ಮತದಾನ ಮುನ್ನಾ ದಿನವೇ ಗ್ರಾಪಂ ಚುನಾವಣಾ ಅಭ್ಯರ್ಥಿ ಸಾವು

GP Election
Published on

ಕುಷ್ಟಗಿ(ಕೊಪ್ಪಳ): ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಮತದಾನದ ಮುನ್ನಾ ದಿನವಾದ ಶನಿವಾರ ಕೊನೆಯುಸಿರೆಳೆದಿದ್ದಾರೆ.

ವೀರಭದ್ರಪ್ಪ ಬಡಿಗೇರ್ ಮೃತರು. ಇವರು ಮೇಣೆಧಾಳ ಗ್ರಾಮದ 2ನೇ ವಾರ್ಡ್​ನಿಂದ ಸಾಮಾನ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದನ್ನೂ ಓದಿರಿ ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?

ವೀರಭದ್ರಪ್ಪ ಬಡಿಗೇರ್ ಅವರು ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶನಿವಾರ ಪಾರ್ಶವಾಯು ಕಾಣಿಸಿಕೊಂಡಿದ್ದು, ಕುಷ್ಟಗಿ‌ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 2ನೇ ಹಂತದ ಗ್ರಾಪಂ ಚುನಾವಣೆ ನಾಳೆ(ಭಾನುವಾರ) ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net