'ಬೆತ್ತಲಾಗಿ ಬಂದು ನನ್ನ ಪಕ್ಕ ಮಲಗಿ, ಗುಪ್ತಾಂಗ ತೋರಿಸುತ್ತಿದ್ದ..ಆತನನ್ನು ಅಪ್ಪನೆಂದು ಹೇಗೆ ಒಪ್ಪಲಿ?'

Lady
Published on

ಫ್ಯಾಶನ್​ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದವರು ಅಲ್ಡೋ ಗುಸ್ಸಿ. ಒಂದು ಸಣ್ಣ ಇಟಾಲಿಯನ್​ ಕುಶಲಕರ್ಮಿ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಏರಿಸಿದವರು.

ಈ ಅಲ್ಡೋ ಗುಸ್ಸಿಯವರ ಮೊಮ್ಮಗಳು ಇದೀಗ ಸುದ್ದಿಯಾಗಿದ್ದಾರೆ. ತನ್ನ ಮಲತಂದೆಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರೆಸಿದ್ದಲ್ಲದೆ, ಯುಎಸ್​ ನ್ಯಾಯಾಲಯದಲ್ಲಿ ಆತನ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. 16 ವರ್ಷಕ್ಕೂ ಹೆಚ್ಚು ಕಾಲ ನನ್ನ ಮಲತಂದೆ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈಕೆಯ ಹೆಸರು ಅಲೆಕ್ಸಾಂಡ್ರಾ ಜರಿನಿ. 35 ವರ್ಷದ ಈಕೆ ದೂರು ನೀಡಿದ್ದು ಜೋಸೆಫ್​ ರಫೆಲ್ಲೋ ವಿರುದ್ಧ. ರಫೆಲೋ ಮ್ಯೂಸಿಕ್​ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದ. ನಾನು ಆರು ವರ್ಷದವಳಿದ್ದಾಗಿನಿಂದ, 22 ವಯಸ್ಸಿನವರೆಗೂ ನಿರಂತರವಾಗಿ ಅವನಿಂದ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ಪ್ರತಿದಿನವೂ ಸಂಪೂರ್ಣ ಬೆತ್ತಲಾಗಿ ನಾನು ಮಲಗುತ್ತಿದ್ದ ಬೆಡ್​ಗೆ ಬರುತ್ತಿದ್ದ. ನನ್ನ ಪಕ್ಕ ಮಲಗಿ ಮುದ್ದಿಸುತ್ತಿದ್ದ. ಆತ ತನ್ನ ಗುಪ್ತಾಂಗವನ್ನು ನನ್ನೆದುರು ಪ್ರದರ್ಶಿಸಿ..ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಅವನನ್ನು ಅಪ್ಪ ಎಂದು ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಎಂದು ಜರಿನಿ ದೂರಿನಲ್ಲಿ ತಿಳಿಸಿದ್ದಾರೆ. ನನ್ನ ತಾಯಿ ಪೆಟ್ರೀಷಿಯಾ ಗುಸ್ಸಿ ಮತ್ತು ಅಜ್ಜಿ ಬ್ರೂನಾ ಪಾಲೊಂಬೊಗೆ ಇದೆಲ್ಲ ಗೊತ್ತಿದ್ದರೂ ಸುಮ್ಮನಿದ್ದರು. ಅಜ್ಜಿಯಂತೂ ನನಗೇ ಬೈಯುತ್ತಿದ್ದರು. ಪ್ರತಿರೋಧ ಒಡ್ಡದೆ ಸುಮ್ಮನಿರು ಎಂದು ಹೇಳುತ್ತಿದ್ದರು.
ಅಷ್ಟೇ ಅಲ್ಲ, ನನ್ನ ತಾಯಿ ಎಷ್ಟೋ ಬಾರಿ ನನಗೆ ಹೊಡೆದಿದ್ದಾರೆ. ಕತ್ತು ಹಿಸುಕಿದ್ದಾರೆ. ಆಗೆಲ್ಲ ರಫೆಲೋ ಬಂದು ನನ್ನ ರಕ್ಷಿಸುತ್ತಿದ್ದ. ನಂತರ ಸಂತೈಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ನನಗೆ ಮದ್ಯಪಾನ ಮಾಡುವಂತೆಯೂ ಒತ್ತಾಯಿಸುತ್ತಿದ್ದ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಕೋಲ್ಕತಕ್ಕೆ ಹೋಗಿ ಕಂಗನಾ ಅಭಿಮಾನಿಯನ್ನು ಅರೆಸ್ಟ್ ಮಾಡಿದ್ರು ಮುಂಬೈ ಪೊಲೀಸ್!

ಇದಕ್ಕೆ ಪ್ರತಿಕ್ರಿಯೆ ನೀಡಿದ ಜರಿನಿ ತಾಯಿ ಪೆಟ್ರೀಷಿಯಾ, ರಫೆಲೋ ಮಾಡಿದ ಕೆಲಸದ ಬಗ್ಗೆ ನನಗೂ ಬೇಸರವಿದೆ. 2007ರಲ್ಲಿ ಜರಿನಿ ನಮ್ಮ ಕುಟುಂಬದ ವೈದ್ಯರ ಎದುರು ಎಲ್ಲ ಸತ್ಯವನ್ನೂ ಬಿಚ್ಚಿಟ್ಟಳು. ಆಗಲೇ ನನಗೆ ಗೊತ್ತಾಯಿತು. ಅಂದೇ ನಾನು ರಫೆಲೋಗೆ ಡಿವೋರ್ಸ್​ ನೋಟಿಸ್ ಕಳಿಸಿದ್ದೆ. ಅದನ್ನು ಕೇಳಿ ಪಾತಾಳಕ್ಕೆ ಇಳಿದುಹೋಗಿದ್ದೆ ಎಂದಿದ್ದಾರೆ.

ರಫೆಲೋ ಈ ಆರೋಪಗಳನ್ನೆಲ್ಲ ತಳ್ಳಿ ಹಾಕಿದ್ದಾರೆ. ನಾನು ಆಕೆಗೆ ಲೈಂಗಿಕ ದೌರ್ಜನ್ಯ ಎಸಗಲಿಲ್ಲ ಎಂದು ಹೇಳಿದ್ದಾರೆ ಅವನ ಪತ ವಕೀಲರು ತಿಳಿಸಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ಕೋರ್ಟ್​ನಲ್ಲಿ ಶುರುವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net