3 ಮಕ್ಕಳ ತಾಯಿಗೆ 7 ವರ್ಷದಿಂದ ಅಕ್ರಮ ಸಂಬಂಧ; ಪ್ರಿಯಕರ ಜತೆ ಇರಲಿ ಎಂದು ಟ್ರಾನ್ಸ್​ಫಾರ್ಮರ್​ ಏರಿದ ಮಹಿಳೆ

UP Viral Video
Published on

ಲಖನೌ: ಕೆಲವರು ಮದುವೆಯಾದ ನಂತರವೂ ವಿವಾಹೇತರ ಸಂಬಂಧವನ್ನೂ ಹೊಂದುವ ಮೂಲಕ ತಮ್ಮ ಸುಂದರವಾದ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾರೆ. ಅನೈತಿಕ ಸಂಬಂಧವೂ ಅನೇಕರ ಜೀವನ ಕೆಡೆಸಿದ್ದು, ಕೆಲವೊಮ್ಮೆ ಈ ವಿಚಾರಗಳಿಗೆ ಕೊಲೆಗಳು ಸಹ ನಡೆದಿವೆ. ಇದೀಗ ಇದಕ್ಕೆ ಪೂರಕವೆಂಬಂತೆ ಪತಿಗೆ ತನ್ನ ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿಯುತ್ತಿದ್ದಂತೆ ಆಕೆ ನನ್ನ ಪ್ರಿಯಕರ ಕೂಡಾ ನಮ್ಮ ಜೊತೆ ಇದೇ ಮನೆಯಲ್ಲಿ ಇರಬೇಕೆಂದು ಆಗ್ರಹಿಸಿ ಟ್ರಾನ್ಸ್​​ಫಾರ್ಮರ್​ ಏರಿರುವ ಘಟನೆ ನಡೆದಿದೆ.

ಉತ್ತರಪ್ರದೇಶದ ಗೋರಖ್​ಪುರದ ಪಿಪ್ರೈಚ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಪತಿ ತನ್ನ ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿಯುತ್ತಿದ್ದಂತೆ ಹೈವೋಲ್ಟೇಜ್ ಡ್ರಾಮಾ ನಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೂರು ಮಕ್ಕಳ ತಾಯಿಯಾದ 34 ವರ್ಷದ ಮಹಿಳೆಯೊಬ್ಬಳು ವ್ಯಕ್ತಿ ಒಬ್ಬನ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಸುಮಾರು ಏಳು ವರ್ಷಗಳಿಂದ ಆಕೆ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿರುವ ವಿಚಾರವನ್ನು ತಿಳಿದ ಪತಿ ಇದನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದಳು. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.

ಜಗಳವಾದರೂ ಸುಮ್ಮನಾಗದ ಮಹಿಳೆ ಪ್ರಿಯಕರ ಕೂಡಾ ಇದೇ ಮನೆಯಲ್ಲಿ ನಮ್ಮ ಜೊತೆಯಲ್ಲಿಯೇ ಇರಲಿ, ಇದರಿಂದ ನಮ್ಮ ಆರ್ಥಿಕತೆಯು ಸುಧಾರಿಸುತ್ತದೆ ಎಂದು ಪತಿಯ ಬಳಿ ಹಠ ಹಿಡಿದಿದ್ದಾಳೆ. ಇದಕ್ಕೆ ಪತಿ ಒಪ್ಪದಿದ್ದಾಗ ಕೋಪಗೊಂಡ ಆಕೆ ಮನೆ ಬಳಿ ಇರುವ ಟ್ರಾನ್ಸ್​ಫಾರ್ಮರ್​ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನೂ ಕಂಡ ಸ್ಥಳೀಯರು ಕೂಡಲೇ ಪೊಲೀಸ್​ ಹಾಗೂ ವಿದ್ಯುತ್​ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಇದನ್ನು ಕಂಡು ಗರಂ ಆಗಿರುವ ನೆಟ್ಟಿಗರು ಇಂತಹ ಮಹಿಳೆಯರಿಂದ ಸಮಾಜಕ್ಕೆ ಕೆಟ್ಟ ಹೆಸರು. ಅವಳು ಸತ್ತರೆ ಸಾಯಲು ಬಿಡಿ ಮೂರು ಮಕ್ಕಳಿದ್ದರು ಅನೈತಿಕ ಸಂಬಂಧ ಹೊಂದಿರುವ ಈಕೆಗೆ ಕಠಿಣ ಶಿಕ್ಷೆಯಾಗಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net