ಕೆಲಸದ ಒತ್ತಡ ತಾಳಲಾರದೆ ಯುವ ಪ್ರತಿಭೆ, IIT-IIM ಪದವೀಧರ ಆತ್ಮಹತ್ಯೆ!

WhatsApp Image 2024-03-16 at 8.22.24 PM
Published on

ಮಹಾರಾಷ್ಟ್ರ: ಎಂಎನ್​ಸಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ 25 ವರ್ಷದ IIT-IIM ಪದವೀಧರ ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಮಾಟುಂಗಾದಲ್ಲಿ ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮೃತ ಯುವಕ ಐಐಟಿ ಮತ್ತು ಐಐಎಂ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಿಂದ ಪದವಿ ಪಡೆದ ಭರವಸೆಯ ಯುವ ಪ್ರತಿಭೆ ಸೌರಭ್ ಕುಮಾರ್ ಲಡ್ಡಾ ಎಂದು ಗುರುತಿಸಲಾಗಿದ್ದು, ನಿರಂತರ ಒತ್ತಡದಿಂದ ಬೇಸತ್ತು, ಕಡೆಗೆ ಏನು ಮಾಡಬೇಕೆಂಬುದು ತಿಳಿಯದೆ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯ ಮಾಟುಂಗಾ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ಸುತ್ತಲಿನ ಪರಿಸ್ಥಿತಿಯ ಬಗ್ಗೆ ಹೆಚ್ಚುವರಿ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತಿ ವಡಾಲಾದ ತನ್ನ ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯ ಬಾಲ್ಕನಿಯಿಂದ ಜಿಗಿದು ಸಾವಿಗೀಡಾಗಿದ್ದಾನೆ. ಲಡ್ಡಾ ಇತ್ತೀಚೆಗೆ ಅಹಮದಾಬಾದ್‌ನಿಂದ ಹಿಂದಿರುಗಿದ್ದು, ತಮ್ಮ ಉದ್ಯೋಗದಾತರ ಪ್ರಾಜೆಕ್ಟ್​ಗಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net