ಬಿಜೆಪಿಯಲ್ಲಿ ದುಡಿಯುತ್ತಿರುವ ನನಗೆ ಅನ್ಯಾಯ ಆಗಿದೆ, ಚುನಾವಣೆ ಮುಂದೂಡಿ ಎಂದು ಪ್ರಧಾನಿಗೆ ಪತ್ರ ಬರೆದ

modi gp election
Published on

ಕುಮಟಾ: ರಾಜ್ಯದಕಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರಿದೆ. ಲೋಕಲ್​ ಫೈಟ್​ನ ಅಖಾಡಕ್ಕಿಳಿಯುವ ಆಕಾಂಕ್ಷಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಭಾರಿ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಚುನಾವಣಾ ಆಕಾಂಕ್ಷಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಹಲವು ವರ್ಷಗಳಿಂದ ಬಿಜೆಪಿಯಲ್ಲಿ ದುಡಿಯುತ್ತಿರುವ ನನಗೆ ಅನ್ಯಾಯವಾಗಿದೆ. ಚುನಾವಣೆಯನ್ನು ಮುಂದೂಡಿ ಎಂದು ಕೋರಿದ್ದಾರೆ.

ಅಂದಹಾಗೆ ಬಿಜೆಪಿ ಪಕ್ಷದಿಂದ ಆ ಆಕಾಂಕ್ಷಿಗೆ ಅನ್ಯಾಯ ಆಗಿಲ್ಲ. ಗ್ರಾಪಂ ಚುನಾವಣಾ ಮೀಸಲಾತಿಯಿಂದ ಅವರಿಗೆ ಅನ್ಯಾಯ ಆಗಿದೆಯಂತೆ. ಹೌದು, ಹಾಗಂತ ಹೊಲನಗದ್ದೆ ಪಂಚಾಯಿತಿ ಹಣ್ಣೆಮಠ ವಾರ್ಡ್​ನ (ಮತಗಟ್ಟೆ ಸಂಖ್ಯೆ 59) ಆಕಾಂಕ್ಷಿ ಸುಬ್ರಹ್ಮಣ್ಯ ಭಟ್​ ಅವರು ಪ್ರಧಾನಿಗೆ ಪತ್ರ ಬರೆದು ದೂರಿದ್ದಾರೆ.

ಸುಬ್ರಹ್ಮಣ್ಯ ಭಟ್​
ಸುಬ್ರಹ್ಮಣ್ಯ ಭಟ್​

ಉದ್ದೇಶಪೂರ್ವಕವಾಗಿ ಮೀಸಲಾತಿ ಬದಲಾಯಿಸಲಾಗಿದೆ. ಇದರಿಂದಾಗಿ ಸ್ಪರ್ಧಿಸುವ ಅವಕಾಶದಿಂದ ವಂಚಿತನಾಗಿದ್ದೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಹಣ್ಣೆಮಠ ವಾರ್ಡ್​ಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ "ಅ' ಹಾಗೂ ಸಾಮಾನ್ಯ ಮಹಿಳೆಗೆ ಸ್ಥಾನ ಮೀಸಲು ಬಂದಿದೆ. ಇದರಿಂದ ಸಾಮಾನ್ಯ ವರ್ಗಕ್ಕೆ ಅವಕಾಶವೇ ಇಲ್ಲವಾಗಿದೆ. ಇಲ್ಲಿ ಸಿಗಬೇಕಿದ್ದ ಸಾಮಾನ್ಯ ವರ್ಗದ ಮೀಸಲಾತಿಯನ್ನು ಉದ್ದೇಶಪೂರ್ವಕ ಬದಲಿಸಲಾಗಿದೆ. ಹಲವು ವರ್ಷಗಳಿಂದ ಬಿಜೆಪಿಯಲ್ಲಿ ದುಡಿಯುತ್ತಿರುವ ನನಗೆ ಇದರಿಂದ ಅನ್ಯಾಯವಾಗಿದೆ. ಹೊಲನಗದ್ದೆ ಪಂಚಾಯಿತಿ ಚುನಾವಣೆ ಮುಂದೂಡಿ, ಸರಿಯಾದ ಮೀಸಲಾತಿ ಪ್ರಕಾರ ಚುನಾವಣೆ ನಡೆಸುವುದಕ್ಕೆ ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದು ಪತ್ರದ ಮೂಲಕ ಪ್ರಧಾನಿ ಅವರಲ್ಲಿ ಸುಬ್ರಹ್ಮಣ್ಯ ಭಟ್​ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net