More

    ವಿಧವೆ ತಂಗಿಯ ಮೇಲೆ ಗಂಡ ಕಣ್ಣುಹಾಕಿದ್ದಾರೆ: ಕಾನೂನಿನಡಿ ಇರುವ ದಾರಿಗಳೇನು?

    ವಿಧವೆ ತಂಗಿಯ ಮೇಲೆ ಗಂಡ ಕಣ್ಣುಹಾಕಿದ್ದಾರೆ: ಕಾನೂನಿನಡಿ ಇರುವ ದಾರಿಗಳೇನು?ನಾನು ಸರ್ಕಾರಿ ನೌಕರಿಯಲ್ಲಿದ್ದೇನೆ. ಗಂಡ ಮತ್ತು ಮಗಳು ಇದ್ದಾರೆ. ನಮ್ಮ ತಂದೆ ಕೂಡ ಜತೆಯಲ್ಲಿಯೇ ವಾಸಿಸುತ್ತಿದ್ದಾರೆ. ನನ್ನ ತಂಗಿ ಗಂಡ ತೀರಿಕೊಂಡ ಮೇಲೆ ಅವಳು ಮಗುವಿನ ಜತೆ ನಮ್ಮೊಟ್ಟಿಗೆ ಇದ್ದಾಳೆ. ಈಗ ಅವಳು ವಿಧುರ ಒಬ್ಬರನ್ನು ಮದುವೆಯಾಗಬೇಕೆಂದುಕೊಂಡಿದ್ದಾಳೆ. ಅವರೂ ತುಂಬಾ ಒಳ್ಳೆಯವರು. ಈಗ ಸಮಸ್ಯೆ ಬಂದಿರುವುದು ನನ್ನ ಗಂಡನದ್ದು. ಅವರು ಏನೂ ಕೆಲಸ ಮಾಡುತ್ತಿಲ್ಲ. ನಾನೇ ದಿನವೂ ಖರ್ಚಿಗೆ ದುಡ್ಡು ಕೊಡಬೇಕು. ಈಗ ಅವರು ನನ್ನ ತಂಗಿಯನ್ನು ಮದುವೆ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಇದಕ್ಕೆ ಒಪ್ಪದಿದ್ದರೆ ಡೈವೋರ್ಸ್ ಕೊಡುತ್ತೇನೆ ಎಂದು ಹೆದರಿಸುತ್ತಿದ್ದಾರೆ. ನನ್ನ ತಂಗಿಗೆ ಅವರನ್ನು ಕಂಡರೆ ಆಗುವುದಿಲ್ಲ. ಈ ವಿಷಯದಲ್ಲಿ ಜಗಳವಾಡಿ ನನ್ನ ಗಂಡ ನನ್ನ ತಾಯಿಯನ್ನೂ ಚೆನ್ನಾಗಿ ಹೊಡೆದಿದ್ದಾರೆ. ನಮ್ಮ ತಂದೆಯ ಕಚೇರಿ ಹತ್ತಿರ ಹೋಗಿ ಗಲಾಟೆ ಮಾಡುತ್ತಿದ್ದಾರೆ. ನನ್ನ ತಂಗಿಯನ್ನು ಹೇಗಾದರೂ ಒಪ್ಪಿಸಿ ಮದುವೆ ಮಾಡಿಸಿದರೆ ಇಂಥ ವ್ಯಕ್ತಿ ಜತೆ ಆಕೆ ಜೀವನವೂ ಹಾಳಾಗುತ್ತದೆ. ಈಗ ಏನು ಮಾಡಬೇಕು ಎಂದೇ ತಿಳಿಯದಾಗಿದೆ. ಕಾನೂನಿನಡಿ ಪರಿಹಾರವಿದೆಯೆ?

    ನೀವು ಕೂಡಲೇ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ನಿಮ್ಮ ಪತಿಯ ವಿರುದ್ಧ ಪ್ರಕರಣ ದಾಖಲಿಸಿ. ಅವರು ನಿಮ್ಮ ಮನೆಗೆ ಬರಬಾರದು ಎನ್ನುವ ಪ್ರೊಟೆಕ್ಷನ್ ಆರ್ಡರ್ /ರಕ್ಷಣೆಯ ಆದೇಶವನ್ನು ಪಡೆಯಿರಿ. ನಿಮ್ಮ ತಂದೆಯಿಂದಲೂ ನಿಮ್ಮ ಪತಿಯ ವಿರುದ್ಧ ಫಿರ್ಯಾದು ದಾಖಲಿಸಿ. ನಿಮ್ಮ ತಂಗಿಯನ್ನು ಮದುವೆಯಾಗಲು ಹಿಂಸೆ ಮಾಡುತ್ತಿದ್ದಾರೆ ಎನ್ನುವುದನ್ನೂ ನೀವು ಪ್ರಕರಣದಲ್ಲಿ ತಿಳಿಸಿ. ಹಾಗೆಯೇ ಅವಳಿಂದಲೂ ರಕ್ಷಣೆ ಕೋರಿ ಪೊಲೀಸರಿಗೆ ಅರ್ಜಿ ಸಲ್ಲಿಸಿ.

    ಯಾವುದೇ ಕಾರಣಕ್ಕೂ ನಿಮ್ಮ ಪತಿ ನಿಮ್ಮ ತಂಗಿಯನ್ನು ಮದುವೆ ಆಗಲು ಒಪ್ಪಲೇ ಬೇಡಿ. ಒಬ್ಬ ಪತ್ನಿ ಬದುಕಿರುವಾಗ ಆಕೆಯಿಂದ ವಿಚ್ಛೇದನ ಪಡೆಯದೇ ಇನ್ನೊಂದು ಮದುವೆ ಆಗವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ನಿಮಗೆ ಆತ ವಿಚ್ಛೇದನ ಕೊಡುತ್ತೇನೆ ಎಂದು ಹೆದರಿಸಿದರೆ ನೀವು ಹೆದರಬೇಡಿ. ಇಂತಹ ವ್ಯಕ್ತಿಯ ಜತೆ ವೈವಾಹಿಕ ಸಂಬಂಧ ಇಟ್ಟುಕೊಂಡು ನಿಮಗೆ ಬರುವ ಲಾಭವಾದರೂ ಏನು? ಮೇಲಾಗಿ ವಿಚ್ಛೇದನವನ್ನು ಯಾರೂ ಯಾರಿಗೂ ಕೊಡಲಾಗುವುದಿಲ್ಲ. ವಿಚ್ಛೇದನ ಕೊಡುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ. ತಾನೇ ತಪ್ಪು ಮಾಡಿ, ವಿಚ್ಛೇದನ ಪಡೆಯುವ ಅಧಿಕಾರ ಯಾರಿಗೂ ಇರುವುದಿಲ್ಲ. ಆತ ಪ್ರಕರಣ ದಾಖಲಿಸಲಿ. ನೀವು ಧೈರ್ಯವಾಗಿ ಎದುರಿಸಿ. ಆತನನ್ನು ಪೋಷೊಸುವುದನ್ನು ಇನ್ನಾದರೂ ನಿಲ್ಲಿಸಿ.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಸಾಕು ಮಗಳಿಗೆ ಆಸ್ತಿಯಲ್ಲಿ ಹಕ್ಕು ಇದೆಯೆ- ಕಾನೂನು ಏನು ಹೇಳುತ್ತದೆ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts