

ಗುಜರಾತ್: ಗುಜರಾತ್‌ನ ಕಕ್ರಾಪರ್‌ನಲ್ಲಿ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 700 MW ಪರಮಾಣು ವಿದ್ಯುತ್ ಸ್ಥಾವರವು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕಕ್ರಾಪರ್ ಪರಮಾಣು ವಿದ್ಯುತ್ ಯೋಜನೆಯಲ್ಲಿ (KAPP) ರಿಯಾಕ್ಟರ್ ಜೂನ್ 30 ರಂದು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಆದ್ರೆ, ಇದುವರೆಗೆ ಅದರ ಸಾಮರ್ಥ್ಯದ 90 ಪ್ರತಿಶತದಷ್ಟು ಕಾರ್ಯನಿರ್ವಹಿಸುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ, "ಭಾರತವು ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಗುಜರಾತ್‌ನಲ್ಲಿ ಮೊದಲ ಅತಿದೊಡ್ಡ ಸ್ಥಳೀಯ 700 MWe ಕಕ್ರಾಪರ್ ಪರಮಾಣು ವಿದ್ಯುತ್ ಸ್ಥಾವರ ಘಟಕ 3 ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ನಮ್ಮ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಿಗೆ ಅಭಿನಂದನೆಗಳು" ಎಂದು ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ತಿಳಿಸಿದ್ದಾರೆ.
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಎರಡು 700 MW ಒತ್ತಡದ ಭಾರೀ ನೀರಿನ ರಿಯಾಕ್ಟರ್‌ಗಳನ್ನು (PHWRs) ಕಕ್ರಾಪರ್‌ನಲ್ಲಿ ನಿರ್ಮಿಸುತ್ತಿದೆ. ಇದು ಎರಡು 220 MW ವಿದ್ಯುತ್ ಸ್ಥಾವರಗಳಿಗೆ ನೆಲೆಯಾಗಿದೆ. ಕೆಎಪಿಪಿ 4ರಲ್ಲಿ ವಿವಿಧ ಕಮಿಷನಿಂಗ್ ಚಟುವಟಿಕೆಗಳು ನಡೆಯುತ್ತಿದ್ದು, ಜುಲೈ ವೇಳೆಗೆ ಶೇ. 97.56 ಪ್ರಗತಿ ಸಾಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
NPCIL ದೇಶಾದ್ಯಂತ 16 700 MW PHWRಗಳನ್ನು ನಿರ್ಮಿಸಲು ಯೋಜಿಸಿದೆ ಮತ್ತು ಅದಕ್ಕಾಗಿ ಆರ್ಥಿಕ ಮತ್ತು ಆಡಳಿತಾತ್ಮಕ ಮಂಜೂರಾತಿಗಳನ್ನು ನೀಡಿದೆ. ರಾಜಸ್ಥಾನದ ರಾವತ್‌ಭಟದಲ್ಲಿ (RAPS 7 ಮತ್ತು 8) ಮತ್ತು ಹರಿಯಾಣದ ಗೋರಖ್‌ಪುರದಲ್ಲಿ (GHAVP 1 ಮತ್ತು 2) 700 MW ಪರಮಾಣು ವಿದ್ಯುತ್ ಸ್ಥಾವರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಸರ್ಕಾರವು ಫ್ಲೀಟ್ ಮೋಡ್‌ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 10 PHWRಗಳ ಕಟ್ಟಡವನ್ನು ಕರ್ನಾಟಕದ ಕೈಗಾ, ಹರಿಯಾಣದ ಗೋರಖ್‌ಪುರ, ಮಧ್ಯಪ್ರದೇಶದ ಚುಟ್ಕಾ, ರಾಜಸ್ಥಾನದ ಮಾಹಿ ಬನ್ಸ್ವಾರಾ ಸೇರಿದಂತೆ ನಾಲ್ಕು ಪ್ರದೇಶಗಳಿಗೆ ಮಂಜೂರು ಮಾಡಿದೆ,(ಏಜೆನ್ಸೀಸ್).