

ಬೆಂಗಳೂರು: ಮೆಸೇಜಿಂಗ್ ಆ್ಯಪ್ಗಳ ಪೈಕಿ ಅತ್ಯಾಧುನಿಕ ಹಾಗೂ ಅತ್ಯುತ್ತಮ ಎನಿಸಿಕೊಂಡಿರುವ ಟೆಲಿಗ್ರಾಂ ತನ್ನ ಬಳಕೆದಾರರಿಗೆ ಹೊಸದೊಂದು ಕೊಡುಗೆ ಆರಂಭಿಸಿದ್ದು, ಇದರಿಂದಾಗಿ ಹತ್ತು ಸಾವಿರ ಮಂದಿಗೆ ಉಚಿತವಾಗಿ ಟೆಲಿಗ್ರಾಂ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಸಿಗಲಿದೆ.
ಈ ಕುರಿತು ಟೆಲಿಗ್ರಾಂ ಸಂಸ್ಥಾಪಕ-ಸಿಇಒ ಡು ರೋವ್ ತಮ್ಮ ಚಾನೆಲ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಟೆಲಿಗ್ರಾಂ ಚಾನೆಲ್ಗಳಿಗೆಂದೇ ಅವರು 'ಗಿವ್ಎವೇ' ಎಂಬ ಹೊಸ ಕೊಡುಗೆಯನ್ನು ಘೋಷಣೆ ಮಾಡಿದ್ದಾರೆ.
ಟೆಲಿಗ್ರಾಮ್ನ ಎಲ್ಲ ಚಾನೆಲ್ಗೂ ಈ ಗಿವ್ಎವೇ ಸೌಲಭ್ಯ ಘೋಷಣೆ ಮಾಡಿದ್ದು, ಚಾನೆಲ್ನವರು ತಮ್ಮ ಸಬ್ಸ್ಕ್ರೈಬರ್ಸ್ಗೆ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಉಚಿತವಾಗಿ ನೀಡಬಹುದು. ಅದಲ್ಲದೆಯೂ ಬೇರೆ ಇತರ ಕೊಡುಗೆಗಳನ್ನೂ ನೀಡುವಂಥ ವ್ಯವಸ್ಥೆಯೂ ಇದರಲ್ಲಿದೆ.
ಟೆಲಿಗ್ರಾಂ ಚಾನೆಲ್ ಹೊಂದಿರುವವರು ತಮ್ಮ ಅದೃಷ್ಟವಂತ ಸಬ್ಸ್ಕ್ರೈಬರ್ಸ್ಗೆ ಗಿವ್ಎವೇ ಆಗಿ ಟೆಲಿಗ್ರಾಂ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ನೀಡಬಹುದು. ಈ ಮೂಲಕ ತಮ್ಮ ಚಾನೆಲ್ಗೆ ಹೆಚ್ಚು ಮಂದಿ ಸಬ್ಸ್ಕ್ರೈಬರ್ಗಳನ್ನು ಸೆಳೆಯಬಹುದು. ಆದರೆ ಇದಕ್ಕೆ ಚಾನೆಲ್ನವರೇ ಮುಂಚಿತವಾಗಿ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಮೊತ್ತ ಪಾವತಿಸಿರಬೇಕಾಗುತ್ತದೆ.
ಡು ರೋವ್ ಕೂಡ ತಮ್ಮ ಚಾನೆಲ್ನಲ್ಲಿ ಈ ಗಿವ್ಎವೇ ಘೋಷಣೆ ಮಾಡಿದ್ದು, ಅವರು ತಮ್ಮ ಚಾನೆಲ್ನ ಅದೃಷ್ಟವಂತ 10 ಸಾವಿರ ಸಬ್ಸ್ಕ್ರೈಬರ್ಸ್ಗೆ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಅದಕ್ಕಾಗಿ ತಾವು ಈಗಾಗಲೇ 2 ಲಕ್ಷ ಡಾಲರ್ ಟನ್ಕಾಯಿನ್ ಮೂಲಕ ಟೆಲಿಗ್ರಾಮ್ಗೆ ಪಾವತಿ ಮಾಡಿದ್ದಾಗಿಯೂ ಹೇಳಿಕೊಂಡಿದ್ದಾರೆ.
ಡು ರೋವ್ ಅವರ ಚಾನೆಲ್ ( https://t.me/durov/236 ) ಗೆ ಸಬ್ಸ್ಕ್ರೈಬ್ ಮಾಡಿಕೊಂಡಿರುವ ಬಳಕೆದಾರರು ಈ ಉಚಿತ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಪಡೆಯವ ಅವಕಾಶ ಹೊಂದಿರುತ್ತಾರೆ. ಈಗಾಗಲೇ ಸಬ್ಸ್ಕ್ರೈಬ್ ಆಗಿರದವರು ಸಬ್ಸ್ಕ್ರೈಬ್ ಆಗುವ ಮೂಲಕ ಈ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬಹುದು.
ನ. 13ರಂದು ರಾತ್ರಿ 9.30ಕ್ಕೆ ಡು ರೋವ್ ಈ ಹತ್ತು ಸಾವಿರ ಅದೃಷ್ಟವಂತರಿಗೆ ಫ್ರೀ ಟೆಲಿಗ್ರಾಂ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ನೀಡಲಿದ್ದಾರೆ. ಅಂಥವರು 6 ತಿಂಗಳ ಕಾಲ ಈ ಉಚಿತ ಸಬ್ಸ್ಕ್ರಿಪ್ಷನ್ ಪಡೆಯಲಿದ್ದಾರೆ.