈ ಬಾರಿ ಗವಿಗಂಗಾಧರೇಶ್ವರ ಸ್ವಾಮಿಗೆ ಸೂರ್ಯ ರಶ್ಮಿ ಬಿದ್ದಿಲ್ಲ! ಮಕರ ಸಂಕ್ರಾಂತಿಯಂದು ಸೂರ್ಯದೇವನು ದಕ್ಷಿಣಾಯ ಪಥ ಮುಗಿಸಿ ಉತ್ತರಾಯಣಕ್ಕೆ ಸಾಗುವ ವೇಳೆ ಗವಿ ಗಂಗಾಧಾರೇಶ್ವರ ದೇಗುಲದ ಶಿವಲಿಂಗವನ್ನ ಸ್ಪರ್ಶಿಸಬೇಕಿತ್ತು. ಆದರೆ, ಶಿವಲಿಂಗವನ್ನ ಸ್ಪರ್ಶಿಸದೆ ಭಾಸ್ಕರ ಪಥ ಬದಲಿಸಿದ್ದಾನೆ.
ಪ್ರತಿ ಸಂಕ್ರಾಂತಿ ಹಬ್ಬದಲ್ಲಿ ಈ ದೇಗುಲದ ಶಿವಲಿಂಗದ ಮೇಲೆ ಸೂರ್ಯರಶ್ಮಿಯ ಅಭಿಷೇಕವಾಗುತ್ತಿತ್ತು. ಆದರೆ ಈ ಬಾರಿ ಸೂರ್ಯನ ಕಿರಣ ಶಿವಲಿಂಗದ ಮೇಲೆ ಬೀಳಲೇ ಇಲ್ಲ. ಇಂದು ಸಂಜೆ 5.27ರೊಳಗೆ ಸೂರ್ಯರಶ್ಮಿ ಸ್ಪರ್ಶಿಸಲಿದೆ ಎಂದು ಸಹಸ್ರಾರು ಭಕ್ತರು ಕಾಯುತ್ತಲೇ ಇದ್ದರು. ಮೋಡ ಅಡ್ಡ ಬಂದ ಹಿನ್ನೆಲೆಯಲ್ಲಿ ಶಿವಲಿಂಗವನ್ನು ಸ್ಪರ್ಶಿಸದೆ ಸೂರ್ಯ ತನ್ನ ಪಥ ಬದಲಿಸಿದ್ದಾನೆ.