More

    ಯಾವ ರಕ್ತದ ಗುಂಪಿನ ಮೇಲೆ ಕರೊನಾ ಹೆಚ್ಚು ಪರಿಣಾಮ ಬೀರಲಿದೆ? ಹೊಸ ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ

    ವುಹಾನ್​: ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಇತರರಿಗಿಂತ “ಎ” ಗುಂಪಿನ ರಕ್ತದ ಮಾದರಿ ಹೊಂದಿರುವವರಿಗೆ ಕೋವಿಡ್​-19 ಹೆಚ್ಚು ಗಂಭೀರತೆ ಸೃಷ್ಟಿಸಲಿದೆ ಎಂದು ತಿಳಿದುಬಂದಿದೆ. ಆದರೆ, ಹೊಸ ಸಂಶೋಧನೆಯನ್ನು ಈವರೆಗೂ ಪರಿಶೀಲಿಸಿಲ್ಲ ಎಂಬುದೇ ಸಮಾಧಾನಕರ ಸಂಗತಿಯಾಗಿದೆ.

    ಮಾನವರಲ್ಲಿ ವಿವಿಧ ರೀತಿಯ ರಕ್ತದ ಗುಂಪಿರುವುದು ಎಲ್ಲರಿಗೂ ತಿಳಿದಿದೆ. ಅದನ್ನು ಎ, ಬಿ, ಎಬಿ ಮತ್ತು ಒ ಎಂದು ಪ್ರಾಥಮಿಕವಾಗಿ ವಿಭಾಗಿಸಲಾಗಿದೆ. ಪ್ರತಿ ಗುಂಪಿಗೆ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಒಂದು ವಿಶಿಷ್ಟವಾದ ಸಕ್ಕರೆ ಅಣು ಇರುತ್ತದೆ.

    ಸಾಮಾನ್ಯವಾಗಿ ಒ ರಕ್ತದ ಗುಂಪಿನವರು ಉಳಿದವರಿಗಿಂತ ಹೆಚ್ಚಿದ್ದಾರೆ. ಉದಾಹರಣೆಗೆ ಯುನೈಟೆಡ್​ ಕಿಂಗ್​​ಡಮ್​ನಲ್ಲಿ ಶೇ. 48 ರಷ್ಟು ಮಂದಿ ಒ ಗುಂಪಿನವರಿದ್ದರೆ, 38%, 10% ಮತ್ತು 3% ಕ್ರಮವಾಗಿ ಎ, ಬಿ ಮತ್ತು ಎಬಿ ಗುಂಪಿನವರಿದ್ದಾರೆ. ರಕ್ತದಾನ ಮಾಡುವಾಗಲಂತೂ ರಕ್ತದ ಗುಂಪು ತುಂಬಾ ಪ್ರಮುಖ ಪಾತ್ರವಹಿಸುತ್ತದೆ.

    ಕರೊನಾ ತವರು ಚೀನಾದ ವುಹಾನ್ ಎಂಬುದು ಎಲ್ಲರಿಗೂ ತಿಳಿದಿದೆ. ವುಹಾನ್​ ವಿಶ್ವವಿದ್ಯಾಲಯದಲ್ಲಿರುವ ಝೋಂಗನಾನ್ ಹಾಸ್ಪಿಟಲ್​ ಒಳಗೊಂಡಂತೆ ಸಂಶೋಧಕರು ಇತ್ತೀಚೆಗೆ ಅಧ್ಯಯವನ್ನು ನಡೆಸಿದ್ದಾರೆ. ಚೀನಾದಲ್ಲಿರುವ ಮೂವರು ಆಸ್ಪತ್ರೆಗಳ ರೋಗಿಗಳ ರಕ್ತದ ಗುಂಪನ್ನು ವಿಶ್ಲೇಷಿಸಲಾಗಿದೆ. ವುಹಾನ್​ನ ಎರಡು ಮತ್ತು ಶೆಂಜಾಹೆನ್​ನ ಒಂದು ಆಸ್ಪತ್ರೆಯನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ​

