

ಮಂಗಳೂರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸಿದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರೋಗ್ರಾಂ (ಎಸ್‌ಪಿಪಿ)ನ ರಾಜ್ಯ ಮಟ್ಟದ ಸೆಮಿನಾರ್ ಮತ್ತು ಪ್ರದರ್ಶನದಲ್ಲಿ ಮಂಗಳೂರು ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್‌ನ ವಿದ್ಯಾರ್ಥಿಗಳು 3 ಬೆಸ್ಟ್ ಪ್ರಾಜೆಕ್ಟ್ ಆಫ್ ದಿ ಇಯರ್ ಪ್ರಶಸ್ತಿ ಗೆದ್ದಿದ್ದಾರೆ.
ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನ ಪ್ರದೀಪ್.ಬಿ.ಎಸ್.ಮಾರ್ಗದರ್ಶನದ ಪ್ರಾಜೆಕ್ಟ್ ಗುಂಪಿನ ಅನುಜ್ ಕುಮಾರ್, ಪೂಜಾ .ಪಿ.ಪೂಜಾರಿ, ಪ್ರತೀಕ್ಷಾ.ಪಿ.ಶೆಟ್ಟಿ ಮತ್ತು ಪ್ರತೀಕ್ಷಾ ಶೆಟ್ಟಿ ಅವರು ಮಂಡಿಸಿದ ಹಿಸ್ಕೊಪಾಥಾಲಜಿ ಚಿತ್ರಗಳಲ್ಲಿ ಸ್ತನ ಕ್ಯಾನ್ಸರ್ ಹೇಗೆ ಕಂಡುಹಿಡಿಯಬೇಕು ಕೆಲಸದ ಶೀರ್ಷಿಕೆ ಪ್ರಶಸ್ತಿ ಗಳಿಸಿದೆ.
ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗದ ತಂಡ ಸೌರ ಪಿವಿ ಸೆಲ್‌ಗಳಿಂದ ನಡೆಸಲ್ಪಡುವ ಸೂಪರ್‌ಕ್ಯಾಪಸಿಟರ್ ಸಂಗ್ರಹಣೆಯನ್ನು ಬಳಸುವ ವಿದ್ಯುತ್ ಸರಬರಾಜು ಪ್ರಕಲ್ಪ ಪ್ರಶಸ್ತಿ ಗಳಿಸಿದೆ. ಅದಿತಿ.ವಿ.ಶೆಟ್ಟಿ, ಆದಿಥ್ಯ ಎನ್ ಕಟೀಲ್, ಆಕಾಶ್ ಎನ್ ಸಾಲಿಯನ್ ಮತ್ತು ಹರ್ಷಿತಾ ಬಿ ತಂಡದ ಸದಸ್ಯರಾಗಿದ್ದು, ಡಾ.ವಿನಯಾಂಬಿಕಾ ಎಸ್ ಭಟ್ ಮತ್ತು ಡಾ. ರಾಘವೇಂದ್ರ ಸಾಗರ್ ಮಾರ್ಗದರ್ಶನ ನೀಡಿದ್ದರು.
ಇಸಿಇ ವಿಭಾಗದ ಸಂತೋಷ ಶಿರಹಟ್ಟಿ, ಪವನ್.ಎಲ್, ಪ್ರತೀತಿ ಮತ್ತು ಹೃತಿಕ್ ಮುಕ್ಕೋತ್ ಅವರನ್ನೊಳಗೊಂಡ ತಂಡವು ಪ್ರೊ. ಉದಯ್ ಜೆ ಅವರ ಮಾರ್ಗದರ್ಶನದಲ್ಲಿ ಸಿದ್ದ ಪಡಿಸಿದ ‘ಇಂಟಿಗ್ರೇಟೆಡ್ ಟಾಯ್ಲೆಟ್ ಸಿಸ್ಟಂನೊಂದಿಗೆ ವೈದ್ಯಕೀಯ ಹಾಸಿಗೆ ಯೋಜನೆ ಪ್ರಶಶ್ತಿ ಗಳಿಸಿದೆ.
ಸತತ ಐದು ವರ್ಷಗಳಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಸಂಸ್ಥೆಯ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ರಾಜಲಕ್ಷ್ಮಿಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ರಾಜೇಶ್ ಚೌಟ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ವಿಶ್ವ ದರ್ಜೆಯ ಶೈಕ್ಷಣಿಕ ವಾತಾವರಣವನ್ನು ತಲುಪಿಸುವ ಸಂಸ್ಥೆಯ ಪ್ರಮುಖ ಗುರಿಯೊಂದಿಗೆ ಸುಧಾರಿತ ಮೂಲಸೌಕರ್ಯವನ್ನು ಸ್ಥಾಪಿಸುವಲ್ಲಿ ಸಂಸ್ಥೆಯು ಮಾಡಿದ ಪ್ರಗತಿ ಗಮನಾರ್ಹ ಎಂದು ಅವರು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ 20 ಕ್ಕೂ ಹೆಚ್ಚು ಯೋಜನೆಗಳಿಗೆ ಅನುದಾನ ಮತ್ತು ಒಟ್ಟು 11 ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿಗಳನ್ನು ಗಳಿಸಿದೆ ಎಂದು ಎಸ್‌ಪಿಪಿ ಕಾಲೇಜು ಸಂಯೋಜಕ ಪ್ರೊ. ಅಜಿತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.