ಪೆಟ್ರೋಲ್​ ಬಂಕ್ ಡೀಲರ್​ಶಿಪ್​ ಕೊಡಿಸುವುದಾಗಿ ಹೇಳಿಕೊಂಡು ಇಂಥವರು ಬಂದರೆ ಹುಷಾರಾಗಿರಿ!; ಐಒಸಿಎಲ್​ನಿಂದಲೇ ಕಿವಿಮಾತು

Fake
Published on

ಬೆಂಗಳೂರು: ಯಾವುದಕ್ಕೆ ಬೆಲೆ ಹೆಚ್ಚಾಗಿರುತ್ತದೋ ಇಲ್ಲವೇ ಬೇಡಿಕೆ ತುಂಬಾ ಇರುತ್ತದೋ ಅಂಥದ್ದರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಸಾಮಾನ್ಯವಾಗಿ ಯಾವಾಗಲೂ ಹೆಚ್ಚಾಗಿರುತ್ತದೆ. ಇದೀಗ ಪೆಟ್ರೋಲ್​ಗೂ ಇದು ಅನ್ವಯಿಸುವಂತಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಪೆಟ್ರೋಲ್​ ದರ ನಿರಂತರವಾಗಿ ಹೆಚ್ಚಾಗುತ್ತಲೇ ಬಂದಿದೆ. ಈ ಮಧ್ಯೆ ಸ್ವಲ್ಪ ಇಳಿಕೆ ಆಗಿದ್ದರೂ ಪೆಟ್ರೋಲ್​ ದರ ಲೀಟರ್​​ಗೆ ಶತಕದಲ್ಲೇ ಇದೆ. ಇನ್ನು ಇಂಥ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲವರು ತೈಲ ಕಂಪನಿಯ ಡೀಲರ್​​ಶಿಪ್ ಕೊಡುವುದಾಗಿ ಮೋಸ ಮಾಡಲಾರಂಭಿಸಿದ್ದಾರೆ. ಇಂಥ ಹಲವು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ತೈಲ ನಿಗಮ ನಿಯಮಿತ (ಐಒಸಿಎಲ್​) ಸಾರ್ವಜನಿಕರ ಗಮನಕ್ಕೆ ತಂದು ಎಚ್ಚರಿಸಿದೆ.

ಡೀಲರ್​​ಶಿಪ್​ ಕೊಡಿಸುವುದಾಗಿ ಹಲವರು ನಕಲಿ ಸರ್ಟಿಫಿಕೇಟ್ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಇಂಥದ್ದೊಂದು ಮೋಸದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಿ. ಯಾರಾದರೂ ಐಒಸಿಎಲ್​ ಡೀಲರ್​ಷಿಪ್​ ಕೊಡಿಸುವುದಾಗಿ ಬಂದರೆ, ಕರೆ ಮಾಡಿದರೆ ಅಥವಾ ಇ-ಮೇಲ್ ಕಳುಹಿಸಿದರೆ ಎಚ್ಚರ ವಹಿಸಿ, ತಕ್ಷಣ ಹತ್ತಿರದ ಅಧಿಕೃತ ಕಚೇರಿಯನ್ನು ಸಂಪರ್ಕಿಸಿ ಎಂದು ಕಿವಿಮಾತು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net