ಸಿದ್ದು ಪ್ರಮಾಣವಚನಕ್ಕೆ ದೇಶದ ಯಾವ್ಯಾವ ನಾಯಕರಿಗೆ ಆಮಂತ್ರಣ? ಇಲ್ಲಿದೆ ಪಟ್ಟಿ…

Siddaramaiah
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಮಾಣ ವಚನ ಸಮಾರಂಭ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮೇ 20ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿದ್ದು, ದೇಶದ ರಾಜಕೀಯ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಯಾವ ಪಕ್ಷದ ಯಾವ ನಾಯಕರಿಗೆ ಆಮಂತ್ರಣ ನೀಡಲಾಗಿದೆ ಎಂಬುದರ ವಿವರವಾದ ಪಟ್ಟಿಯನ್ನು ನಿಯೋಜಿತ ಮುಖ್ಯಮಂತ್ರಿಯವರ ಕಾರ್ಯಾಲಯ ಬಿಡುಗಡೆ ಮಾಡಿದೆ.

opposition unity

ಇಲ್ಲಿದೆ ಪಟ್ಟಿ

  • ಎಂಕೆ ಸ್ಟಾಲಿನ್ - ತಮಿಳುನಾಡು ಮುಖ್ಯಮಂತ್ರಿ (ಡಿಎಂಕೆ)
  • ನಿತೀಶ್ ಕುಮಾರ್- ಬಿಹಾರ ಮುಖ್ಯಮಂತ್ರಿ (ಜೆಡಿಯು)
  • ಮಮತಾ ಬ್ಯಾನರ್ಜಿ- ಪಶ್ಚಿಮ ಬಂಗಾಳ ಮುಖ್ಯಮಂತ್ರಿ (ಟಿಎಂಸಿ)
  • ಹೇಮಂತ್ ಸೋರೆನ್- ಜಾರ್ಖಂಡ್ ಮುಖ್ಯಮಂತ್ರಿ (ಜೆಎಂಎಂ)
  • ತೇಜಸ್ವಿ ಯಾದವ್- ಬಿಹಾರದ ಉಪ ಮುಖ್ಯಮಂತ್ರಿ (ಆರ್‌ಜೆಡಿ)
  • ಶರದ್ ಪವಾರ್- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ (ಎನ್‌ಸಿಪಿ)
  • ಉದ್ಧವ್ ಠಾಕ್ರೆ- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ (ಶಿವಸೇನಾ)
  • ಅಖಿಲೇಶ್ ಯಾದವ್ - ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ (ಸಮಾಜವಾದಿ ಪಾರ್ಟಿ)
  • ಫಾರೂಕ್ ಅಬ್ದುಲ್ಲಾ- ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ (ನ್ಯಾಷನಲ್ ಕಾನ್ಫರೆನ್ಸ್)
  • ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ (ಪಿಡಿಪಿ)
  • ಸೀತಾರಾಮ್ ಯೆಚೂರಿ- ಸಿಪಿಎಂ ಪ್ರಧಾನ ಕಾರ್ಯದರ್ಶಿ
  • ಡಿ. ರಾಜ- ಸಿಪಿಐ ಪ್ರಧಾನ ಕಾರ್ಯದರ್ಶಿ
  • ಲಲ್ಲನ್ ಸಿಂಗ್- ಜೆಡಿಯು ಅಧ್ಯಕ್ಷ
  • ವೈಕೋ- ಎಂಡಿಎಂಕೆ ಅಧ್ಯಕ್ಷ
  • ಎನ್.ಕೆ. ಪ್ರೇಮಚಂದ್ರನ್, ಆರ್‌ಎಸ್‌ಪಿ ಅಧ್ಯಕ್ಷ
  • ದೀಪಂಕರ ಭಟ್ಟಾಚಾರ್ಯ- ಸಿಪಿಐಎಂಎಲ್ ಪ್ರಧಾನ ಕಾರ್ಯದರ್ಶಿ
  • ಡಾ. ತೋಲ್ ತಿರುಮಾವಳವನ್- ವಿಸಿಕೆ ಅಧ್ಯಕ್ಷ
  • ಜಯಂತ್ ಚೌಧರಿ- ಆರ್‌ಎಲ್‌ಡಿ ಅಧ್ಯಕ್ಷ
  • ಜೋಸ್ ಕೆ. ಮಣಿ- ಕೇರಳ ಕಾಂಗ್ರೆಸ್ ಅಧ್ಯಕ್ಷ
  • ಸಾದಿಕ್ ಅಲಿ ತಂಗಳ್- ಐಯುಎಂಎಲ್ ಅಧ್ಯಕ್ಷ
opposition
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net