Keerthy Suresh : ಹದಿನೈದು ವರ್ಷಗಳ ಡೇಟಿಂಗ್ ನಂತರ, ನಟಿ ಕೀರ್ತಿ ಸುರೇಶ್ ಮತ್ತು ಆಂಟೋನಿ ಥಟ್ಟಿಲ್ ನಿನ್ನೆ (ಡಿ.12) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಮದುವೆಗೆ ಸಂಬಂಧಿಸಿದ ಫೋಟೋಗಳನ್ನು ಸ್ವತಃ ಕೀರ್ತಿ ಸುರೇಶ್ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದರ ನಡುವೆ ಕೀರ್ತಿ ಮತ್ತು ಆಂಟೋನಿ ನಡುವಿನ ವಯಸ್ಸಿನ ವ್ಯತ್ಯಾಸದ ಬಗ್ಗೆಯೂ ಬಹಳ ಚರ್ಚೆಯಾಗುತ್ತಿದೆ.
ಅಂದಹಾಗೆ ಕೀರ್ತಿ ಮತ್ತು ಆಂಟೋನಿ ಒಂದೇ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದರು. ಹೈಸ್ಕೂಲ್ ದಿನಗಳಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆಂಟೋನಿ ಕೀರ್ತಿಗಿಂತ ಎರಡು ವರ್ಷ ದೊಡ್ಡವರು. ಕೀರ್ತಿಗೆ ಸದ್ಯ 32 ವರ್ಷ ಮತ್ತು ಆಂಟೋನಿಗೆ 34 ವರ್ಷ. ಕೊಚ್ಚಿ ಮೂಲದ ಆಂಟೋನಿ ದೋಹಾದಲ್ಲಿ ಉದ್ಯಮಿಯಾಗಿದ್ದಾರೆ. ಆಂಟೋನಿ ಕೊಚ್ಚಿ ಮೂಲದ ಆಸ್ಪರೋಸ್ ವಿಂಡೋಸ್ ಸಲ್ಯೂಷನ್ಸ್ ಎಂಬ ಕಂಪನಿಯ ಮಾಲೀಕರಾಗಿದ್ದಾರೆ.
ಕೀರ್ತಿ ಅವರ ಮದುವೆ ಹಿಂದು-ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯಲಿದೆ ಎಂದು ಮೊದಲೇ ಹೇಳಲಾಗಿತ್ತು. ನಿನ್ನೆ ಮೊದಲ ಸಮಾರಂಭ ಹಿಂದು ಸಂಪ್ರದಾಯದಂತೆ ನಡೆದಿದ್ದು, ಅದೇ ದಿನ ಸಂಜೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆದಿದೆ. ಕ್ಯಾಸಿನೊ ನೈಟ್ ಪಾರ್ಟಿಯೊಂದಿಗೆ ವಿವಾಹ ಸಮಾರಂಭ ಕೊನೆಗೊಂಡಿದೆ.
ಕೀರ್ತಿ ಸುರೇಶ್ ಅವರು ಹಿಂದು ಸಂಪ್ರದಾಯದ ವಿವಾಹದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸಿದರು. ಹಸಿರು ಬಾರ್ಡರ್ ಹೊಂದಿರುವ ಹಳದಿ ಬಣ್ಣದ ರೇಷ್ಮೆ ಉಡುಪನ್ನು ಧರಿಸಿದ್ದರು. ಜುಮುಕಿ ಕಿವಿಯೋಲೆಗಳು ಮತ್ತು ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದರು. ಆಂಟೋನಿ ಕೂಡ ಹಿಂದು ಮದುವೆಯ ಡ್ರೆಸ್ ಧರಿಸಿದ್ದರು. ನಟ ವಿಜಯ್ ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.
ಅಂದಹಾಗೆ ಕೀರ್ತಿ ಸುರೇಶ್ ಮಲಯಾಳಂ ನಿರ್ಮಾಪಕ ಸುರೇಶ್ ಮತ್ತು ನಟಿ ಮೇನಕಾ ಅವರ ಪುತ್ರಿ. ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ಕೀರ್ತಿ ಮಲಯಾಳಂ ಚಿತ್ರ ಗೀತಾಂಜಲಿ ಮೂಲಕ ನಟಿಯಾಗಿ ಬಡ್ತಿ ಪಡೆದರು. ಸದ್ಯ ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್, ಸೂರ್ಯ, ವಿಕ್ರಮ್, ಶಿವಕಾರ್ತಿಕೇಯನ್, ನಾನಿ, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ. ಪ್ರಸ್ತುತ ರಿವಾಲ್ವರ್ ರೀಟಾ ಮತ್ತು ಬೇಬಿ ಜಾನ್ ಚಿತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)
ಒಂದೇ ದಿನದಲ್ಲಿ 101 ಗಂಡಸರ ಜತೆ ಲೈಂಗಿಕ ಕ್ರಿಯೆ! ಮುಂದಿನ ಗುರಿ 1000 ಎಂದ 23 ವರ್ಷದ ಯುವತಿ | Lily Phillips