More

    ಡೇಟಿಂಗ್​ ವಿಚಾರವಾಗಿ​ ನಿರೂಪಕನ ಕಪಾಳಕ್ಕೆ ಬಾರಿಸಲು ಮುಂದಾದ ದೀಪಿಕಾ ಪಡುಕೋಣೆ

    ಮುಂಬೈ: ಬಾಲಿವುಡ್​ನ ಅತ್ಯಂತ ವಿವಾದಾತ್ಮಕ ಕಾರ್ಯಕ್ರಮಗಳು ಯಾವುದು ಎಂದರೆ ಮೊದಲಿಗೆ ಕೇಳಿ ಬರುವ ಹೆಸರು ಕಾಫಿ ವಿತ್​ ಕರಣ್​. ಕರಣ್​ ಜೋಹರ್​ ನಡೆಸಿಕೊಡುವ ಈ ಕಾರ್ಯಕ್ರಮ ಸದಾ ವಿವಾದದ ಕೇಂದ್ರ ಬಿಂದುವಾಗಿದ್ದು, ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿರುತ್ತದೆ. ಇದಕ್ಕೆ ಪೂರಕವೆಂಬಂತೆ ಕಾಫಿ ವಿತ್​​ ಕರಣ್​ ಕಾರ್ಯಕ್ರಮದ ಹಳೇ ವಿಡಿಯೋ ಒಂದು ವೈರಲ್​ ಆಗಿದ್ದು, ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕ ಚೋಪ್ರಾ ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.

    ಮೊದಲಿಗೆ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಶ್ನೆ ಕೇಳುವ ಕರಣ್​, ನಿಮ್ಮ ಕೈಮೇಲೆ ಈ ಹಿಂದೆ ಹಾಕಿಸಲಾಗಿದ್ದ ಟ್ಯಾಟೂ ಈಗಲೂ ಇದೆಯಾ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಪ್ರಿಯಾಂಕಾ ತಮ್ಮ ಕೈ ಮೇಲಿರುವ ಟ್ಯಾಟೂವನ್ನು ಕ್ಯಾಮರಾದತ್ತ ತೋರಿಸುತ್ತಾರೆ. ಇದಾದ ಬಳಿಕ ದೀಪಿಕಾರನ್ನು ಪ್ರಶ್ನೆ ಕೇಳುವ ಕರಣ್​ಗೆ ಸಿಡಿಮಿಡಿಕೊಂಡ ದೀಪಿಕಾ ಕೋಪದಲ್ಲೇ ಉತ್ತರ ಕೊಡುತ್ತಾರೆ.

    ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಸವಲತ್ತು ಪಡೆದರೆ ಸ್ವಾಭಿಮಾನ ಮಾರಿಕೊಂಡಂತೆ: ನಟ ಜಗ್ಗೇಶ್​

    ಇದಾದ ಬಳಿಕ ಮಾತನಾಡುವ ಕರಣ್​ ಈಗ ರಾಜೀವ್ ಖಂಡೇಲ್ವಾಲ್ ನಿನ್ನೊಂದಿಗೆ ಡೇಟ್ ಮಾಡಬೇಕಾಗಬಹುದು, ಎಂದು ಹೇಳುತ್ತಾರೆ. ಇದಕ್ಕೆ ಕೋಪಗೊಂಡ ದೀಪಿಕಾ ಈಗ ನಾನು ಅವನಿಗೆ ಕಪಾಳಕ್ಕೆ ಹೊಡೆಬಹುದೇ ಎಂದು ಕೇಳುತ್ತಾಳೆ. ಜೊತೆಯಲ್ಲಿ ಕುಳಿತಿದ್ದ ಪ್ರಿಯಾಂಕಾ ಚೋಪ್ರಾ ನೀವಲ್ಲದೇ ಈ ಕೆಲಸವನ್ನು ಬೇರೆ ಯಾರಾದರೂ ಮಾಡಲೇಬೇಕು ಎಂದು ಹೇಳುತ್ತಾರೆ.

    ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕರಣ್​ ಜೋಹರ್​ ಪ್ರಶ್ನೆ ಕೇಳಿದ ರೀತಿಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ಸಲೆಬ್ರಿಟಿಗಳು ಕಾಫಿ ವಿತ್​ ಕರಣ್​ ಕಾರ್ಯಕ್ರಮಕ್ಕೆ ಹೋಗುವುದನ್ನು ನಿಲ್ಲಿಸಿದರೆ ಯಾವುದೇ ವಿವಾದವಾಗುವುದಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts