ಮನೆಯಲ್ಲಿ ಎಸಿ ಸ್ಫೋಟ: ಓರ್ವ ಮಹಿಳೆ ಸಾವು, ಬಾಲಕನಿಗೆ ತೀವ್ರ ಗಾಯ

ac blast woman died
Published on

ಚಿಮಕುರ್ತಿ: ಎಸಿ ಸ್ಫೋಟಗೊಂಡು ಮಹಿಳಾ ಉದ್ಯೋಗಿಯೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಚಿಮಕುರ್ತಿಯಲ್ಲಿ ನಡೆದಿದೆ.

ಶ್ರೀದೇವಿ(52) ಮೃತ ದುರ್ದೈವಿಯಾಗಿದ್ದು, ಆಕೆಯ ಮಗ ಸಾಯಿತೇಜ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತ ಮಹಿಳೆಯು ಒಂಗೋಲು ಜಿಲ್ಲಾ ಪಂಚಾಯತಿ​ ಕಚೇರಿಯ ಪಿ.ಎಫ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು.

ಇದೇ ತಿಂಗಳ 28ರಂದು ರಾತ್ರಿ ತಾಯಿ ಮತ್ತು ಮಗ ಮನೆಯಲ್ಲಿ ಮಲಗಿದ್ದ ವೇಳೆ ತಡರಾತ್ರಿ ಹೈವೋಲ್ಟೇಜ್ ವಿದ್ಯುತ್ ಪೂರೈಕೆಯಿಂದಾಗಿ ಎಸಿ ಸ್ಫೋಟಗೊಂಡು ಇಬ್ಬರೂ ತೀವ್ರ ಅಸ್ವಸ್ಥಗೊಂಡಿದ್ದರು. ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ಅಕ್ಕಪಕ್ಕದವರು ತಾಯಿ ಹಾಗೂ ಮಗನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಒಂಗೋಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾಳೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net