ಹೈನೋದ್ಯಮದ ಮೇಲೆ ಪ್ರವಾಹ ಕರಿನೆರಳು! ಹಾಲು ಉತ್ಪಾದನೆ ಕುಂಠಿತಕ್ಕೆ ಕಾರಣ ಬಿಚ್ಚಿಟ್ಟ ರೈತರು

ವಿಜಯವಾಣಿ - 2024-08-05T203546.910
Published on

ಬಾಗಲಕೋಟೆ: ಹೈನೋದ್ಯಮದ ಮೇಲೆ ಪ್ರವಾಹದ ಕರಿನೆರಳು ಬಿದ್ದಿದೆ. ಹಸಿ ಮೇವಿನ ಕೊರತೆ ಹಾಗೂ ಸ್ಥಳ ಬದಲಾವಣೆಯ ಮೇಲೂ ಪರಿಣಾಮ ಬೀರಿದೆ. ಬಾಗಲಕೋಟೆಯ ಕೃಷ್ಣಾ ಮತ್ತು ಘಟಪ್ರಭಾ ನದಿಯಿಂದ ಪ್ರವಾಹ ಭೀತಿ ಎದುರಾಗುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗಿದೆ. ಪ್ರಕೃತಿ ವಿಕೋಪದ ಮುನ್ಸೂಚನೆ ಪಡೆಯುವ ಪ್ರಾಣಿಗಳು, ಮನುಷ್ಯನಿಗಿಂತ ಮೊದಲು ಪ್ರತಿಕ್ರಿಯಿಸಲು ಪ್ರಾರಂಭಿಸುತ್ತವೆ ಎಂಬ ಮಾತು ಸತ್ಯ ಎಂದು ಇಲ್ಲಿನ ರೈತರು ಒತ್ತಿ ಹೇಳಿದ್ದಾರೆ.

ಜಾನುವಾರುಗಳನ್ನು ಬಯಲು ಜಾಗಗಳಲ್ಲಿ ಕಟ್ಟಿರುವ ಜನರು, ಬಯಲಿನಲ್ಲಿ ಆಕಳು, ಎಮ್ಮೆಗಳನ್ನು ಕಟ್ಟಿಹಾಕುತ್ತಿದ್ದಾರೆ. ಪ್ರವಾಹಕ್ಕೂ ಮೊದಲು ಜಾನುವಾರುಗಳು ಕೊಡ್ತಿದ್ದ ಅರ್ಧದಷ್ಟು ಹಾಲು ಈಗ ಕೊಡ್ತಿಲ್ಲ ಎಂದು ಹೈನುಗಾರಿಕೆಯನ್ನೇ ನಂಬಿ, ಜೀವನ ಸಾಗಿಸುತ್ತಿರುವ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಮುಧೋಳ, ಜಮಖಂಡಿ ತಾಲೂಕಿನಲ್ಲಿ ಹೆಚ್ಚಿನ ಜನರು ಹೈನುಗಾರಿಕೆ ಅವಲಂಬಿಸಿದ್ದು, ಹಸುಗಳು ಹಾಲು ಕೊಡುವುದನ್ನು ಕಡಿಮೆ ಮಾಡಿದೆ ಎಂದಿದ್ದಾರೆ.

ಒಂದೊತ್ತಿಗೆ 3ರಿಂದ4 ಲೀಟರ್ ಹಾಲು ಕೊಡ್ತಿದ್ದ ಎಮ್ಮೆಗಳು ಈಗ ದಿನಕ್ಕೆ ಒಂದೆರಡು ಲೀಟರ್ ಮಾತ್ರ ಕೊಡ್ತಿವೆ. ಜಿಲ್ಲಾಡಳಿತ ಕಬ್ಬಿನ‌ ಸ್ವಾಗಿ ಕೊಡುತ್ತಿದೆ. ಜಮೀನು ಮುಳುಗಿದ್ದರಿಂದ ಹಸಿಮೇವು ತರಲು ಸಾಧ್ಯವಾಗ್ತಿಲ್ಲ. ಇದರಿಂದ ಹಾಲು ಉತ್ಪಾದನೆ ಕುಂಠಿತವಾಗಿದೆ ಎಂದು ಹೈನುಗಾರರು ಅಳಲು ತೋಡಿಕೊಂಡಿದ್ದಾರೆ. ಬೆಳೆ ಮುಳುಗಿವೆ, ಮನೆಗೆ ನೀರು ನುಗ್ಗಿದೆ, ನಾವು ಕಾಳಜಿ ಕೇಂದ್ರದಲ್ಲಿ, ಜಾನುವಾರು ರಸ್ತೆ ಬದಿಯಲ್ಲಿವೆ ಎಂದು ಹೇಳಿದ್ದಾರೆ.

ಹಾಲಿನ ದುಡ್ಡಲ್ಲಿ ವಾರದ ಸಂತೆಯೂ ಆಗ್ತಿತ್ತು. ಈಗ ಅದಕ್ಕೂ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ ಹಾಲು ಉತ್ಪಾದನೆ ಕುಸಿತ ಕಂಡಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net