ಕಿತ್ತಳೆ ಬಣ್ಣಕ್ಕೆ ತಿರುಗಿದೆ ಅಮೆರಿಕದ ಆಗಸ: ಹಗಲಲ್ಲೂ ಕತ್ತಲು! ಒಬಾಮಾ ಆತಂಕ

american sky
Published on

ಕ್ಯಾಲಿಫೋರ್ನಿಯಾ: ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋ ಹಾಗೂ ಕ್ಯಾಲಿಫೋರ್ನಿಯಾ ಭಾಗಗಳಲ್ಲಿ ಆಕಾಶ ಈಗ ಕಿತ್ತಳೆ ಬಣ್ಣಕ್ಕೆ ತಿರುಗಿದೆ. ಇದಾಗಲೇ ಕಳೆದೊಂದು ವಾರದಿಂದ ಈ ವಿಲಕ್ಷಣೆ ಘಟನೆ ಉಂಟಾಗಿದೆ.

ಇದಕ್ಕೆ ಕಾರಣವೆಂದರೆ, ಕಾಳ್ಗಿಚ್ಚು. ಅಮೆರಿಕದ ಉತ್ತರ ಭಾಗದಲ್ಲಿ ಬಿರುಗಾಳಿಗೆ ಕ್ಯಾಲಿಫೋರ್ನಿಯಾದ 30ಕ್ಕೂ ಹೆಚ್ಚು ಕಡೆ ಕಾಡ್ಗಿಚ್ಚು ಹೊತ್ತಿ ಉರಿದಿದ್ದು, ಅದಿನ್ನೂ ರೌದ್ರರೂಪ ತಾಳುತ್ತಲೇ ಇದೆ.

ಕಳೆದ ವಾರವಷ್ಟೇ ಸುಮಾರು ಎರಡು ದಶಲಕ್ಷ ಎಕರೆಯಷ್ಟು ಅರಣ್ಯ ಪ್ರದೇಶವನ್ನು ಬೆಂಕಿಯಲ್ಲಿ ದಹಿಸಿ ಹೋಗಿತ್ತು. ಇದೀಗ ಸ್ಯಾಕ್ರಾಮೆಂಟೊದ ಉತ್ತರಕ್ಕೆ ಕಾಳ್ಗಿಚ್ಚು ರೌದ್ರಾವತಾರ ತೋರಿದ್ದು, ನಿನ್ನೆ ಒಂದೇ ದಿನ ಮೂರು ಮಂದಿಯನ್ನು ಬಲಿ ಪಡೆದಿದೆ. ಇಲ್ಲಿಯವರೆಗೆ ಕಾಳ್ಗಿಚ್ಚಿನಿಂದ ಸತ್ತವರ ಸಂಖ್ಯೆ 11ಕ್ಕೆ ಏರಿದೆ.

ಇದೇ ಕಾರಣದಿಂದ ಹಗಲಲ್ಲೂ ರಾತ್ರಿಯಂತೆ ಕತ್ತಲೆ ವಾತಾವರಣ ಕಂಡುಬರುತ್ತಿದೆ. ಇದರ ಫೋಟೋವನ್ನು ಟ್ವಿಟರ್​ ಮೂಲಕ ಶೇರ್​ ಮಾಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆತಂಕ ವ್ಯಕ್ತಪಡಿಸಿದ್ದಾರೆ, ಜತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಪ್ರತಿ ಘಟನೆಗಳೂ ಹವಾಮಾನದ ಮೇಲೆ ಪರಿಣಾಮ‌ ಬೀರುತ್ತವೆ ಎಂಬುದಕ್ಕೆ ಈ ಅವಘಡಗಳೇ ಸಾಕ್ಷಿ. ಪರಿಸರವನ್ನು ನಾವೆಷ್ಟು ಕಾಳಜಿಯಿಂದ ನೋಡಿಕೊಳ್ಳಬೇಕು ಎನ್ನುವುದನ್ನು ಇದು ಸೂಚಿಸುತ್ತದೆ. ಪರಿಸರದ ಮೇಲೆ ಪ್ರತಿಕೂಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಹೇಗೆ ಅವಘಡಗಳು ಸಂಭವಿಸುತ್ತವೆ ಎನ್ನುವುದಕ್ಕೆ ಇದು ಉದಾಹರಣೆ ಎಂದಿದ್ದಾರೆ.

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು ಮೂರು ವಾರಗಳಿಗಿಂತ ಹರಡುತ್ತಲೇ ಸಾಗಿದ್ದು, ಹೆಚ್ಚಿನ ಅನಾಹುತವಾಗುವ ಸಂಭವವಿದೆ. ಇದಾಗಲೇ ಅರಣ್ಯದಲ್ಲಿ ಇರುವ ವನ್ಯಮೃಗಗಳು ದಹಿಸಿ ಹೋಗಿದ್ದು, ಎಂಟು ರಾಷ್ಟ್ರೀಯ ಅರಣ್ಯ ಪ್ರದೇಶಗಳನ್ನು ಮುಚ್ಚಲಾಗಿದೆ.

ಬೆಂಕಿಯು 24 ಗಂಟೆಗಳಲ್ಲಿ ಸುಮಾರು 400 ಚದರ ಮೈಲಿ (1,036 ಚದರ ಕಿಲೋಮೀಟರ್) ಹರಡಿದೆ ಎಂದು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನಿ ಡೇನಿಯಲ್ ಸ್ವೈನ್ ಹೇಳಿದ್ದಾರೆ. ಸಮೀಪ ಇರುವ ವಿದ್ಯುತ್ ಪರಿಕರಗಳು ಸುಟ್ಟು ಕರಕಲಾಗಿವೆ. ವನ್ಯಜೀವಿಗಳಚಿತೂ ಅನುಭವಿಸಿದ ಯಾತನೆ ದೇವರಿಗೆ ಪ್ರೀತಿ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net