ಭಾರತ ಚಂದ್ರನನ್ನು ಯಶಸ್ವಿಯಾಗಿ ತಲುಪಿದೆ, ಈಗ ಸೂರ್ಯನತ್ತ ಸಾಗಲಿದೆ: ಗೃಹ ಸಚಿವ ಅಮಿತ್ ಶಾ

Untitled design - 2023-09-01T164438.459
Published on

ನವದೆಹಲಿ: ಭಾರತವು ಈಗ ತನ್ನ ಅಮೃತ ಕಾಲದಲ್ಲಿದೆ. ಚಂದ್ರಯಾನ-3 ಮಿಷನ್‌ನೊಂದಿಗೆ ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡಂರ್​ ಅನ್ನು ಯಶಸ್ವಿಯಾಗಿ ಲ್ಯಾಂಡಿಂಗ್​ ಮಾಡುವ ಮುಖೇನ ವಿಶೇಷ ಛಾಪನ್ನು ಮೂಡಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಮೃತ ಕಲಶ ಯಾತ್ರೆಯಲ್ಲಿ ಭಾಗಿಯಾಗಿ, ಭಾಷಣ ಮಾಡಿದ ಅಮಿತ್​ ಶಾ, ದೇಶದ ಹೆಮ್ಮೆಯ ಇಸ್ರೋ ಸಂಸ್ಥೆ ಯೋಜಿಸಿರುವ ಸೌರ ಮಿಷನ್ ಆದಿತ್ಯ ಎಲ್ 1 ಅನ್ನು ಉಡಾವಣೆ ಮಾಡಲು ಬೃಹತ್​ ಯೋಜನೆ ರೂಪಿಸಿದೆ. ಚಂದ್ರನ ಮೇಲೆ ಯಶಸ್ವಿ ಲ್ಯಾಂಡಿಂಗ್​ ಮಾಡಿದ ನಂತರ ಇಸ್ರೋ ಸೂರ್ಯನತ್ತ ಸಾಗುತ್ತಿದೆ ಎಂದು ಹೇಳಿದರು.

ವಿಕ್ರಮ್​ ಲ್ಯಾಂಡಂರ್​ ಅನ್ನು ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಸಿದ ಯುಎಸ್, ಚೀನಾ ಮತ್ತು ರಷ್ಯಾ ದೇಶಗಳ ನಂತರ ಭಾರತ ಇದೀಗ ನಾಲ್ಕನೇ ಸ್ಥಾನದಲ್ಲಿದೆ. ಇಸ್ರೋ ಸಂಸ್ಥೆ ಸೌರ ಮಿಷನ್ ಆದಿತ್ಯ ಎಲ್ 1 ಅನ್ನು ಸೆಪ್ಟೆಂಬರ್ 2 ರಂದು ಬೆಳಗ್ಗೆ 11:50ರ ವೇಳಗೆ ಉಡಾವಣೆ ಮಾಡಲು ಸಜ್ಜಾಗಿದೆ. ಇದು ಸೂರ್ಯನನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿರುವ ಭಾರತದ ಮೊದಲ ಸೌರ ಮಿಷನ್ ಆಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net