More

    ಪ್ರಾರಂಭೋತ್ಸವಕ್ಕೆ ಮೆರುಗು ತಂದ ಚಿಣ್ಣರು; ಗುಲಾಬಿ, ಸಿಹಿ ಕೊಟ್ಟು ಸ್ವಾಗತಿಸಿದ ಶಿಕ್ಷಕರು

    ಹಾವೇರಿ: ಬೇಸಿಗೆ ರಜೆ ಮುಕ್ತಾಯಗೊಂಡು ಬುಧವಾರ ಶಾಲೆಗಳು ಪ್ರಾರಂಭಗೊಂಡಿದ್ದು, ಶಾಲೆ ಪ್ರಾರಂಭೋತ್ಸವದ ನಿಮಿತ್ತ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಮೊದಲ ದಿನ ಶಾಲೆಗೆ ಬರುವ ಮಕ್ಕಳಿಗೆ ಶಿಕಷಕರು ಗುಲಾಬಿ ಹೂವು, ಸಿಹಿ ತಿನಿಸು ಕೊಟ್ಟು ಆತ್ಮೀಯವಾಗಿ ಬರಮಾಡಿಕೊಂಡರು. ಜಿಲ್ಲೆಯ ಅನೇಕ ಸರ್ಕಾರಿ ಶಾಲೆಗಳು ತಳಿರು- ತೋರಣಗಳಿಂದ ಸಿಂಗಾರಗೊಂಡಿದ್ದವು. ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಶಿಕ್ಷಕರು ಹಾಗೂ ಸಿಬ್ಬಂದಿ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದರು. ಬುಧವಾರ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಹೂವು, ಫೇಡೆ ಕೊಟ್ಟು ಸಂತಸದಿಂದ ಸ್ವಾಗತಿಸಿದರು. ಶಾಲೆಗೆ ಆಗಮಿಸಿದ ಮಕ್ಕಳಿಗೆ ಪಠ್ಯಪುಸ್ತಕ, ಪ್ರೌಢಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಬೆಳಗ್ಗೆ ಹಾಲು, ಮಧ್ಯಾಹ್ನ ಬಿಸಿಯೂಟಕ್ಕೆ ಪಾಯಸ, ಅನ್ನ- ಸಾರು ನೀಡಲಾಯಿತು.

    ಇಂದಿನಿಂದ ಜಾಗೃತಿ ಜಾಥಾ
    ಮೊದಲ ದಿನ ಶಾಲೆಗಳಿಗೆ ಎಲ್ಲ ಮಕ್ಕಳು ಬಂದಿರಲಿಲ್ಲ. ಹಂತ ಹಂತವಾಗಿ ಶಾಲೆಗೆ ಬರುತ್ತಾರೆ. ಮಕ್ಕಳನ್ನು ಶಾಲೆಗೆ ಸೆಳೆಯಲು ಗುರುವಾರದಿಂದ ಆಯಾ ಗ್ರಾಮಗಳಲ್ಲಿ, ಬಡಾವಣೆಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಡಿಡಿಪಿಐ ಬಿ.ಎಸ್.ಜಗದೀಶ್ವರ ‘ವಿಜಯವಾಣಿ’ಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts