ಕಲ್ಯಾಣ ಮಂಟಪದಲ್ಲೇ ಕುಸಿದು ಬಿದ್ದ ವರ; ಆಸ್ಪತ್ರೆಯ ಮಾರ್ಗಮಧ್ಯೆ ಸಾವು

Marriage Groom
Published on

ಬಿಹಾರ: ದೇಶದಲ್ಲಿ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಮದುಮಗನೊಬ್ಬ ಕಲ್ಯಾಣಮಂಟಪದಲ್ಲೇ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ.

ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಸುರೇಂದ್ರ ಕುಮಾರ್ ಕುಸಿದು ಬಿದ್ದು ಸಾವಿಗೀಡಾದ ವರ. ಬುಧವಾರ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಾರ ಬದಲಾಯಿಸುವ ವೇಳೆ ಈತ ಕುಸಿದು ಬಿದ್ದಿದ್ದು, ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವಿಗೀಡಾಗಿದ್ದ. ಇಬ್ಬರೂ ಪರಸ್ಪರ ಹಾರ ಬದಲಾಯಿಸಿಕೊಂಡು ಇತರ ಶಾಸ್ತ್ರಗಳನ್ನು ಪೂರೈಸಿದ್ದರು. ನಂತರದ ಸಮಾರಂಭದ ವೇಳೆ ಡಿಜೆ ಮ್ಯೂಸಿಕ್​ನ ಭಾರಿ ಸದ್ದಿನಿಂದ ಈತ ತೀವ್ರ ಆಘಾತಕ್ಕೆ ಒಳಗಾಗಿ, ಕುಸಿದು ಬಿದ್ದಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net