ಪ್ರೀತಿಯ ನಾಯಿಗೆ ಸ್ನಾನ ಮಾಡಿಸಲು ಹೋದ ಅಣ್ಣ-ತಂಗಿ ದುರ್ಮರಣ!

death- dog case
Published on

ಬೆಂಗಳೂರು: ಪ್ರೀತಿಯಿಂದ ಸಾಕಿದ್ದ ನಾಯಿಗೆ ಸ್ನಾನ ಮಾಡಿಸಲೆಂದು ಅಣ್ಣ-ತಂಗಿ ಇಬ್ಬರೂ ಹೋಗಿದ್ದರು. ಅಲ್ಲೇ ಕುಳಿತಿದ್ದ ಜವರಾಯ ಅವರಿಬ್ಬರ ಪ್ರಾಣ ಹೊತ್ತೊಯ್ದಿದ್ದು, ತನ್ನ ಮಾಲೀಕರು ಕಾಣಿಸುತ್ತಿಲ್ಲ ಎಂದು ಆ ಮೂಕಜೀವಿ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು...

ಇಂತಹ ಘಟನೆ ಬೆಟ್ಟ ಹಲಸೂರಿನ ಬಳಿ ಶನಿವಾರ ಸಂಭವಿಸಿದೆ. ಇಲ್ಲಿನ ಕಲ್ಲು ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ಸಾಕುನಾಯಿಯ ಮೈತೊಳೆಯಲೆಂದು ಪ್ರೇಮ್ ಕುಮಾರ್ ಮತ್ತು ಈತನ ತಂಗಿ ಜೆನ್ನಿಫರ್ ಹೋಗಿದ್ದರು. ಇದನ್ನೂ ಓದಿರಿ ರಾಜಕೀಯ ತುಂಬಾ ಕಷ್ಟ… ಎಂದ ಅಣ್ಣಾಮಲೈ!

ನಾಯಿಗೆ ಸ್ನಾನ ಮಾಡಿಸುತ್ತಿದ್ದ ಜೆನ್ನಿಫರ್​ ನಿಯಂತ್ರಣತಪ್ಪಿ ನೀರಿಗೆ ಬಿದ್ದಳು. ತಂಗಿಯನ್ನು ಕಾಪಾಡಲು ನೀರಿಗೆ ಧುಮುಕಿದ ಪ್ರೇಮ್ ಕುಮಾರ್ ಕೂಡ ವಾಪಸ್​ ಬರಲಿಲ್ಲ. ಇಬ್ಬರೂ ನೀರಲ್ಲಿ ಮುಳುಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಚಿಕ್ಕಜಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಸಂಜೆ 6.30 ಆದರೂ ಸಿಕ್ಕಿರಲಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net