

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಸಹೋದರಿಗೆ ಬ್ಯಾಂಕ್ ಮ್ಯಾನೇಜರ್ವೊಬ್ಬರಿಂದ ವಂಚನೆಯಾಗಿದ್ದು, ಖಾಲಿ ಪೇಪರ್ನಲ್ಲಿ ಸಹಿ ಹಾಕುವಂತೆ ಆರೋಪಿಯು ಸುಮಲತಾ ಸಹೋದರಿಗೆ ಧಮ್ಕಿ ಹಾಕಿದ್ದಾರೆ ಎಂದು ಕೇಸ್ ದಾಖಲಾಗಿದೆ.
ಸುಮಲತಾಗೆ ಇಬ್ಬರು ಅಕ್ಕಂದಿರು, ಒಬ್ಬ ಅಣ್ಣ, ಓರ್ವ ತಂಗಿ ಇದ್ದಾರೆ. ಈ ಪೈಕಿ ಹಿರಿಯ ಅಕ್ಕ ರೇಣುಕಾ ವಂಚನೆಗೊಳಗಾಗಿದ್ದಾರೆ.
ಹೆಚ್ಡಿಎಫ್ಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ವಿಶಾಕ್ಷಿಭಟ್ ಎಂಬಾಕೆ ಬ್ಯಾಂಕ್ನಲ್ಲಿ ರೇಣುಕಾರಿಂದ 60 ಲಕ್ಷ ಹಣ ಹೂಡಿಕೆ ಮಾಡಿಸಿ ವಂಚಿಸಿದ್ದಾರೆ ಎಂದು 2015ರಲ್ಲಿ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇರುವಾಗಲೇ ರೇಣುಕಾರ ಮನೆಗೆ ನುಗ್ಗಿದ ಆರೋಪಿತೆ ವಿಶಾಲಾಕ್ಷಿ ಭಟ್, ಖಾಲಿ ಪೇಪರ್ಗೆ ಸಹಿ ಹಾಕುವಂತೆ ಧಮ್ಕಿ ಹಾಕಿದ್ದಾರೆ. ಇದರಿಂದ ಬೇಸತ್ತ ರೇಣುಕಾ, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ವಿಶಾಲಾಕ್ಷಿ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ವಿಶಾಲಾಕ್ಷಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.