ಬಲೂನ್​ ತರಲೆಂದು ಅಂಗಡಿಗೆ ಹೋಗಿದ್ದ 4 ವರ್ಷದ ಮಗು ವಾರದ ಬಳಿಕ ಶವವಾಗಿ ಪತ್ತೆ!

boy death
Published on

ರಾಮನಗರ: ಬಲೂನ್ ತರುತ್ತೇನೆ ಎಂದು ಮನೆಯಿಂದ ಹೊರಗೆ ಹೋಗಿ ನಾಪತ್ತೆಯಾಗಿದ್ದ 4 ವರ್ಷದ ಬಾಲಕ‌ ಶವವಾಗಿ ಪತ್ತೆಯಾಗಿದ್ದಾನೆ.

ಮೆಹಬೂಬ್ ನಗರದ ಸುಮೇರ್ ಖಾನ್ ಹಾಗೂ ಅಲ್ಮಜ್ ಬೇಗಂ ಅವರ 4 ವರ್ಷದ ಸಾಕು ಮಗ ದಯಾನ್ ಖಾನ್ ಸೆ.14ರ ರಾತ್ರಿ 9 ಗಂಟೆಯಿಂದ ನಾಪತ್ತೆಯಾಗಿದ್ದ.‌ ಈ ಸಂಬಂಧ ರಾಮನಗರ ಪುರ ಪೊಲೀಸ್ ‌ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು. ಮಗುವಿನ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿಯೂ ಪಾಲಕರು ಘೋಷಣೆ ಮಾಡಿದ್ದರು. ಇದನ್ನೂ ಓದಿರಿ ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!

ಸುಮೇರ್ ಖಾನ್ ಹಾಗೂ ಅಲ್ಮಜ್ ಬೇಗಂ ದಂಪತಿಗೆ ಮಕ್ಕಳಾಗಿರಲಿಲ್ಲ. ಹಾಗಾಗಿ ಅಲ್ಮಜ್ ಬೇಗಂರ ಸಹೋದರ ಸಂಶೀರ್ ಖಾನ್​ ಅವರ ಮಗುವನ್ನ ದತ್ತು ಪಡೆದು ಇವರೇ ಲಾಲನೆ-ಪಾಲನೆ ಮಾಡುತ್ತಿದ್ದರು.

ಮಗು ನಾಪತ್ತೆಯಾಗಿದ್ದರಿಂದ ಗಾಬರಿಗೊಂಡ ಪಾಲಕರು ಎಲ್ಲ ಕಡೆ ಹುಡುಕಾಡಿದರು. ಮಗುವಿನ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿಯೂ ಘೋಷಣೆ ಮಾಡಿದ್ದರು. ನಗರದ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಅರ್ಕಾವತಿ ಸೇತುವೆ ಕೆಳಗೆ ಮಗುವಿನ ಶವ ಮಂಗಳವಾರ(ಸೆ.22) ಪತ್ತೆಯಾಗಿದೆ. ಬಾಲಕ ಶವವಾಗಿ ಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net