ಶಿಕ್ಷಕರ ಸಮಸ್ಯೆ ನಿವಾರಿಸಲು ಒತ್ತಾಯ

ಶಿಕ್ಷಕರ ಸಮಸ್ಯೆ ನಿವಾರಿಸಲು ಒತ್ತಾಯ
Published on

ಕೆ.ಆರ್.ನಗರ: ಸರ್ಕಾರ ಕಳೆದ 7 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿರುವ ಅವೈಜ್ಞಾನಿಕ ಅಂಶಗಳಿಂದ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ಮೈಸೂರು-ಹಾಸನ ರಸ್ತೆಯ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿಯಿಂದ ಸೋಮವಾರ ಮೆರವಣಿಗೆಯಲ್ಲಿ ತೆರಳಿದ ಶಿಕ್ಷಕರು, ಸರ್ಕಾರ ಶಿಕ್ಷಕರ ಪರವಾಗಿ ಕೆಲಸ ಮಾಡಬೇಕು ಜತೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂಬ ಘೋಷಣೆ ಕೂಗುತ್ತಾ ತಾಲೂಕು ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿ ಶೀರಸ್ತೇದಾರ್ ಯೋಗಾಚಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಶಿಕ್ಷಕರ ಹಿತದೃಷ್ಟಿಯಿಂದ ಆ.12ರವರೆಗೆ ವಿವಿಧ ಹಂತದಲ್ಲಿ ಹೋರಾಟ ಕೈಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಪಾಲ್ಗೊಳ್ಳುವಂತೆ ಮನವಿಮಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎನ್.ಸ್ವಾಮಿ, ಉಪಾಧ್ಯಕ್ಷ ಕೃಷ್ಣನಾಯಕ, ಮೀನಾಕ್ಷಿಬಾಯಿ, ಪದಾಧಿಕಾರಿಗಳಾದ ಎಸ್.ಆರ್.ಕಮಲಮ್ಮ, ಬೋಜೇಗೌಡ, ರಮಾಮಣಿ, ಶಿಕ್ಷಕ ಸೈಯದ್‌ರಿಜ್ವಾನ್, ನಾಗರಾಜ್, ಬಿ.ಸಿ.ಮಹದೇವ್, ತುಳಸಿರಾಮನಾಯಕ, ಭಾರತಿ, ಬಿ.ವಿ.ಪ್ರಸನ್ನಕುಮಾರ್, ಪುರುಷೋತ್ತಮ್, ದೇವೇಂದ್ರ, ನಾಗೇಶ್, ಬಿ.ಎನ್.ಭಾಸ್ಕರ್, ಮುಕುಂದ, ಕಲಾವಿದಮಹದೇವ್, ಈಶ್ವರ್, ಶಂಕರೇಗೌಡ, ಮೋಹನ್, ರಾಮಕೃಷ್ಣ, ಸುರೇಶ್, ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net