    ವುಹಾನ್​ನ ಜಿನಿಂಟನ್​ ಹಾಸ್ಪಿಟಲ್​ ಕೋವಿಡ್​ -19 ತಗುಲಿರದ 3,694 ಮಂದಿಯ ರಕ್ತದ ಮಾದರಿಯನ್ನು ಮೊದಲಿಗೆ ವಿಶ್ಲೇಷಿಸಿದೆ. ಇದರಲ್ಲಿ 32 ರಷ್ಟು ಎ ಗ್ರೂಪ್​ ಹಾಗೂ 34 ರಷ್ಟು ಒ ಗ್ರೂಪ್​ನವರಾಗಿದ್ದರು. ಸೋಂಕಿತ 1,775 ಮಂದಿಯ ರಕ್ತದ ಗುಂಪಿನಲ್ಲಿ 38 ರಷ್ಟು ಎ ಗ್ರೂಪ್​ ಮತ್ತು 26 ರಷ್ಟು ಒ ಗ್ರೂಪ್​ ರೋಗಿಗಳು ಕಂಡುಬಂದಿದ್ದಾರೆ. ವುಹಾನ್​ನ ಮತ್ತೊಂದು ಆಸ್ಪತ್ರೆ ರೆನ್​ಮಿನ್​ ಡಾಟಾ ಪ್ರಕಾರ 113 ಕರೊನಾ ಸೋಂಕಿತರಲ್ಲಿ 40 ರಷ್ಟು ಎ ಗ್ರೂಪ್​ ಮತ್ತು 25 ರಷ್ಟು ಒ ಗ್ರೂಪ್​ ರೋಗಿಗಳಿದ್ದರು.

    ಶೆಂಜಾಹೆನ್​ನ ಪೀಪಲ್​ ಆಸ್ಪತ್ರೆಯ ಡಾಟಾ ಪ್ರಕಾರ ಸೋಂಕು ತಗುಲಿರದ 23,386 ಮಂದಿಯಲ್ಲಿ 29 ರಷ್ಟು ಎ ಮತ್ತು 39 ರಷ್ಟು ಒ ಗುಂಪಿನವರಿದ್ದರು. 285 ಕೋವಿಡ್​ 19 ರೋಗಿಗಳಲ್ಲಿ 28.8 ರಷ್ಟು ಎ ಮತ್ತು 28.4 ರಷ್ಟು ಒ ಗುಂಪಿನವರು ಕಂಡುಬಂದಿದ್ದಾರೆ.

    ಅಧ್ಯಯನ ಧೃಡಪಟ್ಟಿಲ್ಲ
    ಗಮನಿಸಬೇಕಾದ ಅಂಶವೆಂದರೆ ರಕ್ತದ ಮಾದರಿಗೂ ಕೋವಿಡ್​ 19 ಸೋಂಕಿಗೂ ಸಂಬಂಧವಿದೆ ಎಂಬುದನ್ನು ನಿರೂಪಿಸಲು ಯಾವುದೇ ಬಲವಾದ ಸಾಕ್ಷಿ ಇಲ್ಲ. ವಿಶೇಷವಾಗಿ ಕರೊನಾ ಸೋಂಕು ಪ್ರತಿರೋಧಕ ವ್ಯವಸ್ಥೆ ಮತ್ತು ಉಸಿರಾಟದ ತೊಂದರೆಗೆ ಸಂಬಂಧಸಿದ ಕಾಯಿಲೆ ಆಗಿರುವುದರಿಂದ ಅದರ ಫಲಿತಾಂಶವು ವಿಭಿನ್ನವಾಗಿರುತ್ತದೆ ಎಂಬುದು ಪರಿಣಿತರ ವಾದವಾಗಿದೆ. ಎರಡರ ನಡುವೆ ಸಂಬಂಧವಿದೆ ಎಂದು ಸಾಬೀತುಪಡಿಸಲು ಇನ್ನು ಹೆಚ್ಚಿನ ಅಧ್ಯಯನ ಅವಶ್ಯಕತೆ ಇದೆ. ಹೀಗಾಗಿ ಈಗಲೇ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಧೂಮಪಾನ ಮಾಡುವವರಿಗೆ ಕರೊನಾ ವೈರಸ್​ ತುಂಬಾ ಪರಿಣಾಮ ಬೀರಲಿದೆಯೇ? ಸಂಶೋಧನೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts