

ಚಾಮರಾಜನಗರ: ಬೇಸಿಗೆ ಆರಂಭಕ್ಕೂ ಮುನ್ನವೇ ಬಂಡೀಪುರ ಅರಣ್ಯದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ನೂರಾರು ಎಕರೆ ಕಾಡು ಹಾನಿಯಾಗಿದೆ.
ಜಿ.ಎಸ್.ಬೆಟ್ಟ ವ್ಯಾಪ್ತಿಯ ಮೂರ್ಕಲ್ ಗುಡ್ಡದಲ್ಲಿ ಶನಿವಾರ ಸಂಜೆ ಬೆಂಕಿ ಬಿದ್ದಿದ್ದು, ಬೆಂಕಿಯ ಕೆನ್ನಾಲಗೆಗೆ ಅರಣ್ಯ ಹೊತ್ತು ಉರಿಯುತ್ತಿದ್ದು, ರಾತ್ರಿ 8 ಗಂಟೆಯಾದರೂ ನಿಯಂತ್ರಣ ಸಾಧ್ಯವಾಗಿರಲಿಲ್ಲ. ಇದನ್ನೂ ಓದಿರಿ ಸೆಕ್ಸ್ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ
ಅರಣ್ಯದಲ್ಲಿ ಬೆಂಕಿ ಅವಘಡ ತಡೆಯಲು ಅರಣ್ಯ ಸಿಬ್ಬಂದಿ ಬೆಂಕಿ ರೇಖೆ ನಿರ್ಮಿಸುತ್ತಿದ್ದರು. ಈ ವೇಳೆ ಚೌಡಹಳ್ಳಿ ಬಳಿಯ ಮೂರ್ಕಲ್ ಗುಡ್ಡದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ನೂರಾರು ಎಕರೆ ಅರಣ್ಯಕ್ಕೆ ವ್ಯಾಪಿಸಿದೆ. ಬೆಂಕಿಯ ತ್ರೀವತೆ ಹೆಚ್ಚಿದ್ದು, ಮತ್ತಷ್ಟು ಹಬ್ಬುವ ಸಾಧ್ಯತೆ ಇದೆ.
ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಕಾಡಿಗೆ ಬೆಂಕಿ ಬಿದ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.