

Bride Tears : ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಕೊನೆಯವರೆಗೂ ಉಳಿಯುವ ಸುಂದರ ಕ್ಷಣಗಳು. ಹೀಗಾಗಿ ಮದುವೆ ಸಂದರ್ಭದಲ್ಲಿ ಸಾಧ್ಯವಾದಷ್ಟು ಆ ಕ್ಷಣವನ್ನು ವರ್ಣಮಯವಾಗಿಸಲು ವಧು-ವರರು ಬಯಸುತ್ತಾರೆ. ಹೀಗಾಗಿ ಪ್ರೀ ವೆಡ್ಡಿಂಗ್ ಫೋಟೋಶೂಟ್, ವಿಡಿಯೋ ರೆಕಾರ್ಡಿಂಗ್, ಅಲಂಕಾರ ಸೇರಿದಂತೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಈ ಪ್ರಕರಣದಲ್ಲಿ ವಧುವಿಗೆ ಮದುವೆಯೇ ಕಹಿ ಕ್ಷಣವಾಗಿದೆ.
ಮದುವೆಯಾಗುವಾಗ ಇರಬೇಕಿದ್ದ ನಗು ವಧುವಿನ ಮುಖದಲ್ಲಿ ಕಾಣುತ್ತಿಲ್ಲ. ನಗು ಬದಲಾಗಿ ಅಳು ಕಾಣುತ್ತಿದೆ. ಮಂಟಪದಲ್ಲಿ ವರನ ಪಕ್ಕದಲ್ಲಿ ಕುಳಿತು ಅತಿಥಿಗಳ ಮುಂದೆ ವಧು ಕಣ್ಣೀರು ಸುರಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅತಿಥಿಗಳು ನವವಿವಾಹಿತರನ್ನು ಆಶೀರ್ವದಿಸಿ ಅಭಿನಂದಿಸುತ್ತಿದ್ದರೆ ವಧು ಗಳಗಳನೇ ಅಳುತ್ತಿದ್ದಾಳೆ. ಎಷ್ಟೇ ಪ್ರಯತ್ನಿಸಿದರೂ ಆಕೆಗೆ ತನ್ನ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ವಧುವಿನ ಸಂಬಂಧಿಕರು ಆಕೆಯನ್ನ ಎಷ್ಟೇ ಸಮಾಧಾನ ಮಾಡಿದರೂ ಅವಳು ಮಾತ್ರ ಅಳುವುದನ್ನು ನಿಲ್ಲಿಸುತ್ತಿಲ್ಲ. ಇತ್ತ ಪಕ್ಕದಲ್ಲಿ ಕುಳಿತಿದ್ದ ವರ ಮಾತ್ರ ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿಯದೇ ಕಣ್ ಕಣ್ ಬಿಟ್ಟು ನೋಡುತ್ತಿರುವುದು ವೈರಲ್ ವಿಡಿಯೋದಲ್ಲಿದೆ. ಅಷ್ಟಕ್ಕೂ ವಧುವಿನ ಕಣ್ಣೀರಿಗೆ ಕಾರಣ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ವಧುವಿಗೆ ಇಲ್ಲಿ ವರ ಸ್ವಲ್ಪವೂ ಇಷ್ಟವಿಲ್ಲ. ಆಕೆಯ ತಂದೆ, ಅವರ ಬಳಿ ಒಂದು ಮಾತನ್ನೂ ಕೇಳದೆ ತಾನೇ ವರನನ್ನು ಹುಡುಕಿ, ಮದುವೆ ನಿಶ್ಚಯ ಮಾಡಿದ್ದಾರೆ. ಹೀಗಾಗಿ ವಧುವಿಗೆ ವರ ಸ್ವಲ್ಪವೂ ಇಷ್ಟವಿಲ್ಲ. ಮದುವೆ ಮಂಟಪದಲ್ಲಿ ವರನನ್ನು ನೋಡಿದಾಗ ವಧುವಿಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಇದನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೇ ವಧು ಕಣ್ಣೀರು ಹಾಕಿದ್ದಾಳೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯಸ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈವರೆಗೂ 1.38 ಕೋಟಿಗೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋಗೆ ಮೂರು ಲಕ್ಷಕ್ಕೂ ಹೆಚ್ಚು ಲೈಕ್ಸ್ ಕೂಡ ಬಂದಿದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)