

ನವದೆಹಲಿ: ಧೂಮಪಾನ ಮಾಡುವವರಿಗೆ ಕರೊನಾ ವೈರಸ್ ತುಂಬಾ ಪರಿಣಾಮ ಬೀರಲಿದೆಯೇ? ಹೌದು ಎನ್ನುತ್ತಿದೆ ಹೊಸ ಸಂಶೋಧನೆಯೊಂದು. ಕರೊನಾದಿಂದ ಗಂಭೀರಗೊಂಡ ರೋಗಿಗಳಲ್ಲಿ ಧೂಮಪಾನ ಮಾಡುವವರೇ ಹೆಚ್ಚು ಎಂದು ತಿಳಿದುಬಂದಿದೆ.
ಕರೊನಾ ಸೋಂಕು ತಗುಲಿ ಸಾವಿಗೀಡಾದ ಹಾಗೂ ಐಸಿಯುನಲ್ಲಿದ್ದ ನಾಲ್ಕನೇ ಒಂದು ಭಾಗದ ರೋಗಿಗಳು ಧೂಮಪಾನ ಮಾಡುತ್ತಿದ್ದರು ಎಂದು ಚೀನಾದ ಅಕಾಡೆಮಿಕ್ಸ್ ಸಂಶೋಧನಾ ವರದಿಯಲ್ಲಿ ಉಲ್ಲೇಖವಾಗಿದೆ.
ಕೆಮ್ಮು ಮತ್ತು ಜ್ವರದಂತಹ ಸಣ್ಣ ರೋಗ ಲಕ್ಷಣಗಳನ್ನು ಹೊಂದಿದ್ದವರಲ್ಲಿ ಶೇ. 11 ರಷ್ಟು ರೋಗಿಗಳು ಸ್ಮೋಕ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ, ಇನ್ನೊಂದು ಸಂಶೋಧನೆಯ ಪ್ರಕಾರ ಸ್ಮೋಕ್ ಮಾಡುವವರಿಗೆ ಕರೊನಾ ವೈರಸ್ ಮೊದಲ ಹಂತದಲ್ಲಿ ದಾಳಿ ಮಾಡುವುದು ಕಡಿಮೆ. ಆದರೆ, ಟ್ವಿಸ್ಟ್ ಏನೆಂದರೆ, ಧೂಮಪಾನ ಮಾಡುವರು ಕರೊನಾದಿಂದ ತೀವ್ರ ತೊಂದರೆಯನ್ನು ಅನುಭವಿಸುತ್ತಾರೆ ಎಂದು ಹೇಳಿದೆ.
ಧೂಮಪಾನ ಒಂದು ಮಾರಣಾಂತಿಕ ಹವ್ಯಾಸವು ಹೌದು. ಇದರಿಂದ ಕ್ಯಾನ್ಸರ್, ಶ್ವಾಸಕೋಸ ಹಾನಿ ಮತ್ತು ಕಾಯಿಲೆಯ ಸಮಯದಲ್ಲಿ ಉಸಿರಾಟದ ತೀವ್ರ ತೊಂದರೆಯನ್ನು ತಂದೊಡ್ಡುತ್ತದೆ.
ಚೀನಾದ ಕರೊನಾ ತವರು ವುಹಾನ್ನ ಝೋಂಗನಾನ್ ಹಾಸ್ಪಿಟಲ್ ಪ್ರಕಾರ ದಾಖಲಾದ 140 ರೋಗಿಗಳ ಪೈಕಿ 1.4 ರಷ್ಟು ರೋಗಿಗಳು ಧೂಮಪಾನ ಮಾಡುವವರಾಗಿದ್ದರು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)