More

  ‘ಟಗರುಪಲ್ಯ’ ಚಿತ್ರೀಕರಣ ಮುಕ್ತಾಯ, ನಮ್ಮ ಮಣ್ಣಿನ ಕಥೆಯೊಂದನ್ನು ನಿರ್ಮಿಸಿದ ಹೆಮ್ಮೆ: ಡಾಲಿ ಧನಂಜಯ

  ಬೆಂಗಳೂರು: ನಟ ರಾಕ್ಷಸ, ಡಾಲಿ ಧನಂಜಯ ನಿರ್ಮಾಣ ಸಂಸ್ಥೆಯ ಅಡಿ ಅರಳಿದ ಮೂರನೇ ಚಿತ್ರ “ಟಗರುಪಲ್ಯ” ಚಿತ್ರೀಕರಣ ಇಂದು ಮುಕ್ತಾಯಗೊಂಡಿದೆ.

  “ಟಗರುಪಲ್ಯ ಚಿತ್ರೀಕರಣ ಮುಕ್ತಾಯ. ನಮ್ಮ ಮಣ್ಣಿನ ಕಥೆಯೊಂದನ್ನು ನಿರ್ಮಿಸಿದ ಹೆಮ್ಮೆ. ಕನ್ನಡಕ್ಕೊಬ್ಬ ಹೊಸ ಪ್ರತಿಭಾನ್ವಿತ ನಿರ್ದೇಶಕ, ನಾಯಕನಾಗಿ ನಾಗಭೂಷಣ, ನಾಯಕಿಯಾಗಿ ಅಮೃತಾ ಪ್ರೇಮ್ ಮತ್ತು ಹೊಸ ಪ್ರತಿಭಾನ್ವಿತರ ದಂಡು, ಜತೆಗೆ ರಂಗಾಯಣ ರಘು ಸರ್ , ತಾರಮ್ಮ, ಬಿರಾದರ್ ಅವರಂತಹ ಮೇರು ಕಲಾವಿದರ ಹೆಗಲು. ಸದ್ಯದಲ್ಲೆ ನಿಮ್ಮ ಮುಂದೆ” ಎಂದು ನಟ ಧನಂಜಯ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದು ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ:  ಮುಂದಿನ ಚಿತ್ರಗಳ ಯಶಸ್ಸಿಗೆ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ ನಟಿ ರಚಿತಾ ರಾಮ್

  ನಟ ಧನಂಜಯ ನಿರ್ಮಾಣ ಸಂಸ್ಥೆಯಾದ “ಡಾಲಿ ಪಿಕ್ಚರ್ಸ್” ಮುಖೇನ ಅಭಿಮಾನಿಗಳ ಮುಂದೆ ಹಾಜರಾಗಲು ಸಿದ್ದವಿರುವ ಟಗರುಪಲ್ಯ ಚಿತ್ರ, ಸೆಟ್ಟೇರಿದ ಮೊದಲ ದಿನದಿಂದಲೂ ಸಾಕಷ್ಟು ಸದ್ದು ಮಾಡಿದೆ. ಈ ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತ ಪ್ರೇಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
  ಈ ಚಿತ್ರದ ಮೂಲಕ ಅಮೃತ ಪ್ರೇಮ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರದಲ್ಲಿ ಮಂಡ್ಯ ಹುಡುಗಿಯಾಗಿ ಮಿಂಚಿರುವ ಅಮೃತ, ಮಂಡ್ಯ ಸೊಗಡಿನ ಭಾಷೆಯನ್ನು ಕಲಿತು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಈ ಹಿಂದೆ ಚಿತ್ರತಂಡ ಹೇಳಿತ್ತು.

  ಇದನ್ನೂ ಓದಿ: ಮಗುವಿನ ನಿರೀಕ್ಷೆಯಲ್ಲಿ 83 ವರ್ಷದ ನಟ, ಗೆಳತಿಯ ವಯಸ್ಸು 29!

  ನಾಯಕ ನಟನಾಗಿ ಡಾಲಿ ಧನಂಜಯ ಸ್ನೇಹಿತ, ‘ಇಕ್ಕಟ್’ ಖ್ಯಾತಿಯ ನಾಗಭೂಷಣ್ ನಟಿಸಿದ್ದಾರೆ. ಟಗರುಪಲ್ಯ ಚಿತ್ರ ಯಾವಾಗ ತೆರೆಯ ಮೇಲೆ ಹಾಜರಾಗಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts