ಕಮಲ್​ ಹಾಸನ್​ ಅಭಿಮಾನಿಗಳಿಗೆ ಶುಭ ಸುದ್ದಿ; ಬಿಗ್​ ಬಾಸ್​​ಗೆ ಯಾವಾಗ ವಾಪಸ್​?

Kamal
Published on

ಚೆನ್ನೈ: ಹಿರಿಯ ನಟ ಕಮಲ್​ ಹಾಸನ್​ ಆರೋಗ್ಯದ ಬಗ್ಗೆ ಚಿಂತೆಗೀಡಾಗಿದ್ದ ಅಭಿಮಾನಿಗಳಿಗೆ ಇದೀಗ ಶುಭ ಸುದ್ದಿ ಬಂದಿದೆ. ಕಮಲ್​ ಕೋವಿಡ್​ ಸೋಂಕಿನಿಂದ ಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಅವರು ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಹಾಸ್ಪಿಟಲ್​ ವೈದ್ಯರು ತಿಳಿಸಿದ್ದಾರೆ. ಡಿಸೆಂಬರ್​ 4 ರಿಂದ ಮತ್ತೆ ತಮ್ಮ ಕೆಲಸವನ್ನು ಆರಂಭಿಸಬಹುದು ಎಂದೂ ಹೇಳಿದ್ದಾರೆ.

ಅಮೆರಿಕಾಕ್ಕೆ ಹೋಗಿಬಂದ ನಂತರ ಕರೊನಾದ ಲಕ್ಷಣಗಳು ತೋರಿಬಂದಿದ್ದ ಅವರಿಗೆ ನ.22 ರಂದು ಸೋಂಕು ದೃಢಪಟ್ಟಿತ್ತು. ಅಲ್ಪಪ್ರಮಾಣದ ಲಕ್ಷಣಗಳಿದ್ದ ಕಮಲ್​ಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಡಿ.3 ರವರೆಗೆ ಪ್ರತ್ಯೇಕವಾಗಿರಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುಹಾಸ್ ಪ್ರಭಾಕರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲಸದ ವಿಷಯಕ್ಕೆ ಬಂದರೆ, ಸದ್ಯಕ್ಕೆ ಲೋಕೇಶ್​ ಕನಕರಾಜ್​ ನಿರ್ದೇಶನದ ತಮ್ಮ ಹೊಸ ಚಿತ್ರ 'ವಿಕ್ರಮ್​'ನಲ್ಲಿ ಕಮಲ್​ ಪಾತ್ರ ನಿರ್ವಹಿಸುತ್ತಿದ್ದಾರೆ. ಜೊತೆಗೆ, ವಿಜಯ್​ ಟೆಲಿವಿಷನ್​ನಲ್ಲಿ ಪ್ರಸಾರವಾಗುತ್ತಿರುವ ಬಿಗ್​ ಬಾಸ್ ತಮಿಳ್​ ಸೀಸನ್ 5 ರ ಹೋಸ್ಟ್​ ಆಗಿದ್ದಾರೆ. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ನಟಿ ರಮ್ಯ ಕೃಷ್ಣನ್​ ಬಿಗ್​ ಬಾಸ್​ ನಡೆಸಿಕೊಡುತ್ತಿದ್ದು, ಕಮಲ್​ರ ಚೇತರಿಕೆಯ ನಂತರ ಶೋಗೆ ವಾಪಸಾಗುವ ನಿರೀಕ್ಷೆ ಇದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net